ಬೆಂಗಳೂರು:ಕರೊನಾ ತಂದ ಲಾಕ್​ಡೌನ್​ನಿಂದಾಗಿ ರಾಜ್ಯದ ಕೈಗಾರಿಕೆ ಕ್ಷೇತ್ರ ನಲುಗಿದೆ. ಮುಂದೇನು ಎಂಬ ಗೊಂದಲ ಸರ್ಕಾರ ಹಾಗೂ ಕೈಗಾರಿಕೆ ವಲಯದಲ್ಲಿ ಹೆಮ್ಮರವಾಗಿ ನಿಂತಿರುವ ಸಂದರ್ಭದಲ್ಲೇ ಕರೊನೋತ್ತರ ಕೈಗಾರಿಕೆ ಬೆಳವಣಿಗೆ ಬಗ್ಗೆ ಮಾಜಿ ಸಚಿವ ಮುರುಗೇಶ ನಿರಾಣಿ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ. ಸ್ವತಃ ಕೈಗಾರಿಕೋದ್ಯಮಿಯಾಗಿ, ಕೈಗಾರಿಕೆ ಇಲಾಖೆ ನಿಭಾಯಿಸಿದ ಅನುಭವ ಹೊಂದಿರುವ ನಿರಾಣಿ ಸವಾಲುಗಳನ್ನು ಎದುರಿಸುವ ಹಾಗೂ ಸರ್ಕಾರ ಅಗತ್ಯವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವಿಜಯವಾಣಿ ಜತೆ ಅಭಿಪ್ರಾಯ ಹಂಚಿ ಕೊಂಡಿದ್ದಾರೆ.
‘ಕೋವಿಡ್ ಸ್ವದೇಶಿ ಹಾಗೂ ಸ್ವಾವಲಂಬನೆಯ ಬಹು ದೊಡ್ಡ ಪಾಠ ಕಲಿಸಿದೆ. ವಿದೇಶಿ ಉತ್ಪನ್ನಗಳ ಬದಲು ದೇಶಿಯ ಉತ್ಪಾದನೆಗೆ ದಾರಿ ಮಾಡಿಕೊಟ್ಟಿದೆ. ಪರಾವಲಂಬಿ ಭಾವನೆ ಯಿಂದ ಹೊರಬರಲು ಇದು ಸಕಾಲ’ ಎಂದು ಅವರು ದೇಶದ ಮುಂದಿರುವ ಅವಕಾಶ ಗಳನ್ನು ತೆರೆದಿಡುತ್ತಾರೆ.
ಇದನ್ನೂ ಓದಿ:ತಾಯ್ನಡಿಗೆ ತೆರಳಿದ ವಲಸೆ ಕಾರ್ಮಿಕರು
‘ರಾಜ್ಯ ಸರ್ಕಾರ ವಿದೇಶಿ ಉದ್ಯಮಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಕೈಗಾರಿಕಾ ನೀತಿ (2020-2025)ಯನ್ನು ಜಾರಿಗೆ ತರಬೇಕು. ಏಕಗವಾಕ್ಷಿ ಯೋಜನೆಯಡಿ ಪರವಾನಗಿ ನೀಡುವುದು, ತೆರಿಗೆ ರಿಯಾಯಿತಿ ಸೇರಿ ವಿಶೇಷ ಪ್ಯಾಕೇಜ್ ಘೋಷಿಸಿ ಬಂಡವಾಳ ಆಕರ್ಷಿಸಬೇಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
‘ನಾನು ಬೃಹತ್ ಕೈಗಾರಿಕಾ ಸಚಿವನಾಗಿದ್ದಾಗ ಉದ್ಯಮಗಳಿಗೆ ಹೈಲೆವಲ್ ಕಮಿಟಿ ಒಪ್ಪಿದ 24 ಗಂಟೆಯಲ್ಲೇ ಸರ್ಕಾರಿ ಆದೇಶ ಕೊಡುತ್ತಿದ್ದೆವು. ಅಂತಹ ಪದ್ಧತಿ ಜಾರಿಗೆ ತರಬೇಕಾಗಿದೆ. ಈ ವಾತಾವರಣದಲ್ಲಿ ಕೈಗಾರಿಕೆಗಳಿಗೆ ಸಬ್ಸಿಡಿ ಬೇಡ, 2 ವರ್ಷ ಮೆರಿಟೋರಿಯಂ ಕೊಡಬೇಕು, ಅನುತ್ಪಾದಕ ಆಸ್ತಿ ನಿಯಮ ಅಡ್ಡಿ ಬಾರದಂತೆ ಸಾಲ ಮರು ಹೊಂದಾಣಿಕೆ ಮಾಡಬೇಕು. ಆಗ ಕೈಗಾರಿಕೆಗಳು ಉಸಿರಾಡಲು ಅನುಕೂಲವಾಗುತ್ತದೆ. ಕೋವಿಡ್​ನಿಂದಾಗಿ ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚು ಆದ್ಯತೆ ಸಿಗುತ್ತಿದೆ. ವಿದೇಶಿ ವಸ್ತುಗಳ ಅವಲಂಬನೆ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಕೈಗಾರಿಕೆಗಳೂ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ’ ಎಂದು ಮುರುಗೇಶ ನಿರಾಣಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ:ರಿಲಯನ್ಸ್​ನಿಂದ ಹೊಸ ಸರ್ವೀಸ್ ಪ್ರಾರಂಭ​; ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಪ್ರತಿಸ್ಪರ್ಧೆ ಕೊಡೋಕೆ ಬರ್ತಿದೆ ‘ಜಿಯೋ ಮಾರ್ಟ್​’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
