ಚಿಕ್ಕಮಗಳೂರು:‘ಬೆಂಗಳೂರಿನ ಡ್ರಗ್ಸ್​ ಜಾಲ ಬಯಲಿಗೆಳೆಯಲು ಸಹಕರಿಸುವುದಾದರೆ ಚಲನಚಿತ್ರ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರಿಗೆ ಪೊಲೀಸ್​ ಇಲಾಖೆ ಎಲ್ಲ ರೀತಿಯ ರಕ್ಷಣೆ ನೀಡಲಿದೆ’ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
‘ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ನನಗೆ ಸರ್ಕಾರ ಸೂಕ್ತ ರಕ್ಷಣೆ ಕೊಟ್ಟರೆ ಇನ್ನಷ್ಟು ಸತ್ಯಗಳನ್ನು ಹೇಳುತ್ತೇನೆ’ ಎಂದು ಇಂದ್ರಜಿತ್​ ಲಂಕೇಶ್​ ಹೇಳಿದ್ದರು. ಇದು ಇಡೀ ರಾಜ್ಯದಲ್ಲೇ ಭಾರೀ ಸಂಚಲನ ಮೂಡಿಸಿದ್ದು, ಚಂದನವನದತ್ತ ಎಲ್ಲರ ಕಣ್ಣು ದಿಟ್ಟಿಸಿದೆ. ಈ ಸಂದರ್ಭದಲ್ಲಿ ಇಂದ್ರಜಿತ್​ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಿ.ಟಿ. ರವಿ, ‘ಈ ವಿಚಾರದಲ್ಲಿ ಅವರಿಗೆ ಯಾರ ಬಗ್ಗೆಯೂ ಭಯ ಬೇಡ. ಪೊಲೀಸ್​ ಇಲಾಖೆ ಅವರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಿದ್ದು ಅವರು ಮುಕ್ತವಾಗಿ ಹೇಳಬೇಕು’ ಎಂದರು.ಇದನ್ನೂ ಓದಿರಿಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ
‘ಡ್ರಗ್ಸ್​ ಪ್ರಕರಣದಲ್ಲಿ ಆಗಾಗ ಸಹನಟರು ಸಿಕ್ಕಿಬೀಳುತ್ತಿದ್ದರು. ಈಗ ನಾಯಕ ನಟರ ಹೆಸರೇ ಕೇಳಿಬರುತ್ತಿದೆ. ಇದೊಂದು ವ್ಯವಸ್ಥಿತವಾದ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಜಾಲವಾಗಿದೆ. ಇದನ್ನು ಬಗ್ಗುಬಡಿದು ಇನ್ನಷ್ಟು ಜನ ಬಲಿಯಾಗುವುದನ್ನು ತಪ್ಪಿಸಲು ಇಂದ್ರಜಿತ್​ ಲಂಕೇಶ್​ ಅವರ ಸಹಕಾರ ಅಗತ್ಯವಿದೆ. ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಯುತ್ತಿದ್ದು, ವ್ಯಸನಕ್ಕೆ ಒಳಗಾದವರು ಯಾರು? ವ್ಯಾಪಾರಿಗಳು ಯಾರು? ಎನ್ನುವುದು ತನಿಖೆ ಬಳಿಕ ತಿಳಿಯಲಿದೆ’ ಎಂದು ಸಿ.ಟಿ. ರವಿ ಹೇಳಿದರು.
ರಾಜ್ಯದಲ್ಲಿನ ಡ್ರಗ್ಸ್​ ಮಾಫಿಯಾ ಕುರಿತು ಮಾತನಾಡಿರುವ ಗೃಹ ಸಚಿವ ಬಸವರಾಜು ಬೊಮ್ಮಾಯಿ, ಡ್ರಗ್ಸ್​ ಪೆಡ್ಲರ್​ಗಳ ವಿರುದ್ಧ ಸಮರ ಸಾರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಡ್ರಗ್ಸ್ ಮಾಫಿಯಾವನ್ನು ಕಿತ್ತೊಗೆಯಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್: ‘ಅಪಘಾತದ ವೇಳೆ ನಟಿ ಶರ್ಮಿಳಾ ಮಾಂಡ್ರೆ ಪಕ್ಕದಲ್ಲೇ ಕುಳಿತ್ತಿದ್ದ ಡ್ರಗ್ಸ್ ಪೆಡ್ಲರ್’

ಸರ್ಕಾರ ಸೂಕ್ತ ರಕ್ಷಣೆ ಕೊಟ್ರೆ ಸತ್ಯ ಹೇಳ್ತೇನೆ: ಸ್ಯಾಂಡಲ್​ವುಡ್​ ಕುರಿತು ಇಂದ್ರಜಿತ್​ ಲಂಕೇಶ್​ ಸ್ಫೋಟಕ ಹೇಳಿಕೆ!

ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಬಾಯ್ಬಿಟ್ಲು ಸ್ಫೋಟಕ ರಹಸ್ಯ, ಕನ್ನಡ ನಟ-ನಟಿಯರೇ ಗಿರಾಕಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 9 =
Remember me
