ಬೆಂಗಳೂರು:ರಾಜ್ಯದಲ್ಲಿ ಕರೊನಾ 2ನೇ ಅಲೆಯ ಆರ್ಭಟ ಇಳಿಕೆ ಕಾಣುತ್ತಿರುವ ಸಂದರ್ಭದಲ್ಲೇ ಸಾಂಕ್ರಾಮಿಕ ರೋಗಗಳ ಭೀತಿ ಜನರನ್ನು ಕಾಡಲಾರಂಭಿಸಿದೆ. ಕಳೆದೊಂದು ವಾರದಿಂದ ಡೆಂ, ಚಿಕೂನ್​ ಗುನ್ಯಾ, ವಾಂತಿ&ಭೇದಿ, ಟೈಾಯಿಡ್​ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಏರಿಕೆ ಆಗಿರುವ ನಡುವೆಯೇ ಮುಂಗಾರು ಶುರುವಾಗಿರು ವುದರಿಂದ ರೋಗ ಗಳು ಇನ್ನಷ್ಟು ಹರಡುವ ಪರಿಸ್ಥಿತಿ ನಿರ್ಮಾಣವಾಗಿದೆ.
| ಪಂಕಜ ಕೆ.ಎಂ
ರಾಜ್ಯದಲ್ಲಿ ಕರೊನಾ ಲಾಕ್​ಡೌನ್​ ಜಾರಿಯಲ್ಲಿದ್ದರಿಂದ ಸಾಂಕ್ರಾಮಿಕ ರೋಗಗಳ ಸಂಖ್ಯೆ ನಿಯಂತ್ರಣದಲ್ಲಿತ್ತು. ಈಗ ಮುಂಗಾರು ಆರ್ಭಟದ ಜತೆಗೆ ಲಾಕ್​ಡೌನ್​ ಕೂಡ ತೆರವಾಗುತ್ತಿರುವುದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಾಗುತ್ತಿದೆ.
1335 ಪ್ರಕರಣ: ಕೋವಿಡ್​ ನಿಯಮಗಳ ಪಾಲನೆ ಹಾಗೂ ಲಾಕ್​ಡೌನ್​ ನಡುವೆಯೂ (ಜನವರಿಯಿಂದ ಜೂ.15ರವರೆಗೆ ) 944 ಡೆಂ ಹಾಗೂ 391 ಚಿಕೂನ್​ ಗುನ್ಯಾ ಪ್ರಕರಣ ಬೆಳಕಿಗೆ ಬಂದಿವೆ.
ಯಾವ್ಯಾವ ರೋಗ ಭೀತಿ: ಮುಂಗಾರು ಕಾಲಿಟ್ಟಿರುವುದರಿಂದ ಡೆಂ, ಚಿಕೂನ್​ ಗುನ್ಯಾ, ಮಲೇರಿಯಾ, ಗ್ಯಾಸ್ಟ್ರೊ ಎಂಟರಾಲಜಿಸ್ಟ್​, ಟೈಾಯಿಡ್​, ಹೆಪಟೈಟಿಸ್​ ಬಿ, ಲೆಪ್ಟೋಸ್ಪೆ$ರ್​ ಇತ್ಯಾದಿ ಸಾಂಕ್ರಾಮಿಕ ರೋಗಗಳು ಹಾಗೂ ವೈರಾಣು ಜ್ವರ ಬರುವ ಸಾಧ್ಯತೆಗಳು ಇವೆ.
ರೋಗಿಗಳು ಹೆಚ್ಚಳ: ಕಳೆದೊಂದು ವಾರದಿಂದ ಆಸ್ಪತ್ರೆಗಳಲ್ಲಿ ಶೀತಜ್ವರ, ವಾಂತಿಭೇದಿ, ಬ್ಯಾಕ್ಟೀರಿಯಾ ಮತ್ತು ಅಮಿಬಿಯನ್​ ಆಮಶಂಕೆ, ಜಾಂಡೀಸ್​, ಟೈಾಯಿಡ್​ ಚಿಕಿತ್ಸೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಮಕ್ಕಳೇ ಹೆಚ್ಚಿನವರಾಗಿದ್ದಾರೆ ಎಂಬುದು ವೈದ್ಯರ ಮಾಹಿತಿ. ಪ್ರಸ್ತುತ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಲಾಕ್​ ಡೌನ್​ ತೆರವಾಗುತ್ತಿರುವುದರಿಂದ ಆರೋಗ್ಯ ಕಾಳಜಿ ವಹಿಸಬೇಕಾದ್ದು ಅತ್ಯಗತ್ಯ. ಜನ ರ್ನಿಲಕ್ಷ$್ಯ ಮಾಡಿದರೆ ಕೋವಿಡ್​ ಜತೆಗೆ ಕೋವಿಡ್​ರಹಿತ ಕಾಯಿಲೆಗಳನ್ನೂ ಎದುರಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಡೆಂ ರೋಗಲಕ್ಷಣ: ದಿಢೀರ್​ ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆನೋವು, ತೋಳು, ಮೈ&ಕೈ ನೋವು, ಅತಿಸಾರ ಇವು ಡೆಂಯ ಆರಂಭಿಕ ಹಂತ. ಗಂಭೀರ ಹಂತದಲ್ಲಿ ಕರುಳಿನಲ್ಲಿ ರಕ್ತಸ್ರಾವ, ಮೈಯಲ್ಲಿ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ. ಹವಾಮಾನಕ್ಕೂ ಮತ್ತು ಕೋವಿಡ್​ಗೂ ಸಂಬಂಧವಿಲ್ಲ: ಹವಾಮಾನ ಬದಲಾವಣೆಗೂ ಕೋವಿಡ್​ ಸೋಂಕು ಹರಡುವಿಕೆಗೂ ಯಾವುದೇ ಸಂಬಂಧವಿಲ್ಲ. ಮಳೆ ಹೆಚ್ಚಾದರೆ ಕರೊನಾ ಸೋಂಕು ಉಲ್ಬಣವಾಗುವುದಿಲ್ಲ. ಈಗಾಗಲೇ ಹಲವು ಅಧ್ಯಯನಗಳನ್ನು