ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಪ್ರಕರಣ ಕಡಿಮೆಯಾಗುತ್ತಿದ್ದರೂ ಮಕ್ಕಳಲ್ಲಿ ಸೋಂಕು ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ವರದಿಯಾಗುತ್ತಿರುವ ದೈನಂದಿನ ಪ್ರಕರಣಗಳಲ್ಲಿ ಶೇ. 6ರಷ್ಟು ಮಕ್ಕಳಲ್ಲಿ ಸೋಂಕು ಕಂಡುಬರುತ್ತಿದೆ.
ಮಾರ್ಚ್ ತಿಂಗಳಲ್ಲಿ ಮಕ್ಕಳಲ್ಲಿ ಸೋಂಕು ಪ್ರಮಾಣ ಶೇ. 3 ಇತ್ತು. ಜೂ. 7ರಿಂದ 22ರ ಅವಧಿಯಲ್ಲಿ ಇದು ಶೇ. 6ಕ್ಕೆ ಏರಿಕೆಯಾಗಿದೆ. ಅದರಲ್ಲೂ 12 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಲಾಕ್​ಡೌನ್ ಅವಧಿಯಲ್ಲೇ ಎರಡು ಲಕ್ಷಕ್ಕೂ ಅಧಿಕ ಮಕ್ಕಳನ್ನು ಸೋಂಕು ಬಾಧಿಸಿದೆ. 70ಕ್ಕೂ ಹೆಚ್ಚು ಮಕ್ಕಳನ್ನು ಬಲಿ ಪಡೆದುಕೊಂಡಿದೆ. ಈಗ ಲಾಕ್​ಡೌನ್ ತೆರವುಗೊಂಡಿದ್ದು, ಜನರ ಓಡಾಟ ಹೆಚ್ಚಾಗಿದೆ. ಈ ವೇಳೆ ಮಕ್ಕಳಲ್ಲಿ ಸೋಂಕು ಏರಿಕೆಯಾಗುತ್ತಿರುವುದು ಭೀತಿ ಮೂಡಿಸಿದೆ. ನವಜಾತ ಶಿಶುಗಳಲ್ಲೂ ಸೋಂಕು ಕಂಡುಬರುತ್ತಿದೆ. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಒಂದರಲ್ಲೇ 5-6 ನವಜಾತ ಶಿಶುಗಳು ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿವೆ.
ನಿರ್ಲಕ್ಷ್ಯ ಬೇಡ:ಮಕ್ಕಳಲ್ಲಿ ಕೆಮ್ಮು, ಜ್ವರ, ವಾಂತಿ, ಭೇದಿ ಸೇರಿ ಆರೋಗ್ಯದಲ್ಲಿ ವ್ಯತ್ಯಾಸವಾದರೆ ನಿರ್ಲಕ್ಷಿಸಬಾರದು. ವೈದ್ಯರ ಸಲಹೆ ಪಡೆದು ಕೋವಿಡ್ ಪರೀಕ್ಷೆ ಮಾಡಿಸಬೇಕು. ಸೋಂಕು ತಗ್ಗಿತು ಎಂದು ನಿರ್ಲಕ್ಷ್ಯ ಮಾಡದೆ, ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದನ್ನು ಮರೆಯಬಾರದು ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಲಕ್ಷ್ಮೀಪತಿ ತಿಳಿಸಿದ್ದಾರೆ.
ಲಕ್ಷಣರಹಿತ:2ನೇ ಅಲೆಯಲ್ಲಿ 0-9 ವರ್ಷದೊಳಗಿನ 58, 069 (34 ಸಾವು) ಮಕ್ಕಳು ಸೋಂಕಿತರಾಗಿದ್ದಾರೆ. 10-19 ವರ್ಷ ವಯೋಮಾನದ 1,47,556 (43 ಸಾವು) ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಹೆಚ್ಚಿನ ಮಕ್ಕಳು ರೋಗ ಲಕ್ಷಣ ರಹಿತರಾಗಿದ್ದು, ಕೆಲವರು ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣಗಳನ್ನು ಎದುರಿಸಿದ್ದಾರೆ. ಬಹುತೇಕ ಮಕ್ಕಳು 8-10 ದಿನಗಳಲ್ಲಿ ಗುಣ ಹೊಂದಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 34 ಮಂದಿ 18 ವರ್ಷದೊಳಗಿನವರಾಗಿದ್ದು, ಇವರಲ್ಲಿ ಈವರೆಗೆ ಶೇ. 2.2 ಮಕ್ಕಳು ಸೋಂಕಿನಿಂದ ಬಳಲಿದ್ದಾರೆ. ಸೋಂಕಿತ ಮಕ್ಕಳಲ್ಲಿ ಮರಣ ಪ್ರಮಾಣ ಶೇ. 0.1 ಇರುವುದು ಕೊಂಚ ಸಮಾಧಾನದ ಸಂಗತಿ. ಆದರೆ ಸೋಂಕಿನಿಂದ ಚೇತರಿಸಿಕೊಂಡ ಅನೇಕ ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಇನ್​ಫ್ಲಮೇಟರಿ ಸಿಂಡ್ರೋಮ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕು. ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗಮನಿಸಿ ಚಿಕಿತ್ಸೆ ಕೊಡಿಸಬೇಕು. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುವ ಆಹಾರ ನೀಡಬೇಕು. ಜತೆಗೆ ಮಕ್ಕಳು ಚಟುವಟಿಕೆಯಿಂದ ಇರುವಂತೆ ವ್ಯಾಯಾಮ ಹಾಗೂ ಮನೆಯ ಆವರಣದಲ್ಲೇ ಸಾಧ್ಯವಾಗುವಂತಹ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿ.
|ಡಾ. ನಿಜಗುಣಮಕ್ಕಳ ತಜ್ಞ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ
‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 10 =
Remember me
