ಚಿಕ್ಕಮಗಳೂರು:ಮಹಾಮಾರಿ ಕರೊನಾದಿಂದ ತಾಯಿಯನ್ನು ಕಳೆದುಕೊಂಡ ಬೆನ್ನಲ್ಲೇ ಸಹೋದರಿಯನ್ನೂ ಕಳೆದುಕೊಂಡು ಭಾರತೀಯ ಮಹಿಳಾ ಕ್ರಿಕೆಟರ್​ ವೇದಾಕೃಷ್ಣಮೂರ್ತಿ ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಹೋದರಿ ವತ್ಸಲಾ ಕೃಷ್ಣಮೂರ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಕಳೆದ ವಾರ ವೇದಕೃಷ್ಣಮೂರ್ತಿ ತಾಯಿ ಚೆಲುವಾಂಬ (63) ಕೋವಿಡ್ ಗೆ ಬಲಿಯಾಗಿದ್ದರು. ಇದಾದ ಒಂದೇ ವಾರದಲ್ಲಿ ಸಹೋದರಿಯನ್ನು ಕಳೆದುಕೊಂಡಿದ್ದಾರೆ. ಒಂದೇ ಕುಟುಂಬದ ಐವರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು.
ಕಳೆದ ಜನವರಿಯಲ್ಲಿ ವೇದಾ ಅವರ ತಾಯಿ ಚೆಲುವಾಂಬ 63ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕಳೆದ ವಾರ ಕೋವಿಡ್​ ಪಾಸಿಟಿವ್​ ಆಗಿ ಉಸಿರಾಟದ ತೊಂದರೆಯಿಂದ ಕೋವಿಡ್​ಗೆ ಬಲಿಯಾಗಿದ್ದಾರೆ. ಇದಾದ ಒಂದೇ ವಾರದಲ್ಲಿ ಸಹೋದರಿಯು ಸಹ ಮೃತಪಟ್ಟಿದ್ದಾರೆ.
ಕಡೂರು ತಾಲೂಕಿನ ಬೀರೂರು ರಸ್ತೆ ಬಳಿಯಿ ಇರುವ ವೇದಾ ಕೃಷ್ಣಮೂರ್ತಿ ಅವರ ಜಮೀನಿನಲ್ಲಿ ಕೋವಿಡ್​ ಮಾರ್ಗ ಸೂಚಿಯಂತೆಯೇ ತಾಲೂಕು ಆಡಳಿತ ವತಿಯಿಂದ ಸಹೋದರಿಯ ಅಂತ್ಯಸಂಸ್ಕಾರ ನೆರವೇರಲಿದೆ.
ಕ್ರಿಕೆಟ್​ ಆಟಗಾರ್ತಿ ವೇದಾಕೃಷ್ಣಮೂರ್ತಿ ತಾಯಿ ಕರೊನಾಗೆ ಬಲಿ

ಕೋವಿಡ್​ನಿಂದ ಕೊನೆಯುಸಿರೆಳೆದ ಆರ್​ಎಲ್​ಡಿ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ಅಜಿತ್​ ಸಿಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
