|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಹೂಡಿಕೆ, ಹೊಸ ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿ ವಿಚಾರದಲ್ಲಿ ದೇಶದ ಐದು ರಾಜ್ಯಗಳ ನಡುವೆ ಪೈಪೋಟಿ ನಡೆದಿದ್ದು, ಕರ್ನಾಟಕವು ಕೈಗಾರಿಕೆ ಕ್ಷೇತ್ರದಲ್ಲಿ ಟಾಪ್ ಫೈವ್ ರಾಜ್ಯಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.
ಗುಜರಾತ್ ರಾಜ್ಯದ ಒಟ್ಟು ಜಿಡಿಪಿಗೆ ಅಲ್ಲಿನ ಕೈಗಾರಿಕೆಗಳು ಶೇ.48.2 ಕೊಡುಗೆ ನೀಡಿದರೆ, ತಮಿಳುನಾಡಿನಲ್ಲಿ ಶೇ.33, ಮಹಾರಾಷ್ಟ್ರದಲ್ಲಿ ಶೇ 28.4 ಪಾಲು ಆ ರಾಜ್ಯಗಳ ಕೈಗಾರಿಕೆಗಳು ಕೊಡುಗೆ ನೀಡುತ್ತಿವೆ. ಕರ್ನಾಟಕದ ಪಾಲು ಶೇ.20.3 ಮಾತ್ರ. ಸೇವಾ ಕ್ಷೇತ್ರದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರು ಇತರ ರಾಜ್ಯಗಳಿಗೆ ಹೋಲಿಸಿದರೆ ಕೈಗಾರಿಕೆಗಳ ಬೆಳವಣಿಗೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣಿಸುತ್ತಿಲ್ಲ.
ಬಜೆಟ್ ಮಂಡನೆ ಜತೆಗೆ ಆರ್ಥಿಕ ಇಲಾಖೆಯು 2020-21ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿ ಪ್ರಕಟಿಸಿದ್ದು, ಇದರಲ್ಲಿ ಪ್ರಸ್ತಾಪವಾದ ಅಂಕಿ-ಸಂಖ್ಯೆ ಗಮನಿಸಿದರೆ, ಗುಜರಾತ್ ಹಾಗೂ ತಮಿಳುನಾಡು ಮೊದಲೆರೆಡು ಸ್ಥಾನದಲ್ಲಿವೆ. ಸೇವಾ ವಲಯದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಪೈಪೋಟಿ ಇದೆ. ಮೊದಲಿಂದಲೂ ಕರ್ನಾಟಕ ಸೇವಾ ವಲಯದಲ್ಲಿ ಮೊದಲ ಸ್ಥಾನದಲ್ಲಿದೆ, ಕೈಗಾರಿಕೆ ಸ್ಥಾಪನೆಗೆ ಹೆಚ್ಚು ಪ್ರಾತಿನಿಧ್ಯ ಇಲ್ಲ. ಹೀಗಾಗಿ ಇದರಲ್ಲೇನು ವಿಶೇಷ ಸಂಗತಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಮಹಾಮಾರಿ ಆರ್ಥಿಕತೆ ಮೇಲೆ ಕರಾಳ ಛಾಯೆ ಬೀರಿದ್ದು, ಸರಣಿ ಲಾಕ್​ಡೌನ್, ಜಾಗತಿಕ ಮಟ್ಟದಲ್ಲಿ ಬೇಡಿಕೆ ಇಳಿಕೆ ಕಾರಣದಿಂದ ಕೈಗಾರಿಕೆ ಪ್ರಗತಿಯಲ್ಲಿ ಕುಂಠಿತವಾಗಿದೆ. ಇದಿಷ್ಟೇ ಅಲ್ಲದೆ, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಿದ್ಯುತ್ ಶುಲ್ಕ ಹೆಚ್ಚಾಗಿದ್ದು, ಕೈಗಾರಿಕೆಗಳಿಗೆ ಇದು ಹೊರಯಾಗಿ ಪರಿಣಮಿಸಿದೆ.
