ಬೆಂಗಳೂರು:ಡ್ರಗ್ಸ್​ ಮಾಫಿಯಾದಲ್ಲಿ ಕನ್ನಡ ಸಿನಿಮಾದ ಹಲವು ನಟ-ನಟಿ ಮತ್ತು ನಿರ್ದೇಶಕರು ಭಾಗಿಯಾಗಿರುವ ಬಗ್ಗೆ ಇಂದು ಸಿಸಿಬಿ ಕಚೇರಿಗೆ ಮಾಹಿತಿ ನೀಡಿ ಹೊರಬರುತ್ತಿದ್ದಂತೆ ಇಂದ್ರಜಿತ್​ ಲಂಕೇಶ್ ಅವರು ಹಿರಿಯ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಕಿಡಿಕಾರಿದ್ದಾರೆ.
‘ಸಹೋದ್ಯೋಗಿಯನ್ನೇ ಕೊಲ್ಲಲು ಸುಫಾರಿ ಕೊಟ್ಟ ವ್ಯಕ್ತಿಯಿಂದ ಸಮಾಜಕ್ಕೆ ಏನು ಸಂದೇಶ ಕೊಡ್ತೀರಿ? ಸಮಾಜಕ್ಕೆ ಸಂದೇಶ ಕೊಡುವವರನ್ನು ಮಾಧ್ಯಮದವರು ಮಾತನಾಡಿಸಬೇಕೆ ಹೊರತು ಅವರನ್ನಲ್ಲ’ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿರಿಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ನ 15 ನಟ-ನಟಿಯರು, ಸಿಸಿಬಿಗೆ ಮಾಹಿತಿಕೊಟ್ಟ ಇಂದ್ರಜಿತ್​ ಲಂಕೇಶ್​
ಅಲ್ಲದೆ ಈ ಹಿಂದೆ ‘ಕೇಶ’ದ ವಿಚಾರವಾಗಿ ರವಿ ಬೆಳಗೆರೆ ಮಾತನಾಡಿದ್ದರು. ಈ ಬಗ್ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಇಂದ್ರಜಿತ್​ ಲಂಕೇಶ್​, ‘ಆ ಪತ್ರಕರ್ತನಿಗೆ ಸ್ವಂತಿಕೆಯೇ ಇಲ್ಲ. ಲಂಕೇಶ್​ ಒಬ್ಬ ಪ್ರಖ್ಯಾತ ಸಾಹಿತಿ. ಅವರ ಬಗ್ಗೆ ”ಲಂಕೇಶ್- ಕೇಶ ಅಷ್ಟೇ. ಕೇಶ ಅಂದ್ರ ಕೂದಲು” ಅಂದ್ರು. ಅವರಿಗೆ ಒಂದು ಸಾಲನ್ನೂ ಸ್ವಂತಿಕೆಯಿಂದ ಹೇಳೋಕೆ ಬರಲ್ಲ. ಇದನ್ನು ನೋಡಿದ್ರೆ ನಗು ಬರುತ್ತೆ’ ಎಂದು ಟೀಕಿಸಿದರು.
ಇಂದ್ರಜಿತ್​ ಹೇಳಿಕೆ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ರವಿ ಬೆಳಗರೆ, ‘ಅವನೊಬ್ಬ ಅವಿವೇಕಿ, ನಾನು ದಿನಕ್ಕೆ 60 ಪುಟ ಬರೆಯಬಲ್ಲೆ. ಅವನಿಗೆ ಒಂದು ತಾಸಿಗೆ ಒಂದು ಪುಟ ಬರೆಯಲೂ ಆಗಲ್ಲ. ಬೇಕಿದ್ದರೆ ಚಾಲೆಂಜ್​ ಮಾಡಲಿ’ ಎಂದು ಸವಾಲು ಎಸೆದರು. ‘ಇಂದ್ರಜಿತ್​ ಹೆಂಡ್ತಿ ಸಂಪಾದನೆಯಲ್ಲಿ ಬದುಕುತ್ತಿದ್ದಾನೆ. ಆತನ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?’ ಎಂದು ಪ್ರಶ್ನಿಸಿದರು.
ಇದನ್ನೂ ಓದಿರಿಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ
‘ಲಂಕೇಶ್​ ಬಗ್ಗೆ ಅಪಾರ ಗೌರವಿದೆ. ಗೌರಿ ಲಂಕೇಶ್​ ಬಗ್ಗೆಯೂ ಕೂಡ’ ಎಂದ ರವಿ ಬೆಳಗೆರೆ, ‘ಇಂದ್ರಜಿತ್​ ಲಂಕೇಶ್​ ಒಬ್ಬ ಅವಿವೇಕಿ. ನಾನು ಏನು ಎಂದು ನನ್ನ ಓದುಗರಿಗೆ ಗೊತ್ತಿದೆ. ಲಕ್ಷಾಂತರ ಜನರು ನನ್ನ ಬರಹವನ್ನು ಪ್ರೀತಿಯಿಂದ ಓದುತ್ತಿದ್ದಾರೆ. ನಾನು ಏನು ಎಂದು ಅವನಿಂದ ಹೇಳಿಸಿಕೊಳ್ಳಬೇಕಿಲ್ಲ’ ಎಂದರು. ‘ಅಲ್ಲದೆ ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ ನಟ-ನಟಿಯರು ಭಾಗಿಯಾಗಿರುವ ಬಗ್ಗೆ ಗೊತ್ತಿದ್ದರೆ ಬಹಿರಂಗವಾಗಿಯೇ ಹೇಳಲಿ. ಸತ್ಯ ಹೇಳೋಕೆ ಪೊಲೀಸರ ರಕ್ಷಣೆ ಯಾಕೆ ಬೇಕು. ಯಾರು ಏನು ಮಾಡ್ತಾರೆ?’ ಎಂದು ಪ್ರಶ್ನಿಸಿದರು.
ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ಹಾಗೂ ನಿರ್ದೇಶಕರು ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದಿದ್ದ ಇಂದ್ರಜಿತ್​ ಲಂಕೇಶ್​, ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ? ಎಂದು ಪ್ರಶ್ನಿಸಿದ್ದರು. ಬಳಿಕ ಸತ್ತವರ ಬಗ್ಗೆ ಈಗ ಮಾತೋಡು ಸರಿಯಲ್ಲ ಎಂದು ಆ ಮಾತನ್ನು ವಾಪಸ್​ ಪಡೆದಿದ್ದರು. ಈ ಕುರಿತು ಇಂದ್ರಜಿತ್​ ಲಂಕೇಶ್​ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರವಿ ಬೆಳಗೆರೆ, ‘ಚಿರಂಜೀವಿ ಸರ್ಜಾ ಅವರ ಹೆಸರಿಗೆ ಕಳಂಕ ಬರುವಂತೆ ನಡೆದುಕೊಂಡದ್ದು ಅಕ್ಷಮ್ಯ ಅಪರಾಧ’ ಎಂದು ಜರಿದರು.
https://www.facebook.com/DighvijayNews/videos/230399935040487/
https://www.facebook.com/DighvijayNews/videos/2594193057500856/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + four =
Remember me
