ಬೆಂಗಳೂರು:ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲೆಂದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಣ ನೀತಿಯನ್ನು (ಎನ್​ಇಪಿ) ಜಾರಿಗೆ ತಂದಿದ್ದು, ಭಾರತವನ್ನು ಜ್ಞಾನಾಧಾರಿತ “ಸೂಪರ್​ ಪವರ್​’ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಹೇಳಿದರು.
ಕಲಾ ಮತ್ತು ವಿಜ್ಞಾನ ಕಾಲೇಜಿನ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ನೃಪತುಂಗ ಕ್ಲಸ್ಟರ್​ ವಿಶ್ವವಿದ್ಯಾಲಯದ ಉದ್ಘಾಟನೆ, ಶೈಕ್ಷಣಿಕ ಸಮುಚ್ಚಯದ ಶಂಕುಸ್ಥಾಪನೆ ಮತ್ತು ಲಾಂಛನ ಅನಾವರಣ ಮಾಡಿದರು. ಜತೆಗೆ, ಬಳ್ಳಾರಿಯಲ್ಲಿ ಸ್ಥಾಪಿಸಲಾಗಿರುವ ಪ್ರಾದೇಶಿಕ ವಿಧಿವಿಾನ ಪ್ರಯೋಗಾಲಯವನ್ನು ಆನ್​ಲೈನ್​ ವೇದಿಕೆ ಮೂಲಕ ಉದ್ಘಾಟನೆ ನೆರವೇರಿಸಿದರು. ಭಾರತವನ್ನು ಸಶಕ್ತವಾಗಿ ಕಟ್ಟಿ ಜಾಗತಿಕಮಟ್ಟದಲ್ಲಿ ಪ್ರತಿಷ್ಠಾಪಿಸುವುದು ಮತ್ತು ಯುವಜನರಿಗೆ ಉಜ್ವಲ ಅವಕಾಶಗಳನ್ನು ಒದಗಿಸಬೇಕೆನ್ನುವುದೇ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಕಲ್ಪ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲೆಂದೇ ರಾಷ್ಟ್ರೀಯ ಶಿಣ ನೀತಿ ಜಾರಿಗೆ ತರಲಾಗಿದೆ. ಇದರಲ್ಲಿ ಭಾರತೀಯ ಸಂಸತಿಯೂ ಅಡಕವಾಗಿದೆ ಎಂದರು.
ದೇಶದಲ್ಲಿ ಸಂಭವಿಸುತ್ತಿರುವ ಶೈಣಿಕ ಕ್ರಾಂತಿಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮಹತ್ವದ ಸ್ಥಾನವಿದೆ. ಎನ್​ಇಪಿಯನ್ನು ಜಾರಿಗೆ ತಂದಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದೊಂದು ಶ್ಲಾನೀಯ ಮತ್ತು ಮಾದರಿ ನಡೆಯಾಗಿದೆ. ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಅವರಲ್ಲಿ ದೇಶಭಕ್ತಿಯ ಸಂಸ್ಕಾರವನ್ನು ಬೆಳೆಸಬೇಕಾಗಿದೆ. ಸ್ವಾತಂತ್ರ$್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇದು ಕೇಂದ್ರ ಸರ್ಕಾರದ ಪ್ರತಿೆಯಾಗಿದೆ ಎಂದು ಹೇಳಿದರು.
ಭಾರತ ವಿಶ್ವಗುರು:ದೇಶ ದೊಡ್ಡ ಸಾಧನೆಗಳನ್ನು ಮಾಡಲು ವ್ಯಕ್ತಿಗಳ ಚಿಕ್ಕಚಿಕ್ಕ ಸಂಕಲ್ಪಗಳು ನಿರ್ಣಾಯಕ ಕೊಡುಗೆ ಕೊಡುತ್ತವೆ. ಇನ್ಮುಂದೆ ಆದಾಯ ತೆರಿಗೆಯನ್ನು ವಂಚನೆ ಮಾಡುವುದಿಲ್ಲ. ಸಂಚಾರ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಜನರು ಸಂಕಲ್ಪ ಮಾಡಿದರೆ, ದೇಶದಲ್ಲಿ ಮಹತ್ತರ ಬದಲಾವಣೆಗೆ ಅವು ಕಾರಣವಾಗುತ್ತವೆ. ದೇಶವನ್ನು ಪ್ರೀತಿಸುವಂತಹ ಶಿಣವನ್ನು ಎನ್​ಇಪಿ ಅನ್ವಯ ಒದಗಿಸಲಾಗುವುದು. ಇದು ಸಂಪೂರ್ಣ ಭಾರತೀಯ ದೃಷ್ಟಿಕೋನ ಹೊಂದಿದೆ. ದೇಶದ ಪ್ರಗತಿಯ ದೃಷ್ಟಿಯಿಂದ ಮುಂದಿನ 25 ವರ್ಷಗಳಿಗೆ ಅತ್ಯಂತ ಮಹತ್ವವಿದ್ದು, ಭಾರತವು ವಿಶ್ವಗುರು ಎನಿಸಿಕೊಳ್ಳುವುದು ನಿಶ್ಚಿತ ಎಂದು ಅಮಿತ್​ ಷಾ ಪ್ರತಿಪಾದಿಸಿದರು.
