ಅಪ್ರತಿಮ ದೇಶ ಭಕ್ತಿಯ ಪ್ರತೀಕ ನಮ್ಮ ಸೇನೆಯ ಯೋಧರು. ಕರ್ತವ್ಯನಿಷ್ಠೆ ಮತ್ತು ಶಿಸ್ತುಬದ್ಧ ಜೀವನಕ್ಕೆ ಪ್ರಾಶಸ್ತ್ಯರುವ ಸೇನೆಯಲ್ಲಿ ಕೆಲವು ಇತರ ವಿಶೇಷಗಳ ಬಗ್ಗೆ ತಿಳಿದು ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ನೆಲೆಸಿದ ನೆಲ ಸ್ವರ್ಗವಾಗುವುದರಲ್ಲಿ ಸಂದೇಹವಿಲ್ಲ. ಭಾರತೀಯ ಸೇನೆ ತನ್ನ ತೆಕ್ಕೆಯಲ್ಲಿ ಅನೇಕ ವಿಶೇಷ ಇರಿಸಿಕೊಂಡಿದೆ. ಅವೇನು?

| ಜಿ. ಕಲ್ಪನಾ, ಬೆಂಗಳೂರು
ಅನಾದಿ ಕಾಲದಿಂದ ಯುದ್ಧಗಳು ನಡೆದಿರುವುದು ಎಲ್ಲರಿಗೂ ತಿಳಿದ ವಿಚಾರ. ಯುದ್ಧವೆಂದರೆ ಹಿಂಸೆ, ಕಪಟತನವೇ ಮನಸ್ಸಿಗೆ ಥಟ್ಟಂತ ಹೊಳೆಯುವುದು. ನಮ್ಮ ಧರ್ಮಗ್ರಂಥಗಳು, ಪುರಾಣ, ಶಾಸನಗಳಲ್ಲಿ ಯುದ್ಧತಂತ್ರ, ಯುದ್ಧನೀತಿಗಳ ಉಲ್ಲೇಖವಿದೆ. ಧನುರ್ವೆದವೆಂಬ ಯಜುರ್ವೆದದ ಉಪವೇದದಲ್ಲಿ ಯುದ್ಧದ ನಿಯಮಗಳು, ನಿಬಂಧನೆಗಳು, ರೀತಿನೀತಿಗಳ ವಿವರವಿದೆ. ಮನು ಸ್ಮೃತಿಯಲ್ಲಿ ದಂಡನೀತಿಯ ಬಗ್ಗೆ ಮಾಹಿತಿಯಿದೆ. ಯುದ್ಧಗಳನ್ನು ಗೆಲ್ಲಲು ಕಾರ್ಯತಂತ್ರಗಳನ್ನು ಬಳಸುವುದು ಎಲ್ಲರಿಗೂ ತಿಳಿದ ವಿಷಯ.
ದೇಶಭಕ್ತಿಯ ಧ್ಯೇಯ ವಾಕ್ಯ: ಸೇನೆಯಲ್ಲಿ ಹಲವು ಅಂಗಗಳಿವೆ. ಪ್ರತಿ ಅಂಗಕ್ಕೂ ದೇಶಭಕ್ತಿಯ ಕಿಚ್ಚೆಬ್ಬಿಸುವ ಪ್ರತ್ಯೇಕ ಧ್ಯೇಯ ವಾಕ್ಯವಿದೆ. ಬಹುತೇಕ ಧ್ಯೇಯ ವಾಕ್ಯಗಳು ಸಂಸ್ಕೃತ ಭಾಷೆಯ ಮೂಲ ಹೊಂದಿವೆ. ಕೆಲವು ಭಗವದ್ಗೀತೆಯಿಂದ ಆಯ್ದ ಪದಪುಂಜಗಳು. ಉದಾಹರಣೆಗೆ, 11ನೇ ಗೋರ್ಖಾ ರೈಫಲ್ಸ್​ನ ಧ್ಯೇಯ ವಾಕ್ಯ ‘ಯತ್ರಹಂ ವಿಜಯಸ್ತತ್ರ’ ಎಂದರೆ ನಾವೆಲ್ಲಿದ್ದೇವೋ ಅಲ್ಲಿ ವಿಜಯ. ಮದ್ರಾಸ್ ರೆಜಿಮೆಂಟ್​ನ ಧ್ಯೇಯ ವಾಕ್ಯ ‘ಸ್ವಧಮೇ ನಿಧನಂ ಶ್ರೇಯಃ’ ಎಂದರೆ ಕರ್ತವ್ಯದಲ್ಲಿ ಮರಣ ಹೊಂದುವುದೇ ಶ್ರೇಷ್ಠ. ರಾಜ್​ಪುತಾನಾ ರೈಫಲ್ಸ್​ನ ಧ್ಯೇಯ ವಾಕ್ಯ ‘ವೀರ್ ಭೋಗ್ಯ ವಸುಂಧರ’ ಎಂದರೆ ವೀರರು ಭೂಮಿಯ ವಾರಸುದಾರರು. ನಾಗಾ ರೆಜಿಮೆಂಟ್​ನ ಧ್ಯೇಯ ವಾಕ್ಯ ‘ಪರಾಕ್ರಮೋ ವಿಜಯತೇ’ ಇದರರ್ಥ ಪರಾಕ್ರಮಿಗಳು ವಿಜಯಿಗಳಾಗುತ್ತಾರೆ. 47ನೇ ಆಮ್್ಡರ್ ರೆಜಿಮೆಂಟ್​ನ ಧ್ಯೇಯ ವಾಕ್ಯ ‘ಸರ್ವತ್ರ ವಿಜಯ’ ಎಂದರೆ ಎಲ್ಲೆಡೆ ವಿಜಯ. ದೋಗ್ರಾ ರೆಜಿಮೆಂಟ್​ನ ಧ್ಯೇಯ ವಾಕ್ಯ ‘ಕರ್ತವ್ಯಂ ಅನ್ವಾತ್ಮ’ ಎಂದರೆ ಸಾವಿಗಿಂತ ಮೊದಲು ಕರ್ತವ್ಯ. ಬಾರ್ಡರ್ ರೋಡ್ ಸಂಸ್ಥೆಯ ಧ್ಯೇಯ ವಾಕ್ಯ ‘ಶ್ರಮೇಣ ಸರ್ವಂ ಸಾಧ್ಯಂ’. ‘ಬಲಿದಾನಂ ವೀರ ಲಕ್ಷಣಂ’ ಎಂಬುದು ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಪೆಂಟ್ರಿಯ ಧ್ಯೇಯ ವಾಕ್ಯ. ಈ ಪದಗಳನ್ನು ಕೇಳಿದ ಮಾತ್ರಕ್ಕೆ ದೇಶಭಕ್ತಿ ನರನಾಡಿಗಳಲ್ಲಿ ಸಂಚರಿಸಿದಂತಾಗುತ್ತದೆ. ಸೇನೆಯಲ್ಲಿ ರಾಷ್ಟŠಪ್ರೇಮ, ಸೇವಾ ಮನೋಭಾವ ಎಲ್ಲರನ್ನೂ ಬೆಸೆಯುವ ತಂತು. ಅಂತೆಯೇ, ಭಾರತೀಯ ಸೇನೆಯ ಧ್ಯೇಯ ವಾಕ್ಯ ‘ಸೇವಾ ಪರಮೋ ಧರ್ಮಃ’. ಯೋಧನಿಗೆ ತನ್ನ ಮಾತೃಭೂಮಿಯ ರಕ್ಷಣೆೆಯೇ ಪ್ರಥಮ ಆದ್ಯತೆ, ತನ್ನ ತಂಡದ ಮಾನ, ಪ್ರಾಣ, ಘನತೆಯ ರಕ್ಷಣೆ ಎರಡನೆಯ ಆದ್ಯತೆ ಮತ್ತು ತನ್ನ ಪ್ರಾಣದ ರಕ್ಷಣೆೆ ಕೊನೆಯ ಆದ್ಯತೆ. ಈ ಪರಮೋದಾತ್ತ ಸೇವಾ ಮನೋಭಾವವನ್ನು ಎಲ್ಲ ಸಮಯ, ಸಂದರ್ಭಗಳಲ್ಲಿ ಯೋಧರ ನಡೆನುಡಿಗಳಲ್ಲಿ ನಾವು ಕಾಣಬಹುದು. ಗಡಿ ರಕ್ಷಣೆೆ ಮಾಡವಾಗ, ವಿಪತ್ತಿಗೆ ಸಿಲುಕಿದ ಜನರ ರಕ್ಷಣೆೆಗೆ ಧಾವಿಸುವಾಗ ಯೋಧರ ಸೇವಾ ಮನೋಧರ್ಮ ಎದ್ದು ಕಾಣುತ್ತದೆ.
