ಪ್ರಪಂಚದಾದ್ಯಂತ ಕೋಟ್ಯಂತರ ಜನರನ್ನು ಕಾಡುತ್ತಿರುವ ಕೋವಿಡ್​-19 ಮಹಾಮಾರಿ ಸಾರ್ಸ್​ -ಕೋವ್​-2 ವೆರಸ್ಸಿನಿಂದ ಬರುತ್ತದೆ. ಸದ್ಯಕ್ಕೆ ಇದನ್ನು ವಾಸಿಮಾಡುವ ಯಾವ ಔಷಧವೂ ಬಂದಿಲ್ಲ. ಆದ್ದರಿಂದ ಈ ರೋಗ ಬರದಂತೆ ಲಸಿಕೆ ಹಾಕಿಸಿಕೊಳ್ಳುವುದೇ ಈಗಿರುವ ಆಯ್ಕೆ. ಸುರತ ಮತ್ತು ಪರಿಣಾಮಕಾರಿಯಾದ ಲಸಿಕೆ ಈ ಣಕ್ಕೆ ನಮಗೆಲ್ಲ ಅತ್ಯವಶ್ಯ. ಕೋವಿಡ್​ ಲಸಿಕೆ ಕುರಿತಂತೆ ಜನಸಾಮಾನ್ಯರಲ್ಲಿ ಉದ್ಭವಿಸುವ ಹತ್ತುಹಲವು ಪ್ರಶ್ನೆಗಳಿಗೆ ತಜ್ಞ ವೈದ್ಯರು ಇಲ್ಲಿ ಉತ್ತರಿಸಿದ್ದಾರೆ.

* ಭಾರತದಲ್ಲ್ಲಿ ಸದ್ಯಕ್ಕೆ ಅನುಮೋದಿತವಾಗಿರುವ ಮತ್ತು ಶ್ರೀದಲ್ಲೇ ಬರುವ ಕೋವಿಡ್​&19 ಲಸಿಕೆಗಳು ಯಾವವು?– ಭಾರತದಲ್ಲಿ ಇದುವರೆಗೆ 3 ಲಸಿಕೆಗಳು ಲೆಸೆನ್ಸ್​ ಪಡೆದಿವೆ: ಕೋವಿಶೀಲ್ಡ್​ (ಆಸ್ಟ್ರಜೆನಿಕನ ಲಸಿಕೆಯನ್ನು ಸೀರಮ್​ ಇನ್​ಸ್ಟಿಟ್ಯೂಟ್​ ಆ್​ ಇಂಡಿಯ ತಯಾರಿಸುತ್ತಿದೆ); ಕೋವ್ಯಾಕ್ಸಿನ್​ (ಭಾರತ್​ ಬಯೋಟೆಕ್​ ಲಿಮಿಟೆಡ್​ ) ಮತ್ತು ರಷ್ಯಾದ ಸ್ಪುಟ್ನಿಕ್​ ವಿ (ಡಾ. ರೆಡ್ಡೀಸ್​ ಲ್ಯಾಬ್​ ಮಾರಾಟ ಮಾಡುತ್ತಿದೆ). ZyCoV-D ಇದು ನಾಲ್ಕನೆಯ ಲಸಿಕೆ. ಡಿಎನ್​ಎ ಆಧರಿತ ಮೊದಲನೆಯ ಲಸಿಕೆ. ಇದು 2021ರ ಜೂನ್​&ಜುಲೆ ಹೊತ್ತಿಗೆ ನಿಯಂತ್ರಕ ಅಧಿಕಾರಿಗಳಿಂದ ಅನುಮೋದಿಸಲ್ಪಡಬಹುದು ಎಂದು ನಿರೀಸಲಾಗಿದೆ. ಇದನ್ನು ಜೆಡಸ್​ ಕ್ಯಾಡಿಲ ಸಂಸ್ಥೆ ತಯಾರಿಸುತ್ತಿದೆ. Corbevax ಇದು protein subunit ಲಸಿಕೆ. ಇದನ್ನು ಹೆದರಾಬಾದಿನ ಬಯೋಲಾಜಿಕಲ್​ ಸಂಸ್ಥೆ ತಯಾರಿಸಲಿದ್ದು ಡಿಸೆಂಬರ್​ ಹೊತ್ತಿಗೆ ಬಿಡುಗಡೆ ಯಾಗುವ ಸಾಧ್ಯತೆಯಿದೆ. ಕೋವ್ಯಾಕ್ಸಿನ್​ ಮತ್ತು ಜೆಕೋವ್​&ಡಿ&ಈ ಎರಡೂ ಲಸಿಕೆಗಳು ಭಾರತದಲ್ಲೇ ಸಂಶೋಧನೆಗೊಂಡು ತಯಾರಾಗುತ್ತಿರುವವು.* ಯಾರು ಕೋವಿಡ್​ ಲಸಿಕೆ ಪಡೆಯಲು ಅರ್ಹರು?