ನಡೆಸಲಾಗಿದ್ದು, ಹವಾಮಾನ ಬದಲಾಗುವುದರಿಂದ ಸೋಂಕಿನಲ್ಲಿ ಏರಿಳಿತ ಆಗಿರುವುದು ಸಾಬೀತಾಗಿಲ್ಲ. ಸದ್ಯ ಲಾಕ್​ಡೌನ್​ ತೆರವಾಗಿದ್ದು ಜನರ ಓಡಾಟ ಹೆಚ್ಚಾಗಿದೆ. ಈ ವೇಳೆ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮರೆತರೆ ಕೋವಿಡ್​ ಮತ್ತೆ ಹೆಚ್ಚಾಗಲಿದೆ. ಹಾಗಾಗಿ ಜನರು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಸಾಂಕ್ರಾಮಿಕ ರೋಗಗಳ ತಜ್ಞ ಹಾಗೂ ಕೋವಿಡ್​ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ವಿ. ರವಿ.
ಕಾಳಜಿ ವಹಿಸಿ? ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ರ್ನಿಲಸದೆ ವೈದ್ಯರಲ್ಲಿ ತೋರಿಸಿ? ಶುದ್ಧ ಮತ್ತು ಕುದಿಸಿ ಆರಿಸಿದ ನೀರನ್ನು ಕುಡಿಯಿರಿ? ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್​ ಅಥವಾ ಸೊಳ್ಳೆ ನಿವಾರಕ ಬಳಸಿ? ಪ್ರಾತೆ, ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿ ಇಡಬೇಡಿ? ನೀರು ಶೇಖರಣಾ ಟ್ಯಾಂಕ್​ಗಳ ಮುಚ್ಚಳಗಳನ್ನು ಭದ್ರವಾಗಿ ಮುಚ್ಚಿಡಿ? ಮನೆಯ ಸುತ್ತಮುತ್ತ ಹಾಗೂ ತಾರಸಿ ಮೇಲೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ? ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ? ಕೈ ಸ್ವಚ್ಛತೆ ಸೇರಿದಂತೆ ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು
ಹೇಗೆಲ್ಲ ಹರಡುತ್ತೆ?? ತಿಳಿನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್​ ಈಜಿಪ್ಟೆ ೃ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂ ಬರುತ್ತದೆ. ಈ ಸೊಳ್ಳೆಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ. ಹಗಲು ಹೊತ್ತಿನಲ್ಲಿ ಕಚ್ಚುವ ಈ ಸೊಳ್ಳೆ ಸಂಗ್ರಹಿಸಿಟ್ಟ ತಿಳಿನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ.? ಮಳೆಗಾಲದಲ್ಲಿ ಅಸಮರ್ಪಕ ತ್ಯಾಜ್ಯ ವಿಲೇವಾರಿ ಹಾಗೂ ಹೂಳೆತ್ತದ ಚರಂಡಿಗಳಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇದಲ್ಲದೆ ರಾತ್ರಿ ವೇಳೆ ಕಚ್ಚುವ ಸೊಳ್ಳೆಯಿಂದ ಚಿಕೂನ್​ ಗುನ್ಯಾ, ಮಲೇರಿಯಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ.? ಮಳೆಗಾಲದಲ್ಲಿ ಚರಂಡಿ ಪೈಪುಗಳು ಒಡೆದು ಕುಡಿಯುವ ನೀರಿನಲ್ಲಿ ಕಲುಷಿತ ನೀರು ಸೇರುವ ಸಾಧ್ಯತೆಗಳಿರುತ್ತದೆ. ಹೀಗೆ ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಟೈಾಯಿಡ್​, ವಾಂತಿ&ಭೇದಿ, ಕರುಳು ಬೇನೆಯಂತಹ ಕಾಯಿಲೆ ಬರುವ ಸಾಧ್ಯತೆಗಳಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
