ಬೆಂಗಳೂರು:ನಾಡಿನ ಇತಿಹಾಸ, ಪರಂಪರೆ, ಸಾಮಾಜಿಕ, ಸಾಂಸ್ಕೃತಿಕ ಹೆಗ್ಗುರುತುಗಳಾದ ಸ್ಮಾರಕಗಳು, ಪ್ರಾಚ್ಯಾವಶೇಷಗಳ ರಕ್ಷಣೆ ಮಾಡಿದರಷ್ಟೇ ಸಾಲದು. ಸಂರಕ್ಷಣೆ, ಪುನರುಜ್ಜೀವನ ಮತ್ತು ಸಮರ್ಪಕ ನಿರ್ವಹಣೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ ಅನೇಕ ಉದ್ಯಮಿಗಳು, ಈ ನಿಟ್ಟಿನಲ್ಲಿ ಸ್ವಯಂ ಆಸಕ್ತಿ ತೋರಿಸಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಮ್ಮ ಸ್ಮಾರಕ ಯೋಜನೆಯ ಸಂವಾದ ಸೋಮವಾರ ನಡೆಯಿತು. ನಮ್ಮ ಸ್ಮಾರಕ ಯೋಜನೆಯ ಉದ್ದೇಶ ಲಪ್ರದಗೊಳಿಸಲು ಡಿಜಿಟಲ್ ವೇದಿಕೆ ಸೃಷ್ಟಿಸಿ, ಆಯ್ದ 280 ಸ್ಮಾರಕಗಳನ್ನು ತಂತ್ರಜ್ಞಾನದ ನೆರವಿನೊಂದಿಗೆ ಜೋಡಿಸಿರುವುದನ್ನು ಸಂವಾದದಲ್ಲಿ ಪಾಲ್ಗೊಂಡವರು ಪ್ರಶಂಸಿಸಿದರು.
ಈ ವೇದಿಕೆ ಮೂಲಕ ಆಸಕ್ತರು ಸ್ಮಾರಕಗಳನ್ನು ದತ್ತು ಪಡೆಯುವುದು ಸುಲಭ. ಮುಂದಿನ ಪೀಳಿಗೆಗೆ ನಮ್ಮತನ ಅರ್ಥ ಮಾಡಿಸಬೇಕೆಂಬ ಸರ್ಕಾರದ ಕಾಳಜಿ ಅನುಕರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಂಸ್ಥಿಕ ಸಾಮಾಜಿಕ ನಿಧಿ ಸಮರ್ಪಕ ಬಳಕೆಗೆ ಸ್ವಾಯತ್ತ ಘಟಕ, ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯಲು ಉತ್ತಮ ಸೌಲಭ್ಯ, ಸ್ಥಳೀಯರಲ್ಲಿ ಹೆಮ್ಮೆ ಹಾಗೂ ಅಭಿಮಾನ ಹೆಚ್ಚಿಸುವುದಕ್ಕೆ ಪ್ರೋತ್ಸಾಹ ನೀಡಬೇಕೆಂಬ ಅಭಿಪ್ರಾಯಗಳು ವ್ಯಕ್ತವಾದವು.
ಭಾರತದ ಮಾಜಿ ರಾಯಭಾರಿ, ಡೆಕ್ಕನ್ ಹೆರಿಟೇಜ್ ೌಂಡೇಷನ್ ಇಂಡಿಯಾ ಅಧ್ಯಕ್ಷೆ ವಿಜಯಲತಾರೆಡ್ಡಿ ಮಾತನಾಡಿದ ಸ್ಮಾರಕಗಳ, ಪ್ರಾಚ್ಯಾವಶೇಷಗಳ ರಕ್ಷಣೆ, ಸಂರಕ್ಷಣೆ, ಪುನರುದ್ಧಾರದ ನಂತರ ನಿರ್ವಹಣೆಗೆ ಮಹತ್ವದಪಾತ್ರವಹಿಸಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಗಮನನೀಡಬೇಕು ಎಂದರು.
ಪರಂಪರೆಯನ್ನು ಸಂರಕ್ಷಿಸಲು ಹಾಗೂ ಉತ್ತೇಜಿಸುವ ಸಲುವಾಗಿ ಡೆಕ್ಕನ್ ಹೆರಿಟೇಜ್ ಸಂಸ್ಥೆಯಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳ 13 ಪಾರಂಪರಿಕ ಸಂರಕ್ಷಣಾ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಹಂಪಿ, ಬೀದರ್ ಮತ್ತು ಮೈಸೂರಿನಲ್ಲಿ ಸದರಿ ಯೋಜನೆ ಹಮ್ಮಿಕೊಳ್ಳಲಾಗಿದೆ.
