ಬೆಂಗಳೂರು:ನಿತ್ಯೋತ್ಸವ ಕವಿ ಎಂದೇ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾಗಿದ್ದ ಕೆ.ಎಸ್​. ನಿಸಾರ್​ ಅಹಮದ್ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ. ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿಯಾಗಿದ್ದ ನಿಸಾರ್ ಅವರದ್ದು ಧರ್ಮವನ್ನು ಮೀರಿದ ವ್ಯಕ್ತಿತ್ವ. ಎಂದಿಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರಲ್ಲ. ಅವರು ಬೆಳೆದು ಬಂದು ಹಾದಿ ಎಲ್ಲರಿಗೂ ಸ್ಪೂರ್ತಿದಾಯಕವಾದದ್ದು.
ಜೀವನದ ದಾರಿ
ಜನನ:5.02.1936, ಬೆಂ. ಗ್ರಾಮಾಂತರ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಕೊಕ್ಕರೆಹೊಸಳ್ಳಿ
ತಂದೆ-ತಾಯಿ:ಕೆ.ಎಸ್. ಹೈದರ್-ಹಮೀದಾ ಬೇಗಂ
ಓದು:ಬೆಂ.ಗ್ರಾಮಾಂತರ ದೇವನಹಳ್ಳಿ ಹಾಗೂ ಬೆಂಗಳೂರು ಮಾವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ.
ಹೊಸಕೋಟೆ ಮುನಿಸಿಪಲ್ ಹೈಸ್ಕೂಲ್.
ಬೆಂಗಳೂರು ಸರ್ಕಾರಿ ಇಂಟರ್ ಮೀಡಿಯೇಟ್ ಕಾಲೇಜು.
ಬೆಂಗಳೂರು ಸೆಂಟ್ರಲ್ ಕಾಲೇಜು, ಭೂವಿಜ್ಞಾನದಲ್ಲಿ ಎಂ.ಎಸ್ಸಿ (1959)
ಹುದ್ದೆ:ಮೈಸೂರು ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಹಾಯಕ ಭೂವಿಜ್ಞಾನಿ. (ಗುಲ್ಬರ್ಗಾ)
ಉಪನ್ಯಾಸಕ-ಪ್ರಾಧ್ಯಾಪಕ:ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ 34 ವರ್ಷ ಭೂವಿಜ್ಞಾನದ ಉಪನ್ಯಾಸಕ ಹಾಗೂ ಪ್ರಾಧ್ಯಾಪಕ.
ವಿವಾಹ:17.04.1966. ಪತ್ನಿ: ಷಹನವಾಜ್ ಬೇಗಂ (ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ)
ಮಕ್ಕಳು:ಇಬ್ಬರು ಪುತ್ರರು, ಇಬ್ಬರು ಪುತ್ರಿಯರು
ಕೃತಿಗಳು:
ಮುಖ್ಯ ಕವನ ಸಂಕಲನ:
‘ಮನಸು ಗಾಂಧಿಬಜಾರು’-1960, ‘ನೆನೆದವರ ಮನದಲ್ಲಿ’-1964, ‘ಸಂಜೆ ಐದರ ಮಳೆ’-1970, ‘ಆಯ್ದ ಕವಿತೆಗಳು’-1974, ‘ನಿತ್ಯೋತ್ಸವ’-1976, ‘ಸ್ವಯಂಸೇವೆಯ ಗಿಳಿಗಳು’-1977, ‘ಸಮಗ್ರ ಕವಿತೆಗಳು’-1991, ‘ಆಕಾಶಕ್ಕೆ ಸರಹದ್ದುಗಳಿಲ್ಲ’-1998, ‘ಸಮಗ್ರ ಭಾವಗೀತೆಗಳು’-2001.
ವಿಮರ್ಶೆ-ವಿಚಾರಸಾಹಿತ್ಯ:‘ಇದು ಬರಿ ಬೆಡಗಲ್ಲೋ ಅಣ್ಣ’-1980, ‘ಮನದೊಂದಿಗೆ ಮಾತುಕತೆ’-1991, ‘ಹಿರಿಯರು ಹರಸಿದ ಹೆದ್ದಾರಿ’-1992, ‘ಅಚ್ಚುಮೆಚ್ಚು’-1995.