ಸಮಾಧಾನದ ಸಂಗತಿ:ಹೊಸ ಹೂಡಿಕೆಯೊಂದಿಗೆ ಮೊದಲ ಐದು ಲಾಭದಾಯಕ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವಿದೆ. ಹೊಸ ಹೂಡಿಕೆಯಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದೆ. ಅಲ್ಲಿ 1,07,610 ಕೋಟಿ ರೂ. ಹೂಡಿಕೆಯಾಗಿದೆ. ಎರಡನೇ ಸ್ಥಾನ ಗುಜರಾತ್, ಅಲ್ಲಿ 77,892 ಕೋಟಿ ರೂ., ತೆಲಂಗಾಣದಲ್ಲಿ 65,288 ಕೋಟಿ ರೂ., ಉತ್ತರ ಪ್ರದೇಶದಲ್ಲಿ 56,053 ಕೋಟಿ ರೂ. ಹೂಡಿಕೆಯಾಗಿದೆ. ಕರ್ನಾಟಕದಲ್ಲಿ 37,027 ಕೋಟಿ ರೂ. ಹೂಡಿಕೆಯಾಗಿದೆ. ಈ ವರ್ಷದಲ್ಲಿ ದೇಶದ ಹತ್ತು ಪ್ರಮುಖ ಯೋಜನೆಗಳಲ್ಲಿ ಒಂದನ್ನು ಕರ್ನಾಟಕ ಪಡೆದುಕೊಂಡಿದೆ ಎಂಬುದಷ್ಟೇ ಸಮಾಧಾನದ ಸಂಗತಿ.
ಸ್ಟಾರ್ಟ್ ಅಪ್ ಗೊಂದಲ:ಕರ್ನಾಟಕವು ಆವಿಷ್ಕಾರ ಮತ್ತು ಸ್ಟಾರ್ಟ್ ಅಪ್ ಇಕೋ ಸಿಸ್ಟಮ್ೆ ಸಂಬಂಧಿಸಿದಂತೆ ದೇಶದಲ್ಲಿ ಉನ್ನತ ಸಾಧನೆ ಮಾಡುವ ರಾಜ್ಯಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸ್ಪಲ್ಪ ಮಟ್ಟಿನ ಪ್ರಶ್ನೆ ಇದೆ ಎಂದು ಆರ್ಥಿಕ ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ. ಕಳೆದ ಎರಡು ವರ್ಷಗಳ ದತ್ತಾಂಶವು ಕಾರ್ಯಕ್ಷಮತೆ ಸುಧಾರಿಸಿದೆಯೇ ಅಥವಾ ಕಡಿಮೆ ಆಗಿದೆಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗದು. ಹಾಗೆಯೇ ಮುಂಬರುವ ವರ್ಷಗಳಲ್ಲಿ ಕೋವಿಡ್ ಪರಿಣಾಮ ಇರಲಿದ್ದು, ತಕ್ಷಣವೇ ಈ ಬಗ್ಗೆ ಆದ್ಯತೆ ನೀಡಿ ಸಮಸ್ಯೆ ಪತ್ತೆ ಹಚ್ಚಿ ಅಗತ್ಯ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖವಿದೆ.
