ದೆಹಲಿ:ಬೆಂಗಳೂರು-ಹುಬ್ಬಳ್ಳಿ ಸೇರಿದಂತೆ ಐದು ಹೊಸ ವಂದೇ ಭಾರತ್ ರೈಲಿಗೆ ಜೂ. 26ರಂದು ಚಾಲನೆ ದೊರೆಯುವ ಸಾಧ್ಯತೆಯಿದ್ದು, ಉತ್ತರ ಕರ್ನಾಟಕದ ಜನತೆ ಹೊಸ ವಂದೇ ಭಾರತ್ ರೈಲಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೆಮಿ ಹೈಸ್ಪೀಡ್ ರೈಲುಗಳಿಗೆ ಚಾಲನೆಯನ್ನು ನೀಡಲಿದ್ದು, ಈ ರೈಲುಗಳು ಮುಂಬೈ-ಗೋವಾ, ಬೆಂಗಳೂರು-ಹುಬ್ಬಳ್ಳಿ, ಪಾಟ್ನಾ-ರಾಂಚಿ, ಭೋಪಾಲ್-ಇಂಧೋರ್ ಮತ್ತು ಭೋಪಾಲ್-ಜಬಲ್ಪುರ ಮಾರ್ಗಗಳಲ್ಲಿ ಸಂಚರಿಸಲಿವೆ.ಇದನ್ನೂ ಓದಿ:ಕರ್ನಾಟಕ ಸೇರಿ 15 ರಾಜ್ಯಗಳಲ್ಲಿ ಭಾರೀ ಮಳೆ ನಿರೀಕ್ಷೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆಇದೇ ಮೊದಲ ಬಾರಿಗೆ ಒಂದೇ ದಿನಕ್ಕೆ ಐದು ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ಪ್ರಾರಂಭಿಸುತ್ತಿದ್ದು, ಅತ್ಯಾಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರುವ ಈ ರೈಲು, ಪ್ರಯಾಣಿಕರಿಗೆ ವೇಗವಾದ ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ಒದಗಿಸಲಿವೆ.ವಂದೇ ಭಾರತ್​ ರೈಲಿನಿಂದ ಪ್ರತಿ ನಿತ್ಯ ಸಂಚರಿಸುವ ಸಾವಿರಾರು ಜನರಿಗೆ ಅನುಕೂಲಕರವಾಗಲಿದ್ದು, ಈ ಭಾಗದಲ್ಲಿ ಸಂಪರ್ಕ ಕ್ರಾಂತಿಯಾಗುವ ನಿರೀಕ್ಷೆಯಿದೆ. ಒಡಿಶಾದಲ್ಲಿ ಸಂಭವಿಸಿದ ನಂತರ ಮೊದಲ ಬಾರಿಗೆ ಐದು ರೈಲಿಗೆ ಚಾಲನೆಯನ್ನು ನೀಡಲಾಗುತ್ತಿದ್ದು, ಭೀಕರ ದುರಂತದಿಂದಾಗಿ ರೈಲ್ವೆ ಸಚಿವಾಲಯವು ಆ ಸಮಯದಲ್ಲಿ ಮುಂಬೈ-ಗೋವಾ ವಂದೇ ಭಾರತ್ ರೈಲಿನ ಚಾಲನೆಯನ್ನು ರದ್ದುಗೊಳಿಸಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