– ಭಾರತದಲ್ಲಿ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ನಾಗರಿಕರೂ (ಗರ್ಭಿಣಿಯರನ್ನು ಹೊರತುಪಡಿಸಿ) ಕೋವಿಡ್​ ಲಸಿಕೆ ಪಡೆದುಕೊಳ್ಳಬಹುದು.* ಲಸಿಕೆ ಪಡೆಯಲು ಹೆಸರನ್ನು ಎಲ್ಲಿ ನೋಂದಾಯಿಸಬೇಕು ಮತ್ತು ಎಲ್ಲೆಲ್ಲಿ ಲಸಿಕೆಗಳು ದೊರೆಯುತ್ತವೆ?&ಕೋ&ವಿನ್​ ಪೋರ್ಟಲ್​ನಲ್ಲಿ (https://www.cowin.gov.in) ನಿಮ್ಮ ಹೆಸರನ್ನು ನೋಂದಾಯಿಸಿ ದಿನಾಂಕ ಮತ್ತು ವೇಳೆಯನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯಸೇತು ಆ್ಯಪ್​ನಲ್ಲೂ ನೋಂದಣಿ ಮಾಡಬಹುದು. ನೋಂದಾಯಿಸಲು ನಿಮ್ಮ ಒಂದು ೋಟೋ ಇರುವ ಗುರುತಿನ ಚೀಟಿ, ಉದಾಹರಣೆಗಾಗಿ ಆಧಾರ್​ ಕಾರ್ಡ್​ ಬೇಕಾಗುತ್ತದೆ. ಇದನ್ನೇ ಲಸಿಕೆ ಪಡೆಯಲು ಹೋದಾಗ ನಿಮ್ಮೊಡನೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಲಸಿಕೆಗಳು ಕೋವಿಡ್​ ವ್ಯಾಕ್ಸಿನೇಷನ್​ ಸೆಂಟರ್​ ಎಂದು ಕರೆಯಲ್ಪಡುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದೊರೆಯುತ್ತವೆ. ಮೇಲ್ಕಂಡ ಪೋರ್ಟಲ್​ನಿಂದ ನೀವು ಲಸಿಕೆ ಪಡೆದದ್ದಕ್ಕೆ ಪ್ರಮಾಣಪತ್ರವನ್ನೂ ಡೌನ್​ಲೋಡ್​ ಮಾಡಿಕೊಳ್ಳಬಹುದು.* ಯಾವೆಲ್ಲ ಸಂದರ್ಭಗಳಲ್ಲಿ ಲಸಿಕೆ ಪಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ?-ಈ ಹಿಂದೆ ಯಾರಿಗಾದರೂ& ಕೋವಿಡ್​ 19 ವ್ಯಾಕ್ಸೀನ್​ ಪಡೆದಾಗ ಕುಸಿದು ಬೀಳುವಂತಹ ಪ್ರತಿಕ್ರಿಯೆ (ಅನಾಫಿಲ್ಯಾಕ್ಸಿಸ್​) ಅಥವಾ ಅದಕ್ಕೆ ಒಗ್ಗದಿರುವಂತಹ ಪ್ರತಿಕ್ರಿಯೆ ನಿರ್ಮಾಣವಾಗಿದ್ದರೆ; ಕೆಲವೊಂದು ಲಸಿಕೆಗಳಿಗೆ, ಚುಚ್ಚುಮದ್ದಿನ ಚಿಕಿತ್ಸೆಗೆ, ಆಹಾರ ವಸ್ತುಗಳಿಗೆ ತತ್​ಣವೇ ಅಥವಾ ನಿಧಾನವಾಗಿ ಅನಾಫಿಲ್ಯಾಕ್ಸಿಸ್​ ಪ್ರತಿಕ್ರಿಯೆ ಆಗುವ ಸಂಭವಗಳಿದ್ದರೆ.* ಯಾರಿಗೆಲ್ಲ ತಾತ್ಕಾಲಿಕ ನಿಷೇಧಗಳು ಅನ್ವಯ?