ಸರ್ವಧರ್ಮ ಸಹಿಷ್ಣುತೆ:ಸೇನೆಯಲ್ಲಿರುವ ಮತ್ತೊಂದು ಗಮನಾರ್ಹ ಅಂಶವೆಂದರೆ ಸರ್ವಧರ್ಮ ಸಹಿಷ್ಣುತೆ, ಸಹಬಾಳ್ವೆ. ದೇಶದ ಹಲವು ಭಾಗಗಳಿಂದ ಬಂದವರು ತಮ್ಮ ನಡುವಿನ ಎಲ್ಲ ವ್ಯತ್ಯಾಸಗಳನ್ನು ಮರೆತು ಒಂದಾಗಿ ಕರ್ತವ್ಯ ಪಾಲನೆ ಮಾಡುತ್ತಾರೆ. ಇಂತಹ ಅಭೇದ್ಯ ಒಗ್ಗಟ್ಟು ಹೇಗೆ ಸಾಧ್ಯ? ಸೇನೆಯಲ್ಲಿರುವ ರೂಢಿ, ಆಚರಣೆಗಳು ಇದಕ್ಕೆ ಕಾರಣ. ಮಹತ್ವದ ಕಾರ್ಯåಚರಣೆಗಳಿಗೆ ತೆರಳುವ ಮುನ್ನ ಯೋಧರು ದೇವರ ಪೂಜೆ ಮಾಡುವುದು ವಾಡಿಕೆ. ತಾವಿರುವ ಸ್ಥಳದಲ್ಲಿ ದೇಗುಲವಿಲ್ಲದಿದ್ದರೆ, ಲಭ್ಯವಿರುವ ಕಲ್ಲು, ಮರ, ಹಿಮ ಅಥವಾ ಆಯುಧಗಳ ಅಳಿದುಳಿದ ಬಿಡಿ ಭಾಗಗಳಿಂದ ಒಂದು ತಾತ್ಕಾಲಿಕ ಮಂದಿರ ನಿರ್ವಿುಸಿ ಪೂಜೆ ಸಲ್ಲಿಸುತ್ತಾರೆ. ಯುದ್ಧ ನಡೆಯುವಾಗಂತೂ ಇದು ಪ್ರಮುಖ ಆಚರಣೆ. ಇಂತಹ ಆಚರಣೆಗಳು ಯೋಧರಿಗೆ ನೈತಿಕ ಬೆಂಬಲ ನೀಡುವುದಲ್ಲದೆ, ದೇವರು ತಮ್ಮನ್ನು ಶತ್ರು ದಾಳಿಯಿಂದ ರಕ್ಷಿಸುತ್ತಾರೆಂಬ ವಿಶ್ವಾಸ ಮೂಡಿಸಿ, ಹೆಚ್ಚಿನ ಆತ್ಮಬಲ, ಉತ್ಸಾಹದಿಂದ ಯುದ್ಧಭೂಮಿಗೆ ಅಥವಾ ಕಾರ್ಯåಚರಣೆೆಗೆ ತೆರಳುತ್ತಾರೆ. ಪ್ರತಿ ಮಿಲಿಟರಿ ಸ್ಥಳದಲ್ಲಿ ಹಿಂದು, ಮುಸಲ್ಮಾನ, ಕ್ರೖೆಸ್ತ, ಸಿಖ್ ಪ್ರಾರ್ಥನಾಲಯಗಳಿರುವ ನಿಗದಿತ ‘ಸರ್ವ ಧರ್ಮ ಸ್ಥಳ’ವಿರುತ್ತದೆ. ವಾರಕ್ಕೊಂದು ದಿನ ಮಂದಿರ ಪರೇಡ್ ಇರುತ್ತದೆ. ಅಂದು ಸೈನಿಕರು, ಅಧಿಕಾರಿಗಳು ಎಂಬ ಭೇದವಿಲ್ಲದೆ, ಜಾತಿ, ಮತ, ಪಂಗಡಗಳ ಅಂತರವಿಲ್ಲದೆ ಎಲ್ಲರೂ ಒಂದಾಗಿ ಪೂಜೆ ಸಲ್ಲಿಸುತ್ತಾರೆ. ಹಬ್ಬಗಳನ್ನು ಒಟ್ಟಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಇಂಥ ಸಂಗಮದಿಂದ ಯೋಧರಿಗೆ ಆಧ್ಯಾತ್ಮಿಕ ಸಮಾಧಾನ, ಆಂತರಿಕ ಶಾಂತಿ ದೊರೆಯುವುದಲ್ಲದೆ, ಅವರು ಎಲ್ಲ ಧರ್ಮದ ಆಚರಣೆಗಳ ಸಾರವನ್ನರಿತು ಒಬ್ಬರಿಗೊಬ್ಬರು ಮತ್ತಷ್ಟು ಹತ್ತಿರವಾಗುತ್ತಾರೆ. ಅವರ ನಡುವೆ ಬಾಂಧವ್ಯ ವೃದ್ಧಿಸುತ್ತದೆ. ಮನೆಯಲ್ಲಿ ತಮ್ಮ ಧರ್ಮ ಪಾಲಿಸಿದರೂ, ಕರ್ತವ್ಯದಲ್ಲಿದ್ದಾಗ ಯೋಧರು ಘಟಕದ ಧರ್ಮವನ್ನೇ ಅನುಸರಿಸುತ್ತಾರೆ. ಸೇನೆಯಲ್ಲಿ ಎಲ್ಲ ಧರ್ಮಗಳ ಬಗ್ಗೆ ತಿಳಿವಳಿಕೆ ಹೊಂದಿದ ಧಾರ್ವಿುಕ ಬೋಧಕರಿರುತ್ತಾರೆ. ಇವರು ಯೋಧರ ಸ್ನೇಹಿತರಂತೆ, ಧಾರ್ವಿುಕ/ಆಧ್ಯಾತ್ಮಿಕ ಸಲಹೆಗಾರರಂತೆ ಇರುತ್ತಾರೆ. ಧಾರ್ವಿುಕ ಸಹಿಷ್ಣುತೆ, ಕೋಮು ಸೌಹಾರ್ದ, ಐಕ್ಯತೆಯ ಬಗ್ಗೆ ಮನವರಿಕೆ ಮಾಡುವುದಲ್ಲದೆ, ನೈತಿಕ ಬೆಂಬಲ ನೀಡಿ, ಯೋಧರನ್ನು ಭಾವನಾತ್ಮಕವಾಗಿ ಹುರಿದುಂಬಿಸುತ್ತಾರೆ. ಇಷ್ಟೇ ಅಲ್ಲ. ಸೇನೆಗೆ ಸೇರಿ, ತರಬೇತಿ ಪಡೆದು, ತೇರ್ಗಡೆ ಹೊಂದಿದ ನಂತರ ಯುವ ಆಫೀಸರ್​ಗಳ ಪದಗ್ರಹಣ ಸಮಾರಂಭವಿರುತ್ತದೆ (ಪಾಸಿಂಗ್ ಔಟ್ ಪೆರೇಡ್). ಈ ಸಮಾರಂಭಕ್ಕೆ ಹಿಂದು, ಮುಸಲ್ಮಾನ, ಕ್ರೖೆಸ್ತ, ಸಿಖ್ ಧರ್ಮಗಳ ಗುರುಗಳು ಆಗಮಿಸಿ, ನೂತನ ಆಫೀಸರ್​ಗಳನ್ನು ಹರಸುತ್ತಾರೆ. ಒಟ್ಟಾರೆ ಹೇಳುವುದಾದರೆ ಯೋಧರಿಗಿರುವುದು ಒಂದೇ ಧರ್ಮ ಅದುವೇ ಮಾತೃಭೂಮಿಯ ರಕ್ಷಣೆ. ಒಟ್ಟಿಗೆ ಕಾದಾಡುವವರು ಒಟ್ಟಾಗಿ ಪ್ರಾರ್ಥಿಸುತ್ತಾರೆ. ಇದಲ್ಲವೆ ಅಖಂಡ ಭಾರತದ ಸರ್ವ ಜನಾಂಗದ ಶಾಂತಿಯ ತೋಟ?. ಈ ಹೊಂದಾಣಿಕೆ, ಸದ್ಭಾವನೆಯ ವಿಚಾರಗಳಲ್ಲಿಯೂ ಯೋಧರು ಅನುಕರಣೀಯರಲ್ಲವೇ?