ಅನುವಾದ:‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ‘ಒಥೆಲೊ’, ‘ಬರಿ ಮರ್ಯಾದಸ್ಥರೆ’ (ನೆರೂಡ ಕಾವ್ಯ).
ಪ್ರಥಮ ಕ್ಯಾಸೆಟ್:‘ನಿತ್ಯೋತ್ಸವ’- ಕನ್ನಡದ ಮೊಟ್ಟಮೊದಲ ಸುಗಮ ಸಂಗೀತದ ಧ್ವನಿ ಸುರಳಿ. (1978)
ಸ್ಥಾನಮಾನ
ಕೃತಿಗಳಿಗೆ ಪ್ರಶಸ್ತಿ
ಪ್ರಶಸ್ತಿ-ಪುರಸ್ಕಾರ
ಮಹಾಮೌನ
ಭಾಷೆ, ಗಡಿ, ನೆಲ, ಜಲದ ವಿಚಾರ ರಾಜ್ಯದಲ್ಲಿ ಆಗಾಗ್ಗೆ ಭುಗಿಲೆದ್ದಾಗ ಕೆಲವು ಸಾಹಿತಿಗಳು ಬೀದಿಗಿಳಿದು ಹೋರಾಟ ನಡೆಸಿದರೂ ನಿಸಾರ್, ಮಹಾಮೌನ ತಳೆಯುತ್ತಿದ್ದರು. ಹಿಂದೂ- ಮುಸ್ಲಿಂ ಅನ್ಯೋನ್ಯಕ್ಕೆ ಧಕ್ಕೆ ಬಂದು, ಕೋಮು ಗಲಭೆಗಳಾದ ಸಂದರ್ಭದಲ್ಲಂತೂ ಮಾಧ್ಯಮ ದವರಿಂದ ದೂರವೇ ಉಳಿದು ಬಿಡುತ್ತಿದ್ದರು.
ಹಿರಿಯರ ಒಡನಾಟ
ನಿಸಾರ್ ಅವರು ಲಂಕೇಶ್, ಅನಂತಮೂರ್ತಿ, ಭೈರಪ್ಪ ಈ ಪೀಳಿಗೆಯ ಲೇಖಕರಾದರೂ ಹಿಂದಿನ ಪೀಳಿಗೆಯ ಪುತಿನ, ಮಾಸ್ತಿ, ಶಿವರಾಮ ಕಾರಂತ, ವಿ.ಕೃ.ಗೋಕಾಕ್, ಜಿ.ಎಸ್.ಶಿವರುದ್ರಪ್ಪ ಮೊದಲಾದವರೊಡನೆ ಸಂಪರ್ಕ ಇಟ್ಟುಕೊಂಡಿದ್ದರು. ಏಕೆಂದರೆ ನವ್ಯ ಮಾರ್ಗದಲ್ಲಿ ಸಾಹಿತ್ಯ ಬರೆದರೂ ಅವರ ಉದಾರವಾದಿ ಧೋರಣೆಗೆ ಸಮಕಾಲೀನರಿಗಿಂತ ಹಳಬರು ಹೆಚ್ಚು ಒಗ್ಗುತ್ತಿದ್ದರು. ಗೋಕಾಕರು ಬೆಂಗಳೂರಿನಲ್ಲಿ ನೆಲೆಸಿದ್ದಾಗ ‘ಭಾರತ ಸಿಂಧುರಶ್ಮಿ’ ರಚನೆ ಸಾಗಿತ್ತು. ಆಗಾಗ ಅವರು ಅದನ್ನು ತರುಣಮಿತ್ರರ ಎದುರು ಓದಿ ತೋರಿಸುತ್ತಿದ್ದರು. ಈ ಸಹೃದಯ ಕೂಟದಲ್ಲಿ ನಿಸಾರ್ ಕೂಡ ಒಬ್ಬರು.
