ಉಡುಪಿ:ಕಂಠಪೂರ್ತಿ ಕುಡಿದ ಶಿಕ್ಷಕನೊಬ್ಬ ಶಾಲಾ ಜಗುಲಿಯಲ್ಲಿ ನಿದ್ರಿಸಿರುವ ಘಟನೆ ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ತನ್ನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದ್ದ ಶಿಕ್ಷಕ ಕೃಷ್ಣಮೂರ್ತಿ, ಇದೀಗ ವಿದ್ಯಾರ್ಥಿಗಳ ಮುಂದೆ ಕುಡಿದು ಮಲಗಿದ್ದಾನೆ. ಶಿಕ್ಷಕನ ಅವಾಂತರವನ್ನು ಸ್ಥಳೀಯರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶಿಕ್ಷಕ ಕೃಷ್ಣಮೂರ್ತಿ ರಾತ್ರಿ ಕುಡಿದ ಮತ್ತಿನಲ್ಲಿ ಬಂದು ಶಾಲಾ ಜಗುಲಿಯಲ್ಲಿ ಮಲಗಿದ್ದಾನೆ. ಕಂಠಪೂರ್ತಿ ಕುಡಿದಿ ಶಿಕ್ಷಕನಿಗೆ ಬೆಳಗ್ಗಾದ್ದೂ ಅರಿವಿಗೆ ಬಂದಿಲ್ಲ. ವಿದ್ಯಾರ್ಥಿಗಳು ಎಂದಿನಂತೆ ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದಿದ್ದಾರೆ. ಈ ವೇಳೆ ಕೃಷ್ಣಮೂರ್ತಿ ಕುಡಿತ ಮತ್ತಿನಲ್ಲಿ ಮಲಗಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ಬಂದು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಕನ ದುರ್ವತನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಿಕ್ಷಕ ಕೃಷ್ಣಮೂರ್ತಿ ಮಾಡಿಕೊಂಡಿರುವ ಅವಾಂತರ ಶಾಲೆಯ ಇತರೆ ಶಿಕ್ಷಕರು ಕೂಡಾ ತಲೆತಗ್ಗಿಸುವಂತಾಗಿದೆ. ಶಿಕ್ಷಕ ಕೃಷ್ಣಮೂರ್ತಿ ಮಾಡಿಕೊಂಡಿರುವ ವರ್ತನೆಯನ್ನು ಇದೀಗ ಸಾರ್ವಜನಿಕರು ಖಂಡಿಸುತ್ತಿದ್ದು, ತಪ್ಪಿತಸ್ಥ ಶಿಕ್ಷಕನನ್ನು ಅಮಾನತು ಮಾಡುವಂತೆ ಆಗ್ರಹಿಸುತ್ತಿದ್ದಾರೆ.
Sign in to your account
Please enter an answer in digits:one + 13 =
Remember me