ಮಾನವೀಯತೆ, ಸಹಬಾಳ್ವೆ, ಸಹನೆಯಂತಹ ಗುಣಗಳು ಈಗ ಸಮಾಜದಲ್ಲಿ ನಶಿಸಿ ಹೋಗುವ ಹಂತ ತಲುಪಿವೆ. ಯೋಧರು ನೆತ್ತರು ಹರಿಸಿ ರಕ್ಷಿಸುತ್ತಿರುವ ನಮ್ಮ ದೇಶದ ಆಂತರಿಕ ಶಾಂತಿ ಕದಡದ ಹಾಗೆ ಬದುಕುವುದು ನಾಗರಿಕರಾದ ನಮ್ಮ ಕರ್ತವ್ಯವೆಂದು ತಿಳಿದು, ಕೂಡಿ ಬಾಳೋಣ, ಬದುಕನ್ನು ಬಂಗಾರವಾಗಿಸೋಣ. ಯೋಧರು ಬದುಕಿನಲ್ಲಿ ಅಳವಡಿಸಿಕೊಂಡ ತತ್ವಗಳನ್ನು ನಾವೂ ನಿತ್ಯ ಜೀವನದಲ್ಲಿ ಪಾಲಿಸಿದರೆ, ಅದೇ ನಾವು ನಮ್ಮ ಹೆಮ್ಮೆಯ ಭಾರತೀಯ ಸೇನೆಗೆ, ಯೋಧರಿಗೆ ಸಲ್ಲಿಸುವ ಗೌರವ, ಕೃತಜ್ಞತೆ. ಕಾರ್ಗಿಲ್ ಯುದ್ಧವಾಗಿ 25 ವರ್ಷಗಳು ಸಂದಿವೆ. ದೇಶಕ್ಕಾಗಿ ಜೀವ ತೆತ್ತ ಯೋಧರು ಚಿರಕಾಲ ನೆನಪಲ್ಲಿರುವರು, ಅಜರಾಮರರು. ಅವರಿಗೆಲ್ಲ ವಂದನೆಗಳನ್ನು ಸಲ್ಲಿಸೋಣ.
ಯುದ್ಧ ಗೆಲ್ಲಲು ಯುದ್ಧನೀತಿಗಳ ಬಳಕೆ ಒಂದೆಡೆಯಾದರೆ, ಮಾನವೀಯತೆ ನಮ್ಮ ಸೇನೆಯ ಸಂಸ್ಕಾರದ ಅಂಗವಾಗಿದೆ. ಯುದ್ಧದ ಸಮಯದಲ್ಲಿ ಮಾನವೀಯತೆಯೇ? ಎಂದು ಅಚ್ಚರಿ ಪಡಬೇಡಿ. ಇದಕ್ಕೆ ಹಲವು ನಿದರ್ಶನಗಳಿವೆ. ಉದಾಹರಣೆಗೆ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fifteen =
Remember me
