ಬೆಂಗಳೂರು:ಶಿಕ್ಷಕರ ವರ್ಗಾವಣೆ ಸಂಬಂಧ ನಿಖರವಾದ ಹುದ್ದೆಗಳ ಮಾಹಿತಿ ಪಡೆಯುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾವಾರು ಹುದ್ದೆ-ಶಿಕ್ಷಕರ ಮ್ಯಾಪಿಂಗ್​ ಮಾಡಿ ಖಾಲಿ ಹುದ್ದೆಗಳನ್ನು ಗುರುತಿಸುವಂತೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ.ಈ ಹಿಂದೆಯೇ ಖಾಲಿ ಹುದ್ದೆಗಳ ಮಾಹಿತಿಯನ್ನು ಡಿ.1ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ, ತಂತ್ರಾಂಶದಲ್ಲಿ ಮಾಹಿತಿಯನ್ನು ಸರಿಯಾಗಿ ಅಪ್​ಲೋಡ್​ ಮಾಡದ ಕಾರಣದಿಂದ ಮ್ಯಾಪಿಂಗ್​ ಪ್ರಕ್ರಿಯೆ ಪೂರ್ಣಗೊಳಿಸಿರುವುದಿಲ್ಲ. ಡಿ.8ರೊಳಗೆ ಮತ್ತೊಮ್ಮೆ ಸೂಕ್ತ ಮಾಹಿತಿಯನ್ನು ಪಡೆದು ಸರ್ಕಾರದಿಂದ ಮಂಜೂರಾದ ವೃಂದವಾರು ಹುದ್ದೆಗಳ ಸಂಖ್ಯೆಯನ್ನು ಹಾಗೂ ನಿಗದಿಪಡಿಸಿದ ಸಿಬ್ಬಂದಿ ಸ್ಥರ ವಿನ್ಯಾಸದಲ್ಲಿ ವ್ಯತ್ಯಾಸವಾಗದಂತೆ ಗಮನವಹಿಸಬೇಕೆಂದು ಇಲಾಖೆ ನಿರ್ದೇಶಕರು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಎಲ್ಲ ಮಾಹಿತಿಯನ್ನು ಎಕ್ಸೆಲ್​ನಲ್ಲಿ ಸೇರಿಸಿ[email protected]ಈ ವಿಳಾಸಕ್ಕೆ ಇ-ಮೇಲ್​ ಸಲ್ಲಿಸುವುದು. ನಿಗದಿತ ವೇಳಾಪಟ್ಟಿಯಂತೆ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲು ಈ ಕಾರ್ಯವು ಅತ್ಯಂತ ತುರ್ತು ಮತ್ತು ನಿಖರತೆಯಿಂದ ಆಗಬೇಕಾಗಿರುವುದರಿಂದ ವರ್ಗಾವಣೆ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಮಾಹಿತಿ ಪರಿಶೀಲಿಸಿ ಪಟ್ಟಿಯನ್ನು ಸಲ್ಲಿಸಬೇಕೆಂದು ನಿರ್ದೇಶಕರು ಡಿಡಿಪಿಐಗಳಿಗೆ ಸೂಚಿಸಿದ್ದಾರೆ.
‘ಎಲ್ಲಿಂದ ಶುರು ಮಾಡಲಿ?’ ಎಂದು ಕೇಳಿದ್ದಾರೆ ನಟಿ ಸನ್ನಿ ಲಿಯೋನ್​; ಯಾಕಿರಬಹುದು?


ಐದು ಮಕ್ಕಳಲ್ಲಿ ಒಬ್ಬಳನ್ನು ರೈಲಲ್ಲೇ ಬಿಟ್ಟುಹೋದ ದಂಪತಿ; ಆಮೇಲೇನಾಯಿತು?!

ನೀವು ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಇದನ್ನು ಓದಿ.. ಗಮನದಲ್ಲಿರಲಿ…



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
