ಅದ್ಬುತವ್ಯಕ್ತಿತ್ವದ ವೈದ್ಯರಾಗಿದ್ದ ಡಾ.ಬಿ. ಸಿ. ರಾಯ್ ಅವರ ಜನ್ಮದಿನದಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ. ಇಂದು ಹಲವಾರು ದೇಶಗಳಲ್ಲಿ ಭಾರತೀಯ ವೈದ್ಯರ ಸೇವೆ ಮಹತ್ತರವಾದುದು. ಪಾಶ್ಚಾತ್ಯ ದೇಶಗಳಲ್ಲಂತೂ ಭಾರತೀಯ ವೈದ್ಯರ ಸೇವೆಯಲ್ಲಿ ಬಹು ದೊಡ್ಡ ಭಾಗವಾಗಿದೆ.
ಸಾವಿರಾರು ವರ್ಷಗಳ ಹಿಂದೆ ಕೂಡಾ ಆ ಕಾಲದ ವಿಜ್ಞಾನಿಗಳಾದ ನಮ್ಮ ಋಷಿಮುನಿಗಳು ಇಡೀ ವಿಶ್ವಕ್ಕೆ ವೈದ್ಯಕೀಯ ವಿಜ್ಞಾನವನ್ನು ನೀಡಿದ್ದರು. ಅದು ಯಾವುದೇ ತಂತ್ರಜ್ಞಾನವಿರಲಿ; ಅದರ ಇತಿಹಾಸವನ್ನು ಕೆದಕುತ್ತ ಹೋದರೆ ಅದು ಪ್ರಾರಂಭವಾಗಿದ್ದು ಭಾರತದಲ್ಲಿ ಎಂಬುದು ತಿಳಿಯುತ್ತದೆ. ನಂತರ ಅದು ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುತ್ತ ಹೋಯಿತು. ಭಾರತ ಹಿಂದೆಯೇ ಉಳಿಯಿತು. ಆದರೆ, ವೈದ್ಯಕೀಯ ವಿಜ್ಞಾನವು ಸಾಮಾನ್ಯವಾಗಿ ಹಿಂದುಳಿದಂತೆ ಕಂಡರೂ ಇಂದಿಗೂ ಬಹಳಷ್ಟು ಸಮಸ್ಯೆಗಳಿಗೆ ಭಾರತೀಯ ವೈದ್ಯಕೀಯ ವಿಜ್ಞಾನದಲ್ಲೇ ಸ್ಪಷ್ಟ ಚಿತ್ರಣ ಸಿಗುತ್ತದೆ.
ಆಚಾರ್ಯ ಸುಶ್ರುತರನ್ನು ಭಾರತೀಯ ಶಸ್ತ್ರಚಿಕಿತ್ಸಾ ಪಿತಾಮಹ ಎಂದು ಕರೆಯುತ್ತಾರೆ. ಆದರೆ, ಸರಿಯಾಗಿ ಗಮನಿಸಿದರೆ ಅವರು ಇಡೀ ಜಗತ್ತಿಗೆ ಶಸ್ತ್ರಚಿಕಿತ್ಸಾ ಪಿತಾಮಹರು. ಪ್ಲಾಸ್ಟಿಕ್ ಸರ್ಜರಿ ಎಂದರೆ, ಇಂದಿನ ಕಾಲದ ಶ್ರೀಮಂತರ ಫ್ಯಾಶನ್ ಎಂದು ನಮಗನ್ನಿಸುತ್ತದೆ. ಆದರೆ, ನಮ್ಮ ದೇಶದ ಒಬ್ಬ ಸಾಮಾನ್ಯ ಮನುಷ್ಯ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದನ್ನು ನೋಡಿ ಅವಾಕ್ಕಾದ ಬ್ರಿಟಿಷರು ಭಾರತದಿಂದ ಈ ಜ್ಞಾನವನ್ನು ಒಯ್ದರು ಎಂಬುದು ಗೊತ್ತಿರುವ ಸಂಗತಿಯೇ.
ಕ್ರಿಸ್ತಪೂರ್ವ 6 ನೇ ಶತಮಾನದಲ್ಲಿ ಬರೆಯಲ್ಪಟ್ಟ ಸುಶ್ರುತ ಸಂಹಿತೆಯಲ್ಲಿ ಅನೇಕ ರೀತಿಯ ಶಸ್ತ್ರಚಿಕಿತ್ಸೆಗಳ ವಿವರಣೆಯಿದೆ. ಕರುಳು ತೂತಾದಾಗ (ಜ್ಞಿಠಿಛಿಠಠಿಜ್ಞಿಚ್ಝ ಟಛ್ಟಿ್ಛ್ಟಠಿಜಿಟ್ಞ) ಯಾವ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಬೇಕೆಂಬ ವಿವರಣೆಯೂ ಇದೆಯೆಂದರೆ ಎಷ್ಟು ಆಳವಾದ ಜ್ಞಾನ ನಮ್ಮಲ್ಲಿತ್ತು ಎಂಬುದನ್ನು ಅಂದಾಜಿಸಬಹುದು.
