|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ಪಡೆದು ಬಳಕೆ ಮಾಡದಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಡೆದಿರುವ ಭೂ ಆಡಿಟ್ ವರದಿ ತಿಂಗಳೊಳಗೆ ಸರ್ಕಾರದ ಕೈ ಸೇರಲಿದೆ. ಆ ನಂತರ ಭೂಮಿ ವಿತರಣೆಗೆ ಪಾರದರ್ಶಕತೆ ತರಲಾಗುತ್ತದೆ. ರಾಜ್ಯದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ ಇಲಾಖೆಯ ಕಾರ್ಯವೈಖರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಭೂಮಿ ಆಡಿಟ್ ಚುರುಕುಗೊಳಿಸಲಾಗಿದೆ. ಕೈಗಾರಿಕೆಗಳ ಸ್ಥಾಪನೆಯ ಮೂಲಕ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಬೇಕೆಂಬ ಕಾರಣಕ್ಕಾಗಿಯೇ ಸರ್ಕಾರ 1.66 ಲಕ್ಷ ಎಕರೆ ಸ್ವಾಧೀನ ಮಾಡಿ ಭೂಬ್ಯಾಂಕ್ ಮಾಡಿತ್ತು. ಅದರಲ್ಲಿ 1.45 ಲಕ್ಷ ಎಕರೆ ಕೈಗಾರಿಕೋದ್ಯಮಿಗಳಿಗೆ ಹಂಚಿಕೆಯಾಗಿದೆ. ಇದರಲ್ಲಿ ಎಷ್ಟು ಭೂಮಿ ಬಳಕೆಯಾಗಿದೆ ಎಂಬ ಮಾಹಿತಿ ಇಲಾಖೆಯಲ್ಲಿ ಲಭ್ಯವಿಲ್ಲ.
ಮತ್ತೊಂದು ಹೂಡಿಕೆದಾರರ ಸಮಾವೇಶಕ್ಕೆ ರಾಜ್ಯ ಸಜ್ಜಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಿಂದಿನ ವರ್ಷಗಳಲ್ಲಿ ಭೂಮಿ ಪಡೆದು ಬಳಕೆ ಮಾಡದಿದ್ದರೆ, ಅದನ್ನು ವಾಪಸು ಪಡೆದು ಹೊಸಬರಿಗೆ ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿಯೇ ಆಡಿಟ್ ಮಾಡಲಾಗುತ್ತಿದೆ. ಸರ್ಕಾರ ‘ಉದ್ಯಮಿ ಆಗು, ಉದ್ಯೋಗ ನೀಡು’ ಎಂಬ ಹೊಸ ಯೋಜನೆ ಆರಂಭಿಸಿದ್ದು, ಯುವ ಸಮುದಾಯವನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತಿದೆ. ಆದ್ದರಿಂದಲೇ ಹಿಂದೆ ಸ್ವಾಧೀನ ಮಾಡಿರುವ ಭೂಮಿ ಸದ್ಬಳಕೆ ಆಗಿರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ಮತ್ತಷ್ಟು ಭೂಮಿ ಸ್ವಾಧೀನ:ರಾಜ್ಯದಲ್ಲಿ ಕೈಗಾರಿಕಾ ಇಲಾಖೆಯ ಬಳಿ ಸುಮಾರು 15 ಸಾವಿರ ಎಕರೆ ಭೂಮಿ ಉಳಿದಿದೆ. ಮುಂದಿನ ಹೂಡಿಕೆದಾರರ ಸಮಾವೇಶದ ವೇಳೆಗೆ ಈ ಪ್ರಮಾಣವನ್ನು 40 ಸಾವಿರ ಎಕರೆಗೆ ಏರಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ. ಅದಕ್ಕಾಗಿ ಎರಡನೇ ಹಂತದ ನಗರಗಳಲ್ಲಿ 25 ಸಾವಿರ ಎಕರೆ ಭೂಮಿ ಸ್ವಾಧೀನ ಮಾಡಲು ನಿರ್ಧರಿಸಿದೆ. ಆ ಪ್ರಕ್ರಿಯೆಯನ್ನು ಭೂಮಿ ಆಡಿಟ್ ಮುಗಿದ ಕೂಡಲೇ ಆರಂಭಿಸಲಿದೆ.
ಮರುವಶ:ಕೈಗಾರಿಕೆಗೆ ಬಳಕೆ ಮಾಡದ ಭೂಮಿಯನ್ನು ಮರುವಶ ಮಾಡಿಕೊಂಡು ಹೊಸದಾಗಿ ಉದ್ದಿಮೆ ಸ್ಥಾಪನೆಗೆ ಬರುವವರಿಗೆ ನೀಡಲು ನಿರ್ಧರಿಸಿದೆ. ಈಗಾಗಲೇ ಸುಮಾರು 500 ಎಕರೆ ಭೂಮಿ ಮರುವಶವಾಗಿದೆ ಎಂದು ಮೂಲಗಳು ಹೇಳುತ್ತವೆ.