ಸೃಷ್ಟಿ ೌಂಡೇಷನ್‌ನ ಸಂಜಯ್ ಅವರು ಸ್ಮಾರಕ ದತ್ತು ತೆಗೆದುಕೊಳ್ಳುವ ಬದಲಿಗೆ ತಾಂತ್ರಿಕ ಸಿಬ್ಬಂದಿ ನೆರವು ನೀಡುವುದಾಗಿ ತಿಳಿಸಿದರು. ಸ್ಥಳೀಯರು, ಶಾಲಾ-ಕಾಲೇಜುಗಳ ಹಂತದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ವಿಜಯಪುರ ನಗರದಲ್ಲಿರುವ ತಾಜ್‌ಬಾವಿ ಸ್ಮಾರಕ ಸಂರಕ್ಷಣೆಗೆ ದತ್ತು ಪಡೆದಿರುವ ವರ್ಲ್ಡ್ ಮಾನ್ಯುಮೆಂಟ್ ಂಡ್ ಯೋಜನಾ ನಿರ್ದೇಶಕ ಶರತ್ ಚಂದ್ರ, ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆ ನವೀಕರಣ ಒಡಂಬಡಿಕೆ ಮಾಡಿಕೊಂಡಿರುವ ಬ್ರಿಗೇಡ್ ೌಂಡೇಷನ್ ಟ್ರಸ್ಟಿ ಎಂ.ಆರ್.ಜಯಶಂಕರ್, ಹೊಯ್ಸಳ ವಾಸ್ತುಶಿಲ್ಪ ಸಮೂಹ ವಿಶ್ವಪಾರಂಪರಿಕ ಪಟ್ಟಿಗೆ ಸೇರಲು ಸಮಗ್ರ ವರದಿ ಸಿದ್ಧಪಡಿಸಿದ ಇಂಟ್ಯಾಕ್ ಸಂಸ್ಥೆಯ ಯೋಜನಾ ನಿರ್ದೇಶಕ ಪಂಕಜ್ ಮೋದಿ ಇನ್ನಿತರರು ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಎಲ್ಲರ ಅಭಿಪ್ರಾಯ, ಸಲಹೆಗಳಿಗೆ ಪ್ರತಿಕ್ರಿಯಿಸಿ, ಹಂಪಿ ಪ್ರಸಿದ್ಧಿ ಪಡೆದು ವಿಶ್ವದ ಎಲ್ಲ ಪ್ರವಾಸಿಗರನ್ನು ಸೆಳೆಯಲು ಸಾಕಷ್ಟು ವರ್ಷಗಳು ಹಿಡಿದಿದ್ದು, ನಮ್ಮ ಸ್ಮಾರಕ ಯೋಜನೆಯಡಿ ದತ್ತು ಪಡೆದು ಸಂರಕ್ಷಿಸಲಿರುವ ಸ್ಮಾರಕ, ಪ್ರಾಚ್ಯಾವಶೇಷಗಳು ಕ್ರಮೇಣ ಪ್ರಸಿದ್ಧಿಯಾಗಲಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಅರಕ್ಷಿತ, ರಾಷ್ಟ್ರೀಯ ಸಂರಕ್ಷಿತ 608, ರಾಜ್ಯ ಸಂರಕ್ಷಿತ 844 ಪ್ರಾಚ್ಯಾವಶೇಷ, ಸ್ಮಾರಕಗಳಿವೆ. ರಾಜ್ಯ ಸಂರಕ್ಷಿತ ಸ್ಮಾರಕಗಳ ಪೈಕಿ 280 ಆಯ್ಕೆ ಮಾಡಿಕೊಂಡು ನಮ್ಮ ಸ್ಮಾರಕ ಯೋಜನೆಯ ಡಿಜಿಟಲ್ ವೇದಿಕೆಯಲ್ಲಿ ಅಳವಡಿಸಲಾಗಿದೆ ಎಂದರು.
ಡಿಜಿಟಲ್ ವೇದಿಕೆ ನಿರ್ಮಾಣ, ತಂತ್ರಜ್ಞಾನದ ನೆರವಿನೊಂದಿಗೆ 280 ಸ್ಮಾರಕಗಳ ಅಳವಡಿಕೆ, ಬೆರಳ ತುದಿಯಲ್ಲೇ ಸಮಗ್ರ ಮಾಹಿತಿ ಲಭ್ಯವಾಗುವಂತೆ ಮಾಡುವಲ್ಲಿ ಕಲ್ಕಿ ೌಂಡೇಷನ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಶ್ರಮಿಸಿದ್ದು, ಯೋಜನಾ ಘಟಕದ ನಿರ್ವಹಣೆಗೂ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ಎಚ್.ಕೆ.ಪಾಟೀಲ ಮಾಹಿತಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fourteen =
Remember me