ಕಳೆದ ಎಂಟು ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ 410 ಉನ್ನತ ಶಿಣ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಜತೆಗೆ ಜಮ್ಮು&ಕಾಶ್ಮೀರದ ಲಡಾಖ್​ ಮತ್ತು ಈಶಾನ್ಯ ಭಾರತ ಸೇರಿ ದೇಶದ ಉದ್ದಗಲಕ್ಕೂ ಕೇಂದ್ರೀಯ ವಿವಿ, ಏಮ್ಸ್​, ಐಐಟಿಗಳು, ವೈದ್ಯಕಿಯ ಕಾಲೇಜುಗಳು ಮತ್ತು ಹೊಸ ಾನ ಶಾಖೆಗಳ ವಿ.ವಿ.ಗಳನ್ನು ಆರಂಭಿಸಲಾಗಿದೆ. ಈ ಮೂಲಕ ದೇಶದ ಎಲ್ಲ ಭಾಗಗಳನ್ನೂ ಸಮಾನವಾಗಿ ಕಾಣಲಾಗುತ್ತಿದೆ ಎಂದು ವಿವರಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಆರಗ ಾನೇಂದ್ರ, ಸಂಸದ ಪಿ.ಸಿ. ಮೋಹನ್​, ಪೊಲೀಸ್​ ಮಹಾನಿರ್ದೇಶಕ ಪ್ರವಿಣ್​ ಸೂದ್​, ಕುಲಪತಿ ಶ್ರೀನಿವಾಸ ಎಸ್​. ಬಳ್ಳಿ, ಕಾಲೇಜು ಮತ್ತು ತಾಂತ್ರಿಕ ಶಿಣ ಇಲಾಖೆ ಆಯುಕ್ತ ಪಿ. ಪ್ರದಿಪ್​ ಉಪಸ್ಥಿತರಿದ್ದರು.
ರಾಜ್ಯದಿಂದ ಅಗತ್ಯ ಅನುದಾನಪ್ರಸ್ತುತ ಕಾಲಟ್ಟ ಪರಿವರ್ತನೆಯ ಪರ್ವಕಾಲವಾಗಿದೆ. ಜನಸಂಖ್ಯೆಯಲ್ಲಿ ಶೇ.46 ಇರುವ ಯುವಜನರನ್ನು ದೇಶದ ಆಸ್ತಿಯೆಂದು ಭಾವಿಸಲಾಗಿದೆ. ಯುವಜನರಿಗೆ “ಶಿಣ, ಉದ್ಯೋಗ ಮತ್ತು ಸಬಲೀಕರಣ’ ಇವೇ ಸರ್ಕಾರದ ಮೂಲಮಂತ್ರಗಳಾಗಿವೆ. ಕ್ಯಾಂಪಸ್​ ಸಂದರ್ಶನ, ಸ್ವ&ಉದ್ಯೋಗಕ್ಕೆ ಒತ್ತು ಕೊಡುವುದರ ಜತೆಗೆ ಪ್ರತ್ಯೇಕ ಉದ್ಯೋಗ ನೀತಿಯನ್ನೇ ರಾಜ್ಯದಲ್ಲಿ ರೂಪಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನೃಪತುಂಗ ವಿ.ವಿ.ಗೆ ಕೇಂದ್ರ ಸರ್ಕಾರವು 55 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಇದಕ್ಕೆ ಅಗತ್ಯವಿರುವ ಬಾಕಿ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಕಾಲದ ಜತೆಯಲ್ಲಿ ಬದಲಾವಣೆಗೆ ತೆರೆದುಕೊಳ್ಳದೆ ಹೋದರೆ ಅವಕಾಶಗಳು ಕೈತಪ್ಪಿ ಹೋಗಲಿವೆ. ಹೀಗಾಗಿ, ರಾಜ್ಯದಲ್ಲಿ ಎನ್​ಇಪಿ ಜಾರಿಗೊಳಿಸುತ್ತಿದ್ದು, ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಮಟ್ಟದವರೆಗೂ ಸಮಗ್ರ ಪರಿವರ್ತನೆ ಕಾಣಿಸಿಕೊಳ್ಳಲಿದೆ. ನೃಪತುಂಗ ವಿ.ವಿ ಎನ್​ಇಪಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಿದೆ ಎಂದು ತಿಳಿಸಿದರು.