ಆಚಾರ್ಯ ಚರಕ, ವಾಗ್ಭಟ, ಶಾರಂಗ್ಧರ, ನಿಮಿ, ಭಾವಪ್ರಕಾಶ, ಕಶ್ಯಪ, ಮಾಧವ, ಚಕ್ರಪಾಣಿ, ಹಾರೀತ, ಭೇಲ, ನಾಗಾರ್ಜುನ ಹೀಗೆ ಸುಲಭಕ್ಕೆ ಲೆಕ್ಕಕ್ಕೆ ಸಿಗದಷ್ಟು ಋಷಿಗಳು ತಮ್ಮ ತಮ್ಮ ಗ್ರಂಥಗಳಲ್ಲಿ ವೈದ್ಯಕೀಯ ವಿಜ್ಞಾನವನ್ನು ವಿವರಿಸಿದ್ದಾರೆ. ಎಷ್ಟೋ ಗ್ರಂಥಗಳು ಘಜ್ನಿ, ಘೊರಿ, ಮೊಘಲರ ದಾಳಿಯ ಸಂದರ್ಭದಲ್ಲಿ ನಾಶವಾಗಿ ಹೋದರೂ ಇಂದು ಲಭ್ಯವಿರುವ ಗ್ರಂಥಗಳಲ್ಲೇ ಇಡೀ ಜಗತ್ತಿಗೆ ಸಾಕಾಗುವಷ್ಟು ಜ್ಞಾನ ಇದೆ.
ಒಬ್ಬೊಬ್ಬರೂ ಒಂದೊಂದು ವಿಷಯದ ಬಗ್ಗೆ ಆಳವಾಗಿ ವಿವರಿಸಿದ್ದಾರೆ. ಈ ಗ್ರಂಥಗಳಲ್ಲಿ, ಆಯುರ್ವೆದ ಶಾಸ್ತ್ರದ್ದೇ ಆದ ಫಿಸಿಯೋಲೊಜಿ, ಪೆಥಾಲಜಿ, ಬಯೋಕೆಮಿಸ್ಟ್ರಿ, ಫಾರ್ವಕೊಲೊಜಿ ಮತ್ತು ಚಿಕಿತ್ಸಾ ರೀತಿಗಳಿವೆ. ಅಂದರೆ, ಆಧುನಿಕ ವೈದ್ಯ ಪದ್ಧತಿಯಂತೆ ರೋಗ ಪತ್ತೆ ಮಾಡಿ, ಒಂದು ಗಿಡಮೂಲಿಕೆಯ ಔಷಧ ಕೊಡುವುದು ಆಯುರ್ವೆದವಲ್ಲ. ಬುಡದಿಂದ ತುದಿಯವರೆಗೆ ಭಾರತೀಯ ವೈದ್ಯ ಪದ್ಧತಿಯಲ್ಲೇ ವಿವರಣೆಯಿದೆ. ಇನ್ನೂ ವಿಶೇಷವೆಂದರೆ, ಭಾರತೀಯ ವೈದ್ಯ ಗ್ರಂಥಗಳಲ್ಲಿ ರೋಗ ಗುಣಪಡಿಸುವುದರ ಬಗ್ಗೆ ಎಷ್ಟು ವಿವರಣೆಯಿದೆಯೋ ಅಷ್ಟೇ ವಿವರಣೆ ರೋಗ ಬರದಂತೆ ತಡೆಯುವ ಬಗ್ಗೆ ಸೂಚನೆಗಳೂ ಇವೆ.
ದಿನಚರ್ಯ, ಋತುಚರ್ಯ, ಉತ್ತಮ ಸಂತಾನಕ್ಕೆ ಅನುಸರಿಸಬೇಕಾದ ವಿಧಾನಗಳು, ಆಹಾರ ಪದ್ಧತಿ, ಗುಣದಲ್ಲಿ ಬದಲಾವಣೆ ತರುವಂಥ ಸಂಸ್ಕಾರಗಳು ಹೀಗೆ ಹಲವಾರು ರೀತಿಯಲ್ಲಿ ಆರೋಗ್ಯವನ್ನು ಕಾಪಾಡುವುದಕ್ಕೆ ಮಾಡಬೇಕಾದ ಎಲ್ಲ ವಿಷಯಗಳನ್ನೂ ಹೇಳಿದ್ದಾರೆ. ನಾವು ಇತ್ತೀಚೆಗೆ ಮನಸ್ಸಿಗೂ ರೋಗಗಳಿಗೂ ಇರುವ ಸಂಬಂಧವನ್ನು ಅರ್ಥಮಾಡಿಕೊಂಡಿದ್ದೇವೆ. ಆದರೆ ಅವರು ಆ ಕಾಲದಲ್ಲೇ ಮನಸ್ಸು, ಮನಸ್ಸಿನ ಗುಣಗಳು, ಅದಕ್ಕೆ ಬರುವಂಥ ರೋಗಗಳು ಮತ್ತು ಅದಕ್ಕೆ ಪರಿಹಾರವನ್ನೂ ಹೇಳಿದ್ದರು!
