ಬೆಂಗಳೂರು:ಭಾರತದ ಅತಿ ದೊಡ್ಡ ಹಣಕಾಸು ಶಿಕ್ಷಣ ಸಂಸ್ಥೆ ‘ಇಂಡಿಯನ್ ಮನಿ ಡಾಟ್ ಕಾಂ’ ಹೆಸರನ್ನು ಹುಬ್ಬಳ್ಳಿಯ ಅಕ್ರಂ ಇನ್ಫೋಟೆಕ್ ಪ್ರೈ.ಲಿ. ದುರುಪಯೋಗ ಮಾಡಿಕೊಂಡಿದೆ ಎಂದು ಸ್ಪಷ್ಟನೆ ನೀಡಿದೆ.
ಅಕ್ರಂ ಇನ್ಫೋಟೆಕ್ ಕಂಪನಿಯ ಸಿಬ್ಬಂದಿಗೆ ಸಂಬಳ ನೀಡಿಲ್ಲ ಎಂದು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಂಡಿಯನ್ ಮನಿ ಡಾಟ್ ಕಾಂಗೆ ಕೆಲಸ ಮಾಡುತ್ತಿದ್ದೆವು. ಆದರೆ ವೇತನ ಸಿಕ್ಕಿಲ್ಲ ಎಂದು ಅಲ್ಲಿನ ಸಿಬ್ಬಂದಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಂಡಿಯನ್ ಮನಿ ಡಾಟ್ ಕಾಂ ಸಿಇಒ ಸಿ.ಎಸ್.​ ಸುಧೀರ್​, ಅಲ್ಲಿನ ಸಿಬ್ಬಂದಿಗೂ ಇಂಡಿಯನ್ ಮನಿ ಡಾಟ್ ಕಾಂ ಗೂ ಯಾವುದೇ ಸಂಬಂಧವಿಲ್ಲ. ಅವರ ನೇಮಕಾತಿ, ನೀತಿ-ನಿಯಮ ಮತ್ತು ವೇತನ ಪಾವತಿಯ ಹೊಣೆ ಅಕ್ರಂ ಇನ್ಫೋಟೆಕ್​ಗೆ ಸಂಬಂಧಿಸಿದ್ದಾಗಿದೆ ಎಂದಿದ್ದಾರೆ.
ಅಕ್ರಂ ಇನ್ಫೋಟೆಕ್ ಕಂಪನಿ ಮಾಲೀಕ ಅಕ್ರಂಖಾನ್ ನಸೀರ್ ಖಾನ್ ಪಠಾಣ್ ಎಂಬುವರು ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಶಿಯಲ್ ಫ್ರೀಡಂ ಆ್ಯಪ್ ಅನ್ನು ಗ್ರಾಹಕರಿಗೆ ಮಾರಾಟ ಮಾಡುವ ಸಲುವಾಗಿ ನಮ್ಮ ಕಂಪನಿ ಜತೆ 2020ರ ಅಕ್ಟೋಬರ್​ 22ರಂದು ಒಪ್ಪಂದ ಮಾಡಿಕೊಂಡಿದ್ದರು. ಅಕ್ರಂ ಇನ್ಫೋಟೆಕ್ ಕಂಪನಿ ಮಾಸಿಕವಾಗಿ ಎಷ್ಟು ಆ್ಯಪ್ ಸಬ್​ಸ್ಕ್ರಿಪ್ಷನ್​ ಮಾರಾಟ ಮಾಡುತ್ತದೋ ಅದರ ಆಧಾರದ ಮೇಲೆ ಇಂಡಿಯನ್ ಮನಿ ಡಾಟ್ ಕಾಂ ಅವರಿಗೆ ಮಾಸಿಕವಾಗಿ ಕಮಿಷನ್ ಪಾವತಿಸಲಿದೆ ಎಂದು ಒಪ್ಪಂದದಲ್ಲಿ ತಿಳಿಸಲಾಗಿತ್ತು. ಆದರೆ ಆ ಕಂಪನಿಯ ಸಿಬ್ಬಂದಿಗೂ ನಮ್ಮ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿ.ಎಸ್​. ಸುಧೀರ್​ ಸ್ಪಷ್ಟಪಡಿಸಿದ್ದಾರೆ.
ಅಕ್ರಂ ಇನ್ಫೋಟೆಕ್ ಕಂಪನಿ ಇಂಡಿಯನ್ ಮನಿ ಡಾಟ್ ಕಾಂಗೆ ಕಾಲ್ ಸೆಂಟರ್ ಸೇವೆ ಒದಗಿಸುವುದಾಗಿ ಒಪ್ಪಂದ ಮಾಡಿಕೊಂಡಿದೆಯಷ್ಟೆ. ಅಲ್ಲಿನ ಸಿಬ್ಬಂದಿಗೆ ವೇತನ ಪಾವತಿ ವಿಚಾರದಲ್ಲಿ ಇಂಡಿಯನ್ ಮನಿ ಡಾಟ್ ಕಾಂನ ಯಾವುದೇ ಪಾತ್ರವಿಲ್ಲ ಎಂದು ಸುಧೀರ್​ ವಿವರಿಸಿದ್ದಾರೆ.
ಇಂಡಿಯನ್ ಮನಿ ಡಾಟ್ ಕಾಂ ಹೆಸರನ್ನು ದುರುಪಯೋಗ ಮಾಡಿಕೊಂಡಿರುವ ಕಾರಣದಿಂದ ಅಕ್ರಂ ಇನ್ಫೋಟೆಕ್ ಕಂಪನಿಯೊಂದಿಗಿನ ಒಪ್ಪಂದವನ್ನು ಇಂಡಿಯನ್ ಮನಿ ಡಾಟ್ ಕಾಂ ರದ್ದು ಮಾಡಿದೆ.
ಇಂಡಿಯನ್ ಮನಿ ಡಾಟ್ ಕಾಂ ಹೆಸರು ದುರುಪಯೋಗ!@Indianmoney_comವಿವರಕ್ಕೆhttps://t.co/Kln5y0U2h9pic.twitter.com/GOcfXLO15r
— Vijayavani (@VVani4U)November 18, 2020

ನಿಪ್ಪಾಣಿ-ಕಾರವಾರ ಮಹಾರಾಷ್ಟ್ರದ್ದು ಎಂದ ಡಿಸಿಎಂಗೆ ಹಿಗ್ಗಾಮುಗ್ಗಾ ತರಾಟೆ: ಕರ್ನಾಟಕ ಅವರಪ್ಪಂದಲ್ಲ, ನಮ್ಮದು..!

ಸಚಿವ ಸ್ಥಾನಕ್ಕೆ ಖುಷಿಯಿಂದಲೇ ರಾಜೀನಾಮೆ ಕೊಡುವೆ ಎಂದ ಆನಂದ್​ಸಿಂಗ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + six =
Remember me
