ಬೆಂಗಳೂರು:ಕೋವಿಡ್​ 19 ಪಿಡುಗಿನಿಂದ ರೈತರು, ಆಹಾರ ಮತ್ತು ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು ಮತ್ತು ಸ್ವಸಹಾಯ ಗುಂಪಿನ ಸದಸ್ಯರು ತೀವ್ರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರೆಲ್ಲರಿಗೆ ನೆರವಾಗಲು ಇಂಡಿಯನ್​ ಬ್ಯಾಂಕ್​ ಮುಂದಾಗಿದೆ.ಇದಕ್ಕಾಗಿ ಅದು Ind Covid Emergency Agro Processing Loan, Ind Covid Emergency Poultry Loan, Ind KCC-Covid Sahaya Loan ಮತ್ತು SHG Covid Sahaya Loan ಎಂಬ ನಾಲ್ಕು ವಿಧದ ಸಾಲ ಯೋಜನೆಗಳನ್ನು ಪ್ರಕಟಿಸಿದೆ.
ಇಂಡ್​ ಕೋವಿಡ್​ ಎಮರ್ಜೆನ್ಸಿ ಆಗ್ರೋ ಪ್ರೊಸೆಸಿಂಗ್​ ಲೋನ್​ ಯೋಜನೆಯಡಿ ಆಹಾರ ಮತ್ತು ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳಿಗೆ ಶೇ.10 ದುಡಿಯುವ ಬಂಡವಾಳ, ಇಂಡ್​ ಕೋವಿಡ್​ ಎಮರ್ಜೆನ್ಸಿ ಪೌಲ್ಟ್ರಿ ಲೋನ್​ ಯೋಜನೆಯಡಿ ಪೌಲ್ಟ್ರಿಗಳ ಮಾಲೀಕರು ಶೇ.20 ದುಡಿಯುವ ಬಂಡವಾಳ ಮತ್ತು ಪಶುಸಾಕಾಣಿಕೆ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಇಂಡ್​ ಕೆಸಿಸಿ ಕೋವಿಡ್​ ಸಹಾಯ್​ ಲೋನ್​ ಯೋಜನೆಯಡಿ ಶೇ.10 ಮೆದುಸಾಲ (ಸಾಫ್ಟ್​ ಲೋನ್​) ಪಡೆದುಕೊಳ್ಳಬಹುದು.
ಎಸ್​ಎಚ್​ಜಿ ಕೋವಿಡ್​ ಸಹಾಯ ಲೋನ್​ ಯೋಜನೆಯಡಿ ಸ್ವಸಹಾಯ ಗುಂಪಿನ ಮಹಿಳೆಯರು ತಲಾ 5 ಸಾವಿರ ರೂ.ನಂತೆ ಸಾಲ ಪಡೆದುಕೊಳ್ಳಬಹುದಾಗಿದೆ. ಒಂದು ಸ್ವಸಹಾಯ ಗುಂಪಿನಲ್ಲಿ 20 ಜನರಿದ್ದರೆ 1 ಲಕ್ಷ ರೂ.ವರೆಗೂ ಸಾಲ ಪಡೆದುಕೊಳ್ಳಬಹುದು.ಈ ಎಲ್ಲ ಯೋಜನೆಗಳಡಿ ಪಡೆಯುವ ಸಾಲವನ್ನು ಮಾಸಿಕ ಸಮಾನ ಕಂತುಗಳಲ್ಲಿ ಪಾವತಿಸಬಹುದಾಗಿದೆ.
ಕೋವಿಡ್​ 19 ಲಾಕ್​ಡೌನ್​ ಕೃಪೆ, ಜಾಲಂಧರ್​ನಿಂದಲೇ ಹಿಮಚ್ಛಾದಿತ ಹಿಮಾಲಯ ಪರ್ವತಶ್ರೇಣಿಯ ದರ್ಶನ!

ಪ್ರಧಾನಿ ಮೋದಿಯವರು ದೀಪ ಹಚ್ಚಲು ಹೇಳಿದ್ದಕ್ಕೆ ನಿಜವಾದ ಕಾರಣ ತಿಳಿಸಿದ ಪಿಐಬಿ; ರೂಮರ್​ಗಳನ್ನು ನಂಬಬೇಡಿ, ಜ್ಯೋತಿಷ್ಯ ಲಿಂಕ್​ ಮಾಡಬೇಡಿ ಎಂದು ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 15 =
Remember me