ಇಷ್ಟೆಲ್ಲಾ ಹೇಳಿದರೂ ನಮಗೆಲ್ಲಾ ಕಾಡುವ ಯೋಚನೆಯೊಂದೇ. ಇವೆಲ್ಲಾ ವೈಜ್ಞಾನಿಕವೇ ಎಂದು. ಅದಕ್ಕೆ ಕಾರಣ ಆಧುನಿಕ ವಿಜ್ಞಾನ ಒಪ್ಪುವವರೆಗೂ ಅದು ಸತ್ಯ ಎಂದು ನಂಬಲಾಗದ ನಮ್ಮ ಮನಸ್ಥಿತಿ. ಆದರೆ, ನಮ್ಮ ಋಷಿಮುನಿಗಳು ಹೇಳಿದ ವಿಷಯಗಳನ್ನು ಇಂದು ಆಧುನಿಕ ವಿಜ್ಞಾನವು ಅದು ಸರಿಯಾದುದ್ದಾಗಿತ್ತು ಎಂದು ಅರ್ಥ ಮಾಡಿಕೊಳ್ಳುತ್ತಿದೆ. ವಿಜ್ಞಾನಕ್ಕೆ ಅದು ಅರ್ಥವಾಗುವವರೆಗೆ ಅದು ಅವೈಜ್ಞಾನಿಕ ಎಂದು ನಮಗನ್ನಿಸುತ್ತದೆ ಅಷ್ಟೆ. ಉದಾಹರಣೆಗೆ, ಸಾವಿರಾರು ವರ್ಷಗಳ ಮೊದಲೇ ಉಪವಾಸದ ಬಗ್ಗೆ ಆಯುರ್ವೆದ ಗ್ರಂಥಗಳಲ್ಲಿ ಎಲ್ಲವನ್ನೂ ಹೇಳಿದ್ದರೂ ಅದು ಸತ್ಯವಾಗಿತ್ತು ಎಂಬುದು ಇತ್ತೀಚೆಗೆ ಅರ್ಥವಾಗಿದೆ. ಅದನ್ನು ಸಾಬೀತುಪಡಿಸಿದ ಜಪಾನ್ ವಿಜ್ಞಾನಿ ಯೋಶಿನೋರಿಗೆ ವೈದ್ಯಕೀಯ ನೊಬೆಲ್ ಕೂಡಾ ಸಿಕ್ಕಿದೆ.
ಸಾವಿರಾರು ವಿಷಯಗಳಲ್ಲಿ ಆಧುನಿಕ ಜಗತ್ತು ಇಂದಿಗೂ ಅರ್ಥಮಾಡಿಕೊಳ್ಳಲಾಗದ್ದನ್ನು ನಮ್ಮ ಋಷಿಗಳು ಹೇಳಿದ್ದರು ಎಂಬುದು ನಮಗೆ ಅರ್ಥವಾಗುತ್ತದೆ. ಆದರೆ, ಇದನ್ನು ಗುರುತಿಸುವ ಕೆಲಸ ಜಗತ್ತಿನಲ್ಲೆಲ್ಲೂ ಆಗುತ್ತಿಲ್ಲ.
ರಾಷ್ಟ್ರೀಯ ವೈದ್ಯರ ದಿನದ ಈ ಸಂದರ್ಭದಲ್ಲಿ ಅದ್ಭುತ ವೈದ್ಯರಾಗಿದ್ದ ಡಾ.ಬಿ. ಸಿ. ರಾಯ್ ಅವರನ್ನು ಮತ್ತು ವೈದ್ಯಕೀಯ ವಿಜ್ಞಾನವನ್ನು ಜಗತ್ತಿಗೆ ಕೊಟ್ಟು ಉಪಕರಿಸಿದ ನಮ್ಮ ಋಷಿಮುನಿಗಳನ್ನು ನೆನೆಯೋಣ. ಇಡೀ ಜಗತ್ತು ವೈದ್ಯಕೀಯವಾಗಿ ಸಂದಿಗ್ಧದಲ್ಲಿರುವ ಈ ಸಂದರ್ಭದಲ್ಲಿ ಅವರ ಆಶೀರ್ವಾದ ಎಲ್ಲ ವೈದ್ಯರುಗಳ ಮೇಲಿರಲಿ ಎಂದು ಪ್ರಾರ್ಥಿಸೋಣ.
| ಡಾ. ವೆಂಕಟ್ರಮಣ ಹೆಗಡೆ ಶಿರಸಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + twenty =
Remember me