ನವಭಾರತಕ್ಕೆ ರಾಜ್ಯದ ಕೊಡುಗೆನವಭಾರತ ನಿರ್ಮಾಣಕ್ಕಾಗಿ ನವಕರ್ನಾಟಕವು ತನ್ನ ಮೌಲಿಕ ಕೊಡುಗೆ ನೀಡಲಿದೆ. ಕಳೆದ ಎರಡು ವರ್ಷಗಳಲ್ಲಿ 6 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದ್ದು, ಸದ್ಯದಲ್ಲೆ ಇನ್ನೂ 7 ವಿವಿಗಳು ಅಸ್ತಿತ್ವಕ್ಕೆ ಬರಲಿವೆ. ಒಟ್ಟಿನಲ್ಲಿ ಒಂದು ಜಿಲ್ಲೆಗೆ ಒಂದು ವಿ.ವಿ.ಯಾದರೂ ಇರುವಂತೆ ಮುಂದಡಿ ಇಡಲಾಗುವುದು ಎಂದು ಉನ್ನತ ಶಿಣ ಸಚಿವ ಡಾ.ಸಿ.ಎನ್​ ಅಶ್ವತ್ಥನಾರಾಯಣ ಹೇಳಿದರು.
ದಕ್ಷ ನೀತಿಗಳ ಮೂಲಕ ದೇಶ ಜಾಗತಿಕ ಉತ್ಪಾದನಾ ವಲಯದ ನೀತಿಗಳ ಮೂಲಕ ದೇಶವನ್ನು ಜಾಗತಿಕ ಉತ್ಪಾದನಾ ವಲಯವಾಗಿ ಪ್ರಧಾನಿ ಮೋದಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಭಯೋತ್ಪಾದನೆ ಮತ್ತಿತರ ಪಿಡುಗುಗಳ ವಿರುದ್ಧ ನಿರ್ದಾಣ್ಯ ಕ್ರಮ ಜರುಗಿಸಲಾಗುತ್ತಿದೆ. ಸರ್ಜಿಕಲ್​ ಸ್ಟ್ರೆ$ಕ್​ಗಳನ್ನು ಮಾಡುವ ಮೂಲಕ ಭಾರತದ ಗಡಿ ತಂಟೆಗೆ ಬಂದರೆ ಏನಾಗುತ್ತದೆ ಎಂಬ ಸಂದೇಶವನ್ನು ಪಾಕಿಸ್ತಾನ ಸೇರಿ ವಿಶ್ವಕ್ಕೆ ನೀಡಲಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ಅಮೆರಿಕ ಮತ್ತು ಇಸ್ರೇಲ್​ ದೇಶಗಳ ಮಟ್ಟಕ್ಕೆ ಬೆಳೆದು ನಿಂತು ಪ್ರಜ್ವಲಿಸಲಿದೆ ಎಂದು ಅಮಿತ್​ ಷಾ ಭರವಸೆ ವ್ಯಕ್ತಪಡಿಸಿದರು.
ಬಸವಣ್ಣ, ಒಡೆಯರ್​ ಕೊಡುಗೆಯ ಸ್ಮರಣೆ…12ನೇ ಶತಮಾನದಲ್ಲಿಯೇ ಸಮಾಜದಲ್ಲಿದ್ದ ಅಸಮಾನತೆಯನ್ನು ತೊಡೆದು ಹಾಕಲು ಬಸವಣ್ಣ ಶ್ರಮಿಸಿದ್ದಾರೆ. ಅನುಭವ ಮಂಟಪವನ್ನು ಕಟ್ಟಿ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಬಸವಣ್ಣನ ವಚನಗಳಲ್ಲಿ ಸಮಾಜದ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಯುವಕರು ಬಸವಣ್ಣನವರ ವಚನಗಳನ್ನು ಅರಿತು ಮತ್ತು ಅಳವಡಿಸಿಕೊಂಡು ಶ್ರೇಷ್ಠ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಕೇಂದ್ರ ಸಚಿವ ಅಮಿತ್​ ಷಾ ಹೇಳಿದರು. ನೃಪತುಂಗ ವಿವಿಯಾಗಿ ರೂಪುಗೊಂಡಿರುವ ಸೆಂಟ್ರಲ್​ ಕಾಲೇಜು ಮೈಸೂರು ಅರಸರ ಕೊಡುಗೆ. ಜತೆಗೆ, ನಾಲ್ವಡಿ ಕೃಷ್ಣರಾಜ ಒಡೆಯರ್​ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಆ ಬುನಾದಿಯೇ ಈಗ ಬೃಹದಾಕಾರವಾಗಿ ಬೆಳೆದು ವಿಶ್ವವಿದ್ಯಾಲಯವಾಗಿ ಜ್ಞಾನದ ಬೆಳಕು ಹರಿಸುತ್ತಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 14 =
Remember me
