ಸ್ಯಾಂಡಲ್​ವುಡ್​​ನಲ್ಲಿರುವ ಡ್ರಗ್ಸ್​​​ ಜಾಲದ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ.
ಸ್ಯಾಂಡಲ್​ವುಡ್​​ನಲ್ಲಿ ಯಾರ್ಯಾರು ಡ್ರಗ್​ ಸೇವನೆ ಮಾಡುತ್ತಾರೆ..ಯಾರೆಲ್ಲ ಡ್ರಗ್​ ಮಾಫಿಯಾದಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತು. ನನಗೆ ಸರಿಯಾದ ರಕ್ಷಣೆ ಕೊಟ್ಟರೆ ಎಲ್ಲವನ್ನೂ ತಿಳಿಸುತ್ತೇನೆ ಎಂದು ಇಂದ್ರಜಿತ್​ ಹೇಳಿದ್ದರು. ಅದರ ಅನ್ವಯ ಅವರಿಗೆ ಭದ್ರತೆ ನೀಡುವುದಾಗಿ ಸಿಸಿಬಿ ಹೇಳಿದೆ.
ಹಾಗೇ ಇಂದು ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಬೆಳಗ್ಗೆಯಿಂದ ಯಾರ ಕೈಗೂ ಸಿಗದ, ಯಾರ ಫೋನ್​ ಕೂಡ ಪಿಕ್​ ಮಾಡದ ಇಂದ್ರಜಿತ್​ ಅವರನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ಸಿಸಿಬಿ ವಿಚಾರಣೆ ಮಾಡಲಿದೆ. ನಾನು ಎಲ್ಲವನ್ನೂ ಹೇಳಲು ಬಂದಿದ್ದೇನೆ ಎಂದು ಸಿಸಿಬಿ ಕಚೇರಿ ಎದುರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಂದ್ರಜಿತ್​ ಲಂಕೇಶ್​ ಅವರ ಕೈಯಲ್ಲಿ ಫೈಲ್​ ಮತ್ತು ಲ್ಯಾಪ್​ಟಾಪ್​ ಇರುವುದು ತುಂಬ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, 20ಕ್ಕೂ ಹೆಚ್ಚು ಸ್ಯಾಂಡಲ್​ವುಡ್​ ನಟ-ನಟಿಯರ ಹೆಸರನ್ನು ಇಂದು ಬಹಿರಂಗಗೊಳಿಸಲಿದ್ದಾರೆ ಎಂಬ ಮಾಹಿತಿಯೂ ಮೂಲಗಳಿಂದ ಸಿಕ್ಕಿದೆ.
ಹಾಗೇ ಇಂದ್ರಜಿತ್​ ಅವರ ಜತೆ ಸಹಾಯಕ ಮತ್ತು ಅವರ ಕಾರ್​ ಡ್ರೈವರ್​ ಕೂಡ ಇದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