ನಿಸಾರ್ ಸಾಹಿತ್ಯಕ್ಕೆ ಎಸ್.ಪಿ.ಬಿ ದನಿ
‘ನಿತ್ಯೋತ್ಸವ ಕವಿ’ ನಿಸಾರ್ ಅಹಮದ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡ ಸಾಹಿತ್ಯಕ್ಕೆ ನಿಸಾರ್ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ. ಅವರ ಸಾಧನೆ ಬಗ್ಗೆ ಮನತುಂಬಿ ಮಾತನಾಡಿದ್ದಾರೆ. ನಿಸಾರ್ ಅಹಮದ್ ಕನ್ನಡ ಚಿತ್ರರಂಗದ ಹಲವು ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದುಂಟು. ಹಾಗೆ ಅವರು ಕೊನೆಯದಾಗಿ ಕಾಣಿಸಿಕೊಂಡ ಸಮಾರಂಭವೆಂದರೆ, ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ನಿರ್ದೇಶನದ ‘ಹಸಿರು ರಿಬ್ಬನ್’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಸುಚಿತ್ರಾ ಫಿಲ್ಮ್ ಸೊಸೈಟಿ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ನಿಸಾರ್ ಮುಖ್ಯ ಅತಿಥಿಯಾಗಿ ಬಂದು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದರು. ವೆಂಕಟೇಶಮೂರ್ತಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. 80ರ ದಶಕದಲ್ಲಿ ಬಿಡುಗಡೆಯಾದ ‘ಮರಳಿ ಗೂಡಿಗೆ’ ಚಿತ್ರದಲ್ಲಿ ನಿಸಾರ್ ಬರೆದ ‘ನೀ ನುಡಿಯದಿರಲೇನು …’ ಎಂಬ ಹಾಡನ್ನು ಬಳಸಿಕೊಳ್ಳಲಾಗಿತ್ತು. ಕೆ.ಆರ್.ಶಾಂತಾರಾಂ ನಿರ್ದೇಶನದ ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್, ಜೈಜಗದೀಶ್, ರೂಪಾದೇವಿ, ಶ್ರೀನಿವಾಸಮೂರ್ತಿ ಮುಂತಾದವರು ನಟಿಸಿದ್ದರು. ರಾಜನ್-ನಾಗೇಂದ್ರ ಈ ಪದ್ಯಕ್ಕೆ ಸಂಗೀತ ಸಂಯೋಜಿಸಿದ್ದು, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಈ ಹಾಡನ್ನು ಹಾಡಿದ್ದಾರೆ.
ಬೆಂಗಳೂರಿನ ಮೇಲೆ ಪ್ರೀತಿ
ಡಿವಿಜಿ, ಮಾಸ್ತಿಯವರಂತೆ ದೀರ್ಘಕಾಲ ಬೆಂಗಳೂರಿನಲ್ಲಿ ನೆಲೆಸಿದವರು ನಿಸಾರ್. ಬೆಂಗಳೂರಿನ ಋತುಮಾನ, ಮಳೆಯ ರಿಂಗಣ ಮತ್ತು ಬೇಸಿಗೆ ಎಲ್ಲವೂ ಅವರ ಪ್ರಜ್ಞೆಯ ಭಾಗವೇ ಆಗಿತ್ತು. ಒಂದೊಂದು ಬಡಾವಣೆಯ ವಿಶೇಷತೆ ಕುರಿತು ಮಾತನಾಡಬಲ್ಲವರಾಗಿದ್ದರು.
‘ಕರೊನಾ ಹೋರಾಟದ ಮಧ್ಯೆ ಕಂಡುಬಂತು ದೇಶದ ಒಗ್ಗಟ್ಟು…’- ವಿಡಿಯೋ ಶೇರ್​ ಮಾಡಿ, ‘ಪ್ರಣಾಮಗಳು’ ಎಂದ್ರು ಪ್ರಧಾನಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