ಮೂರನೇ ಸಂಸ್ಥೆಯಿಂದ ಆಡಿಟ್:ಇಲಾಖೆಯ ಅಧಿಕಾರಿಗಳು ಸರಿಯಾದ ವಿವರ ನೀಡುತ್ತಿಲ್ಲ. ಆದ್ದರಿಂದ ಈ ಬಾರಿ ಮೂರನೇ ಸಂಸ್ಥೆಯ ವತಿಯಿಂದ ಆಡಿಟ್ ಮಾಡಿಸಲಾಗುತ್ತಿದೆ. 1.45 ಲಕ್ಷ ಎಕರೆಯ ಪೂರ್ತಿ ವಿವರಗಳನ್ನು, ಕೈಗಾರಿಕೆಗಳಿಗೆ ಹಂಚಿಕೆಯಾಗಿರುವ ಪ್ರತಿ ಪ್ಲಾಟ್​ನ ವಿವರಗಳನ್ನು ಕಲೆ ಹಾಕಲಾಗುತ್ತದೆ. ಭೂಮಿ ಬ್ಯಾಂಕ್​ನ ಸಂಪೂರ್ಣ ವಿವರಗಳನ್ನು ಡ್ರೋನ್ ಸರ್ವೆ ಮಾಡಲಾಗುತ್ತದೆ. ವಿಡಿಯೋ ಮತ್ತು ಪೋಟೋಗಳನ್ನು ಸಹ ಆಡಿಟ್ ವರದಿಯ ಜತೆ ಲಗತ್ತಿಸುವುದು ಕಡ್ಡಾಯ.
ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿಯ ಅಗತ್ಯವಿದೆ. ಈವರೆಗೆ ಭೂಮಿ ನೀಡಿರುವ ಬಗ್ಗೆ ಸರಿಯಾದ ವಿವರಗಳೇ ಲಭ್ಯವಿಲ್ಲ. ಬಾಕಿ ಬರಬೇಕಾಗಿರುವ ಸುಮಾರು 5 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿಲ್ಲ. ಆದ್ದರಿಂದ ಭೂ ಆಡಿಟ್ ಮಾಡುತ್ತೇವೆ. ಅಧಿಕಾರಿಗಳಿಂದ ಮಾಡಿಸದೇ ಥರ್ಡ್ ಪಾರ್ಟಿ ಕಡೆಯಿಂದ ಮಾಡಿಸಲಾಗುತ್ತಿದೆ. ಪಾರದರ್ಶಕತೆ ಮೂಲಕ ಹೆಚ್ಚಿನ ಉದ್ದಿಮೆಗಳು ಸ್ಥಾಪನೆ ಆಗಬೇಕು ಎಂಬುದು ಮುಖ್ಯಮಂತ್ರಿಗಳ ಉದ್ದೇಶವಾಗಿದೆ.
|ಮುರುಗೇಶ ಆರ್. ನಿರಾಣಿಕೈಗಾರಿಕೆ ಸಚಿವ
ಕೈಗಾರಿಕೆಗೆ ನೀಡಿರುವ ಭೂಮಿ ಸರಿಯಾಗಿ ಬಳಕೆಯಾಗದಿರುವುದು, ಕೆಐಎಡಿಬಿಯಲ್ಲಿ ಕೈಗಾರಿಕೋದ್ಯಮಿಗಳಿಗೆ ಕಿರುಕುಳ ಸೇರಿ ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಇರುವ ಅಡ್ಡಿಗಳ ಬಗ್ಗೆ ಇತ್ತೀಚಿಗೆ ನಡೆದ ಇಲಾಖೆಯ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೂಮಿ ಪಡೆದು ಐದು ವರ್ಷವಾದರೂ ಬಳಕೆ ಮಾಡದಿರುವ ಉದ್ಯಮಿಗಳ ಪಟ್ಟಿ ಮಾಡುವಂತೆ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಆ ಪಟ್ಟಿ ಸಿದ್ಧವಾದ ಕೂಡಲೇ ಸ್ವತಃ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ನಿರ್ದೇಶನ ನೀಡುವುದಾಗಿಯೂ ಹೇಳಿದ್ದಾರೆ. ಆದ್ದರಿಂದ ಇಲಾಖೆ ಆಡಿಟ್ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.
ಮೊನ್ನೆ ಎಚ್​ಡಿಕೆ, ನಿನ್ನೆ ಡಿಕೆಶಿ, ಇಂದು ಮೊಯ್ಲಿ!; ಏನದು?

ಕೆಜಿಎಫ್-​2 ಹವಾ: ಮದುವೆ ಆಮಂತ್ರಣದಲ್ಲೂ ‘ವಯಲೆನ್ಸ್​’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + ten =
Remember me