ಹೆಚ್ಚು ಜನರಿಗೆ ಕೃಷಿ ಆಸರೆ:ಅಚ್ಚರಿ ಸಂಗತಿ ಎಂದರೆ, ಕೋವಿಡ್ ಕಾರಣಕ್ಕೆ ಅತಿ ಹೆಚ್ಚು ಜನ ಕೃಷಿಯಲ್ಲಿ ತೊಡಗಿಕೊಂಡಿದ್ದನ್ನು ಸಮೀಕ್ಷೆ ದಾಖಲಿಸಿದೆ. 2018-19ರಲ್ಲಿ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.42.5 ಜನ ಕೃಷಿಯನ್ನು ದುಡಿಮೆಯಾಗಿ ಅವಲಂಬಿಸಿದ್ದರೆ, 2019-20ರಲ್ಲಿ ಶೇ.45.6 ಆಗಿತ್ತು. ಈ ಅಂಕಿ-ಅಂಶವನ್ನು 2019ರ ಜುಲೈನಿಂದ 2020ರ ಜೂನ್​ವರೆಗೆ ನಡೆಸಿದ ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೆಯಿಂದ ಪಡೆಯಲಾಗಿದೆ. ಇದೇ ಅವಧಿಯಲ್ಲಿ ಕೈಗಾರಿಕೆ ವಲಯದ ಮೇಲೆ ದುಡಿಯುವ ವರ್ಗದ ಅವಲಂಬನೆ ಶೇ.2 ಇಳಿಕೆಯಾಗಿತ್ತು. ಸೇವಾ ವಲಯದಲ್ಲೂ ಇದೇ ರೀತಿ ಶೇ.2.9 ಇಳಿಕೆಯಾಗಿತ್ತು.
ಹಿಂದಿನ ವರ್ಷಗಳ ದುಡಿಯುವ ವರ್ಗದ ಹಂಚಿಕೆಯನ್ನು ಗಮನಿಸಿದರೆ ಕೃಷಿ ಅವಲಂಬಿಸಿದವರಿಗೆ ಅತ್ಯಂತ ಕನಿಷ್ಠ ಆದಾಯ ನೀಡುತ್ತದೆ ಎಂಬುದು ಸ್ಪಷ್ಟ. ಹಾಗೆಯೇ, ರಾಜ್ಯದ ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಇನ್ನೂ ಹೆಚ್ಚಿನ ಬಂಡವಾಳ ಹೂಡುವುದರ ಮೂಲಕ, ಜನರನ್ನು ಇನ್ನಷ್ಟು ಕೌಶಲ ತರಬೇರಿಗೆ ಒಳಪಡಿಸಿ ಹೆಚ್ಚಿನ ಆದಾಯ, ಸಾಮಾಜಿಕ ಸ್ಥಾನ ಹೊಂದಲು ಅವಕಾಶ ನೀಡಬೇಕಿದೆ ಎಂದು ಸಮೀಕ್ಷೆ ವರದಿ ಅಭಿಪ್ರಾಯಪಟ್ಟಿದೆ.
ರಾಜ್ಯದ ಒಟ್ಟು ಜನ ಸಂಖ್ಯೆಯ ಶೇ.59 ಮಂದಿ ಕೈಗಾರಿಕೆ ಮತ್ತು ಸೇವಾ ವಲಯ ಅವಲಂಬಿಸಿದ್ದರೆ, ಕೃಷಿಯನ್ನು ಅವಲಂಬಿಸಿರುವವ ಸಂಖ್ಯೆ ಶೇ.41 ಇದೆ. ದುಡಿಯುವ ವರ್ಗವನ್ನು ಕಡಿಮೆ ಆದಾಯ ನೀಡುವ ಕೃಷಿ ವಲಯದಿಂದ ಹೆಚ್ಚಿನ ಆದಾಯ ನೀಡುವ ಕೈಗಾರಿಕೆ, ಸೇವಾ ವಲಯಕ್ಕೆ ಹೋಗುವಂತೆ ಮಾಡಲು ಸಾಕಷ್ಟು ಪ್ರಮಾಣದ ಬಂಡವಾಳ ಹೂಡಿಕೆ, ಆರ್ಥಿಕ ಬೆಳವಣಿಗೆ ದರದ ಅಗತ್ಯವಿದೆ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ಸೀಮಂತದಲ್ಲಿ ದುರಂತ, ಪಾಲ್ಗೊಂಡ 15 ಜನರಿಲ್ಲ ಈಗ ಜೀವಂತ!; ಆ 9 ಮಂದಿಯಲ್ಲಿ ಭಾರಿ ಆತಂಕ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + two =
Remember me