-ಸಾರ್ಸ್​-ಕೋವ್​-2 ರೋಗದ ಸಕ್ರಿಯ ಲಣಗಳಿರುವ ವ್ಯಕ್ತಿಗಳು; ಯಾವುದೇ ಕಾಯಿಲೆಗಾಗಿ ತೀವ್ರವಾಗಿ ಅಸ್ವಸ್ಥಗೊಂಡ ಮತ್ತು ಆಸ್ಪತ್ರೆಗೆ ದಾಖಲಾಗಿರುವ (ಐಸಿಯುನಲ್ಲಿರಲಿ ಇಲ್ಲದಿರಲಿ) ವ್ಯಕ್ತಿಗಳು.* ಭಾರತದಲ್ಲಿ ಸದ್ಯಕ್ಕೆ ದೊರೆಯುತ್ತಿರುವ ಲಸಿಕೆಗಳಿಗೆ ನಿರ್ಧರಿತ ಡೋಸೇಜ್​ಗಳು ಯಾವವು?-ಕೋವಿಶೀಲ್ಡ್​ ಲಸಿಕೆಯ 2 ಡೋಸ್​ಗಳಿಗೆ ಮಧ್ಯೆ ಇರಬೇಕಾದ ಕಾಲದ ಅಂತರವನ್ನು 6&8 ವಾರಗಳಿಂದ 12&16 ವಾರಗಳಿಗೆ ಹೆಚ್ಚಿಸಲಾಗಿದೆ. ಕೋವ್ಯಾಕ್ಸಿನ್​ ಲಸಿಕೆಯ 2ನೇ ಡೋಸ್​ನ್ನು 1ನೇ ಡೋಸ್​ ತೆಗೆದುಕೊಂಡ 4 ರಿಂದ 6 ವಾರಗಳ ಅಂತರದಲ್ಲಿ ಪಡೆಯಬೇಕು. ಸ್ಪುಟ್ನಿಕ್​ ವಿ 2 ಹಂತಗಳಲ್ಲಿ ತೆಗೆದುಕೊಳ್ಳಬೇಕಾದ ಲಸಿಕೆ. ಇದಕ್ಕೆ 2 ಹಂತಗಳ ಮಧ್ಯೆ 3 ವಾರಗಳ ಅಂತರವಿರಬೇಕು. ಸದ್ಯದಲ್ಲೇ ಸ್ಪುಟ್ನಿಕ್​ ಲೆಟ್​ ಎಂಬ ಒಂದೇ ಡೋಸ್​ನ ಲಸಿಕೆ ಬಿಡುಗಡೆಯಾಗಲಿದೆ. ೈಜರ್​ ಲಸಿಕೆಯ 2ನೇ ಡೋಸ್​ನ್ನು 3 ವಾರಗಳ ನಂತರವೂ, ಮಾಡರ್ನ್​ ಲಸಿಕೆಯ 2ನೇ ಡೋಸ್​ನ್ನು 4 ವಾರಗಳ ನಂತರವೂ ತೆಗೆದುಕೊಳ್ಳಬೇಕು. ಈ ಲಸಿಕೆಗಳು ಸದ್ಯದಲ್ಲೇ ಭಾರತದಲ್ಲಿ ಲಭ್ಯವಾಗಲಿವೆ.* ಲಸಿಕೆ ಪಡೆದ ನಂತರ ಸಾಮಾನ್ಯವಾಗಿ ಕಂಡುಬರಬಹುದಾದ ಪ್ರತಿಕೂಲ ಪರಿಣಾಮಗಳು ಯಾವವು?-ಕೆಲವು ಲುವಾದ ಅಡ್ಡ ಪರಿಣಾಮಗಳು ಎದುರಾಗಬಹುದು. ಉದಾ.: ಸೂಜಿ ಚುಚ್ಚಿದ ಜಾಗದಲ್ಲಿ ನೋವು, ತಲೆನೋವು, ಆಯಾಸ, ಜ್ವರ, ಚಳಿ ಮತ್ತು ಮೆನೋವು ಇತ್ಯಾದಿ. ಸಾಧಾರಣವಾಗಿ ಇವೆಲ್ಲ ಒಂದೆರಡು ದಿನಗಳಲ್ಲಿ ಕಣ್ಮರೆಯಾಗುತ್ತವೆ. ಇವುಗಳ ನಿವಾರಣೆಗಾಗಿ ಪ್ಯಾರಸೆಟಿಮಾಲ್​ ತೆಗೆದುಕೊಳ್ಳಬಹುದು.* ಭಾರತದಲ್ಲಿ ಲಭ್ಯವಿರುವ ಲಸಿಕೆಗಳ ಪರಿಣಾಮಕಾರಿತ್ವ ಎಷ್ಟು? ಅಂತಾರಾಷ್ಟ್ರೀಯ ಪ್ರಯಾಣ ಮಾಡಲು ಅನುಮೋದಿಸಲ್ಪಟ್ಟಿರುವ ಲಸಿಕೆಗಳು ಯಾವವು?