ಬೆಂಗಳೂರು:ಯಕ್ಷಗಾನ ಕ್ಷೇತ್ರದಲ್ಲಿ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ತುಳಸಿ ಹೆಗಡೆ ಇನ್ನು ಇನ್ನು ಇಂಡಿಯನ್ ಸ್ಟಾರ್ ಐಕಾನ್​. ಅರ್ಥಾತ್, ಇವರು ಇಂಡಿಯನ್​ ಸ್ಟಾರ್​ ಐಕಾನ್​ ಕಿಡ್ ಅಚೀವರ್ಸ್​ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರದಲ್ಲಿನ ನ್ಯಾಷನಲ್ ಅಕಾಡೆಮಿ ಫಾರ್ ಆರ್ಟ್ ಎಜುಕೇಷನ್​ ಈ ಪ್ರಶಸ್ತಿಯನ್ನು ನೀಡಿದೆ.
ನ್ಯಾಷನಲ್ ಅಕಾಡೆಮಿ ಫಾರ್ ಆರ್ಟ್ ಎಜುಕೇಷನ್​ ಮಾತ್ರವಲ್ಲದೆ ನವಭಾರತ ರಾಷ್ಟ್ರೀಯ ಜ್ಞಾನಪೀಠ ಸಂಸ್ಥೆ, ಸುರಭಿ ಆಲ್ ಇಂಡಿಯಾ ಚೈಲ್ಡ್ ಆರ್ಟ್ ಎಕ್ಸಿಬಿಷನ್ ಸೊಸೈಟಿ, ನ್ಯಾಷನಲ್ ಎಕನಾಮಿಕ್ಸ್ ಗ್ರೋಥ್ ಟೈಮ್ಸ್ ಸಹಯೋಗದಲ್ಲಿ ತುಳಸಿ ಹೆಗಡೆಯ ಆಯ್ಕೆ ಪ್ರಕ್ರಿಯೆ ನಡೆದಿದೆ. ದೇಶಾದ್ಯಂತದ ಮಕ್ಕಳ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಮಾನದಂಡವಾಗಿರಿಸಿ ಈ ಪ್ರಶಸ್ತಿಗೆ ಆಯ್ಕೆ ನಡೆಯುತ್ತದೆ.
ಏಳು ವರ್ಷಗಳಿಂದ ಏಳು ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳೊಂದಿಗೆ ರಾಜ್ಯ-ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಈಕೆ ವಿಶ್ವಶಾಂತಿ ಸಂದೇಶವನ್ನು ಯಕ್ಷನೃತ್ಯ ಮೂಲಕ ಸಾರಿದ್ದಾಳೆ. ಮೂರೂವರೆ ವರ್ಷ ವಯಸ್ಸಿನಲ್ಲೇ ತುಳಸಿ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಿದ್ದು ವಿಶೇಷ. ಇನ್ನು ಇಂಟರ್​ನ್ಯಾಷನಲ್ ಬುಕ್​ ಆಫ್​ ರೆಕಾರ್ಡ್ಸ್​ನಲ್ಲೂ ತುಳಸಿಯ ವಿಶ್ವಶಾಂತಿ ಸರಣಿ ರೂಪಕಗಳ ಪ್ರಸ್ತುತಿ ಈಗಾಗಲೇ ದಾಖಲಾಗಿದೆ.
ಇದು ಬರೀ ಹೆದ್ದಾರಿಯಲ್ಲ, ‘ಮದ್ಯ’ರಸ್ತೆ: ಆಲ್ಕೋಹಾಲ್​ಗಾಗಿ ಮುಗಿಬಿದ್ದ ಪಾನಪ್ರಿಯರು..

ಸ್ಕ್ಯಾನಿಂಗ್ ಮಾಡಿಸುವುದಾಗಿ ಹೇಳಿ ಮಾಂಗಲ್ಯವನ್ನೇ ಎಗರಿಸಿದ ನಕಲಿ ಆಶಾ ಕಾರ್ಯಕರ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
