| ಮೇಧಾ ಪ್ರಹ್ಲಾದಾಚಾರ್ಯ ಜೋಶಿನಕ್ಷತ್ರಗಳನ್ನು ಖಗೋಳಶಾಸ್ತ್ರದಲ್ಲಿ ಕೇವಲ ಒಂದು ಕಾಯವೆಂದು ಪರಿಗಣಿಸಿದ್ದಾರೆ. ಆದರೆ ವೇದಾಂಗವಾದ ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳು ಆಯಾ ಅಭಿಮಾನಿ ದೇವತೆಗಳಿಂದ ನಿಯುಕ್ತಗೊಂಡು ವಿಶೇಷವಾದ ಶಕ್ತಿಗಳನ್ನು ಹೊಂದಿವೆ ಎಂದಿದ್ದಾರೆ. ವ್ಯಕ್ತಿಯ ಜಾತಕದ ರಾಶಿಯ ನಿರ್ಧಾರವು ಆಯಾ ನಕ್ಷತ್ರಗಳಿಗೆ ಅನುಗುಣವಾಗಿಯೇ ಆಗುತ್ತದೆ. ವ್ಯಕ್ತಿಯ ಜನ್ಮ ನಕ್ಷತ್ರವನ್ನು ಕಂಡುಕೊಳ್ಳುವುದರಲ್ಲಿ ಚಂದ್ರನ ಸ್ಥಾನ ಬಹಳ ಪ್ರಮುಖವಾಗಿದೆ. ವ್ಯಕ್ತಿಯ ಜನ್ಮ ಸಮಯದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿ ಇರುತ್ತಾನೆಯೋ ಅದೇ ಅವರವರ ಜನ್ಮ ನಕ್ಷತ್ರ ಎಂದು ಪರಿಗಣಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಮನಸ್ಸನ್ನು ಪ್ರತಿನಿಧಿಸುವ ದೇವತೆ. ಮನುಷ್ಯನ ಜೀವನದ ಪ್ರತಿಯೊಂದು ಹೆಜ್ಜೆಗಳನ್ನು ನಿರ್ಧರಿಸುವುದು ಮನಸ್ಸು. ಮನುಷ್ಯನ ಜೀವನದಲ್ಲಿ ಬುದ್ಧಿಗಿಂತಲೂ ಮನಸ್ಸಿನ ಪ್ರಾಬಲ್ಯವೇ ಪ್ರಧಾನವಾಗಿದೆ.ಆದ್ದರಿಂದ ಜನ್ಮ ನಕ್ಷತ್ರವನ್ನು, ಪಾದವನ್ನು ಚಂದ್ರನ ಗತಿಯಿಂದ ನಿರ್ಧರಿಸಲಾಗುತ್ತದೆ.
ಒಟ್ಟಾರೆ 27 ನಕ್ಷತ್ರಗಳನ್ನೊಳಗೊಂಡದ್ದು ತಾರಾಮಂಡಲ. ಈ 27 ನಕ್ಷತ್ರಗಳು ದಕ್ಷನ ಪುತ್ರಿಯರು ಹಾಗೂ ಚಂದ್ರನ ಪತ್ನಿಯರು ಎಂದು ಪುರಾಣಗಳು ತಿಳಿಸುತ್ತವೆ. ಚಂದ್ರನನ್ನು ನಕ್ಷತ್ರಾಧಿಪತಿ ಎಂದು ಕರೆದಿದ್ದಾರೆ. ಸೃಷ್ಟಿಯ ಚೇತನಾ ಚೇತನ ವಸ್ತುಗಳ ಶುಭಗಳನ್ನು ಈ ನಕ್ಷತ್ರಗಳು ಸೂಚಿಸುತ್ತವೆ.
‘ಸಪ್ತವಿಂಶತಿಃ ಸೋಮಸ್ಯ ಪತ್ನೊ್ಯ ಲೋಕಸ್ಯ ವಿಶ್ರುತಾಃ| ಕಾಲಸ್ಯ ನಯನೆ ಯುಕ್ತಾಃ ಸೋಮ ಪತ್ನ್ಯಃ ಶುಚಿವ್ರತಾಃ| ಸರ್ವ ನಕ್ಷತ್ರಯೋಗಿನ್ಯೋ ಲೋಕಯಾತ್ರಾ ವಿಧಾನತಃ||(ಮಹಾಭಾರತ. ಆದಿ ಪರ್ವ. 67ನೇ ಅಧ್ಯಾಯ.)
