ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ. ಹಾವನ್ನು ರಕ್ಷಣೆ ಮಾಡಲಾಗಿದ್ದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಬನಶಂಕರಿ 6 ನೇ ಹಂತದಲ್ಲಿರುವ ಮನೆಯೊಂದರಲ್ಲಿ 12 ಅಡಿ ಉದ್ದದ ಇಂಡಿಯನ್ ರಾಕ್ ಪೈಥಾನ್ ಕಾಣಿಸಿಕೊಂಡಿದೆ. ಮನೆಯೊಳಗೆ ಹಾವು ಬಂದಿದ್ದನ್ನು ನೋಡಿದ ಆಘಾತಕ್ಕೆ ಒಳಗಾದ ಮನೆ ಮಂದಿ, ತಕ್ಷಣ ಉರಗ ರಕ್ಷಕರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಕಪಿಲ್ ಮತ್ತು ರಶ್ಮಿ ಅವರು ಹೆಬ್ಬಾವನ್ನು ರಕ್ಷಣೆ ಮಾಡಿ, ಬಿಎಂ ಕಾವಲ್ ಕಾಡಿಗೆ ಸ್ಥಳಾಂತರ ಮಾಡಿದ್ದಾರೆ.
ಇದನ್ನೂ ಓದಿ:ಪೋರ್ನ್​ ​ಸೈಟ್​ಗೆ ಲೈವ್​ S*x ಮಾಡಲು ಗಂಡ, ಮಾವನಿಂದ ಒತ್ತಾಯ: ತನಿಖೆಯಲ್ಲಿ ಭಯಾನಕ ರಹಸ್ಯ ಬಯಲು
ಈ ಹಿಂದೆ ಏಪ್ರಿಲ್​ 25ರಂದು ಬಿಬಿಎಂಪಿ ವ್ಯಾಪ್ತಿಯ ಅಂಜನಾಪುರ ವಾರ್ಡ್​ನ ಕಂಬತ್ತಳ್ಳಿಯಲ್ಲಿ ಸುಮಾರು 14 ಅಡಿ ಉದ್ದದ ಹೆಬ್ಬಾವನ್ನು ರಕ್ಷಣೆ ಮಾಡಿ, ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಹಂದಿ ಸಾಕಣೆ ಕೇಂದ್ರದ ನೀರಿನ ಚಾನಲ್​ನೊಳಗೆ ಸೇರಿಕೊಂಡಿದ್ದ ಹೆಬ್ಬಾವನ್ನು ರಕ್ಷಣೆ ಮಾಡಲು ಸತತ 4 ಗಂಟೆ ಕಾರ್ಯಾಚರಣೆ ನಡೆಸಲಾಯಿತು. ವನ್ಯಜೀವಿ ಸಂರಕ್ಷಕ ರಹೀದಾಸ್ ಅವರು ಹಾವನ್ನು ರಕ್ಷಣೆ ಮಾಡಿದ್ದರು.
ಹಾವುಗಳು ಬಿಸಿಲಿನ ತಾಪಕ್ಕೆ ಹೊರಬರುತ್ತಿವೆ. ಇವುಗಳಿಗೆ ಯಾರೂ ಹಾನಿಯುಂಟುಮಾಡದೆ ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ತಂಡಗಳಿಗೆ ಕರೆ ಮಾಡಿ ಸಂರಕ್ಷಣೆ ಮಾಡಲು ಹಾಗೂ ಸೂಕ್ತ ಆವಾಸ ಸ್ಥಾನಕ್ಕೆ ಬಿಡಲು ಸಾರ್ವಜನಿಕರು ಅನುವು ಮಾಡಿಕೊಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್ ಮನವಿ ಮಾಡಿದ್ದಾರೆ ಎಲ್ಲಿಯಾದರೂ ಇಂಥ ಜೀವಿಗಳು ಕಂಡುಬಂದರೆ ತಕ್ಷಣ ಸಹಾಯವಾಣಿ 080- 22221188 ಕರೆ ಮಾಡುವಂತೆ ಕೋರಿದ್ದಾರೆ.
ಬೆಂಗಳೂರಿನಲ್ಲಿ 14 ಅಡಿ ಉದ್ದದ ಹೆಬ್ಬಾವು ಪತ್ತೆ: ನೀರಿನ ಚಾನಲ್​ನಲ್ಲಿ ಅವಿತಿದ್ದ ಉರಗ

ನಿತ್ಯವೂ ಸ್ನಾನ ಮಾಡುವುದು ಅಪಾಯಕಾರಿಯೇ? ಅನೇಕರಿಗೆ ತಿಳಿಯದ ಶಾಕಿಂಗ್​ ಸಂಗತಿ ಇಲ್ಲಿದೆ….

ಅಸೆಂಬ್ಲಿ ಎಲೆಕ್ಷನ್ ಕಮಲ ಸಿದ್ಧತೆ: ಲೋಕಸಭೆ ದೃಷ್ಟಿಯಿಂದ ಮಹತ್ವವಾಗಿರುವ ಪಂಚರಾಜ್ಯ ಚುನಾವಣೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eleven − three =
Remember me