ಚಂದ್ರನು ಪ್ರತಿ ನಕ್ಷತ್ರದಲ್ಲಿಯೂ 24 ಗಂಟೆಗಳ (60 ಘಟಿಕಾ) ಕಾಲ ಸಂಚರಿಸುವನು. ಇದು ಚಂದ್ರನ ಗತಿ. ಈ ಸಂಚಾರದ ಸಮಯ ಅನೇಕ ಬಾರಿ 24 ಗಂಟೆಗಳಿಗಿಂತ ಹೆಚ್ಚು ಅಥವಾ ಕಡಿಮೆಯೂ ಆಗಬಹುದು. ಚಂದ್ರನು ಯಾವ ರಾಶಿಯಲ್ಲಿದ್ದಾಗ ಹೇಗೆ ಪರಿಣಾಮ ಬೀರುತ್ತಾನೆ ಎಂಬುದು ವಿಸ್ತಾರವಾದ ಸಂಗತಿ. ಅನೇಕ ವಿದ್ವಾಂಸರ ಅಧ್ಯಯನದ ಆಳ ಈ ಜನ್ಮ ನಕ್ಷತ್ರಕ್ಕನುಗುಣವಾಗಿ ವ್ಯಕ್ತಿಯ ಹುಟ್ಟಿದಾರಭ್ಯ ಅಂತ್ಯದವರೆಗಿನ ಎಲ್ಲಾ ಸಾರವನ್ನು ತೆರೆದಿಡಲು ಸಾಧ್ಯವಾಗುತ್ತದೆ.
ಜ್ಯೋತಿಷ್ಯವನ್ನು ನೋಡುವ ಮತ್ತು ನಿರ್ಧರಿಸುವ ಅನೇಕ ವಿಧಾನಗಳಿದ್ದರೂ ಜನ್ಮ ನಕ್ಷತ್ರವನ್ನು ಆಧರಿಸಿ ಜಾತಕದ ಅಧ್ಯಯನ ಹಾಗೂ ಜೀವನದ ಆಗುಹೋಗುಗಳನ್ನು ತಿಳಿಯುವುದು ನಿಖರವಾದದ್ದು ಎಂಬುದು ಜ್ಯೋತಿಷ್ಯ ವಿದ್ವಾಂಸರ ಅಭಿಪ್ರಾಯ. ವ್ಯಕ್ತಿಯ ವ್ಯಕ್ತಿತ್ವ, ಮನಸ್ಥಿತಿ, ಸಾಮರ್ಥ್ಯ, ಜೀವನ ವಿಧಾನ, ಸಮಾಜದಲ್ಲಿ ಅವರ ಪ್ರಭಾವ ಹಾಗೂ ಜೀವನದ ಇತರ ಅಂಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಈ ಜನ್ಮ ನಕ್ಷತ್ರ ನೀಡುತ್ತದೆ. ಶಿಕ್ಷಣ, ವೃತ್ತಿ ಜೀವನದ ಯಶಸ್ಸನ್ನು ಪಡೆಯಲು ಮುಖ್ಯವಾಗಿ ಬೇಕಾಗಿದ್ದು ಪ್ರಯತ್ನ. ಅದರೊಟ್ಟಿಗೆ ಈ ಜ್ಯೋತಿಷ್ಯ ಮಾರ್ಗದರ್ಶನ ನೀಡುತ್ತದೆ. ಗ್ರಹಗಳ ಸಂಚಾರದಿಂದ ಮುಂಬರುವ ಶುಭಾಶುಭ ಸೂಚನೆ ತಿಳಿದುಕೊಳ್ಳಬಹುದು. ಅದನ್ನು ಬಾರದಂತೆ ತಡೆಯಲಾಗುವುದಿಲ್ಲ. ಆದರೆ ಪರಿಹಾರ ತಿಳಿಯಬಹುದು. ಪ್ರತಿಯೊಂದು ಶುಭಕಾರ್ಯಗಳಿಗೂ ವ್ಯಕ್ತಿಯ ಜನ್ಮ ನಕ್ಷತ್ರವನ್ನು ಅನುಸರಿಸಿ ತಾರಾ ಬಲವನ್ನು ನೋಡಿಯೇ ಮುಹೂರ್ತವನ್ನು ನಿಶ್ಚಯಿಸುವ ಪದ್ಧತಿಯುಂಟು. ವಿವಾಹವಾಗುವ ಜೋಡಿಗಳ ಭವಿಷ್ಯದ ಹೊಂದಾಣಿಕೆಯನ್ನೂ ಅವರ ಜನ್ಮ ನಕ್ಷತ್ರಗಳ ಆಧಾರದ ಮೇಲೆಯೇ ನಿರ್ಧರಿಸುತ್ತಾರೆ. ಎಲ್ಲ ನಕ್ಷತ್ರಗಳಿಗೂ ಅದರ ಪಾದಗಳಿಗನುಗುಣವಾಗಿ ಆಯಾ ಅಕ್ಷರಗಳನ್ನು ಸೂಚಿಸಿದ್ದಾರೆ. ನಕ್ಷತ್ರದ ಯಾವ ಪಾದದಲ್ಲಿ ಮಗು ಜನಿಸಿದೆ ಎನ್ನುವುದರ ಮೇಲೆ ಆ ಮಗುವಿನ ನಾಮಕರಣವನ್ನು ಮಾಡಲಾಗುತ್ತದೆ.
1. ಲಘು (ಚುರುಕು)- ಅಶ್ವಿನಿ, ಪುಷ್ಯ, ಹಸ್ತ. 2 ತೀಕ್ಷ್ಣ (ಘೊರ)- ಮೂಲಾ, ಆರ್ದ್ರಾ, ಜ್ಯೇಷ್ಠಾ, ಆಶ್ಲೇಷಾ 3. ಮೃದು (ಸೌಮ್ಯ)- ರೇವತಿ, ಮೃಗಶಿರಾ, ಚಿತ್ತಾ ,ಅನುರಾಧ 4. ಸ್ಥಿರ (ಉತ್ತಮ)- ರೋಹಿಣಿ, ಉತ್ತರಾಫಾಲ್ಗುಣಿ, ಉತ್ತರಾಷಾಢ, ಉತ್ತರಾಭಾದ್ರಪದ. 5. ಉಗ್ರ (ದುಷ್ಟ)- ಭರಣಿ, ಮಘಾ, ಪೂರ್ವಾಫಲ್ಗುಣಿ, ಪೂರ್ವಾಭಾದ್ರಪದ, ಪೂರ್ವಾಷಾಢ. 6. ಸಾಧಾರಣ – ಕೃತ್ತಿಕಾ , ವಿಶಾಖಾ. 7. ಚರ (ಅಸ್ಥಿರ)- ಪುನರ್ವಸು, ಸ್ವಾತಿ, ಶ್ರವಣಾ, ಧನಿಷ್ಠ, ಶತಭಿಷ.
ಎಲ್ಲ ಶುಭಕಾರ್ಯಗಳ ಪ್ರಾರಂಭದಲ್ಲಿ ಉತ್ತಮವೆನಿಸಿಕೊಂಡ ಶುಭ ನಕ್ಷತ್ರಗಳನ್ನು ಅವಲಂಬಿಸುವುದು ಸಂಪ್ರದಾಯವಾಗಿದೆ. ಈ ನಕ್ಷತ್ರಗಳ ವಿಂಗಡನೆಯು ಎಲ್ಲ ಕಾರ್ಯಗಳ ಪ್ರಾರಂಭಗಳಿಗೆ, ವಿವಾಹ, ಗೃಹಪ್ರವೇಶ, ಉಪನಯನ, ನೂತನ ವಾಹನ ಖರೀದಿ ಇತ್ಯಾದಿ ಕಾರ್ಯಗಳಿಗೆ ಅನುಸರಿಸುತ್ತಾರೆ.
ಸೂರ್ಯ ಚಂದ್ರ ಗ್ರಹ ನಕ್ಷತ್ರಗಳೆಲ್ಲ ಶಿಂಶುಮಾರಾಕೃತಿ (ಚೇಳು)ಯಲ್ಲಿವೆ ಎಂದು ಶಾಸ್ತ್ರಗಳಲ್ಲಿ ವರ್ಣನೆ ಇದೆ.ಈ ನಭೋಮಂಡಲಕ್ಕೆ ವಿಷ್ಣುವಿನ ಶಿಂಶುಮಾರ ರೂಪವೇ ನಿಯಾಮಕವಾಗಿದೆ. ಹರಿದಾಸವರೇಣ್ಯರು ಸಹ ‘ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ’ ಎಂದು ಸಾರಿದ್ದಾರೆ. ಆದ್ದರಿಂದ ಜೀವನದ ಪ್ರತಿಯೊಂದು ಸಂದರ್ಭಗಳಲ್ಲಿಯೂ ವಿಷ್ಣು ಸಹಸ್ರನಾಮದ ಪಠಣೆ ಎಲ್ಲದಕ್ಕೂ ತಾರಕ ಎಂಬುದು ಶಾಸ್ತ್ರ ಸಿದ್ಧ.
ಇನ್​ಫೊಸಿಸ್​ ನಾರಾಯಣಮೂರ್ತಿ ಅವರ ಆ ಮಾತು ‘ವಾರಕ್ಕೆ 70 ಗಂಟೆಗಳ ಕೆಲಸದ ನಡುವೆ’ ಕಳೆದುಹೋಯ್ತಾ?

ಈ ದೇವಸ್ಥಾನದಲ್ಲಿ ಮಹಿಳೆಯರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಪೂಜಿಸಲು ಅವಕಾಶ: ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 11 =
Remember me