– ಕೋವಿಡ್​ನ್ನು ತಡೆಯುವಲ್ಲಿ 3ನೇ ಹಂತದ ಪರೀೆಗಳಲ್ಲಿ ಕೋವ್ಯಾಕ್ಸಿನ್​ ಶೇಕಡ 81 ಪರಿಣಾಮಕಾರಿ ಎಂದು ತಿಳಿದುಬಂದಿದೆ. ಕೋವಿಶೀಲ್ಡ್​ ಲಸಿಕೆಯ ಪರಿಣಾಮಕಾರಿತ್ವ ಶೇ.70.42. ಸ್ಪುಟ್ನಿಕ್​ ವಿ ಶೇ.91.6ರಷ್ಟು ಪರಿಣಾಮಕಾರಿ. ಕೋವಿಶೀಲ್ಡ್​ ಲಸಿಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿಸಲ್ಪಟ್ಟಿದೆ ಮತ್ತು ಸಧ್ಯಕ್ಕೆ ಭಾರತದಿಂದ ಅಂತಾರಾಷ್ಟ್ರೀಯ ಪ್ರಯಾಣಗಳಿಗೆ ಅನುಮೋದನೆ ಇರುವ ಏಕೆಕ ಲಸಿಕೆಯಾಗಿದೆ.* ಲಸಿಕೆ ತೆಗೆದುಕೊಂಡ ನಂತರ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಎಷ್ಟು ಕಾಲ ಬೇಕು?-ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್​ ಲಸಿಕೆಗಳ 2ನೇ ಡೋಸ್​ನ್ನು ತೆಗೆದುಕೊಂಡ 2&3 ವಾರಗಳ ಹೊತ್ತಿಗೆ ಸಾಕಷ್ಟು ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ದೇಹದಲ್ಲಿ ಕೂಡಿಕೊಂಡಿರುತ್ತದೆ. ಆಂಟಿ ಸಾರ್ಸ್​ ಕೋವ್​2 ಸ್ಪೆ$ಕ್​ ಐಜಿಜಿ ಪ್ರತಿಕಾಯಗಳನ್ನು ಆ ಹೊತ್ತಿಗೆ ದೇಹದಲ್ಲಿ ಗುರುತಿಸಬಹುದು. ಆದ್ದರಿಂದ ಲಸಿಕೆ ತೆಗೆದುಕೊಂಡ ನಂತರವೂ ಕೋವಿಡ್​ ಸಂಬಂಧಿತ ನಿಯಮಗಳನ್ನು ಪಾಲಿಸುವುದು ಮುಖ್ಯ.* ಈ ಲಸಿಕೆಗಳು ರೂಪಾಂತರಿ ವೆರಸ್​ಗಳಿಂದಲೂ ರಸಬಲ್ಲವೆ?-ಲಸಿಕೆ ತೆಗೆದುಕೊಂಡ ನಂತರ ದೇಹ ಒಂದಕ್ಕಿಂತ ಹೆಚ್ಚು ಬಗೆಯ& ಸ್ಪೆ$ಕ್​ ಪ್ರೋಟಿನ್​ ಒಳಗೊಂಡಂತೆ&ಪ್ರತಿಕಾಯಗಳನ್ನು ತಯಾರಿಸುತ್ತದೆ. ಹೀಗಾಗಿ ಎಲ್ಲ ಲಸಿಕೆಗಳೂ ರೂಪಾಂತರಿ ವೆರಸ್​ಗಳನ್ನು ಸಮಂಜಸವಾಗಿ ತಡೆಯಬಲ್ಲವು.* ಕೋವಿಡ್​ ಲಸಿಕೆ ಮಕ್ಕಳಿಗೂ ಕೊಡಬಹುದೆ?-ಈಗ ಲಭ್ಯವಿರುವ ಯಾವುದೇ ಲಸಿಕೆಗಳು ಮಕ್ಕಳ ಮೇಲೆ ಪ್ರಯೋಗಿಸಿ ಮೌಲ್ಯನಿರ್ಧಾರ ಮಾಡಿಲ್ಲ. ಕೆಲವು ಪರೀೆಗಳು ನಡೆಯುತ್ತಿವೆ. ಮೂಗಿನ ಮೂಲಕ ಮಕ್ಕಳಿಗೆ ಕೊಡುವ ಲಸಿಕೆಗಳ 2 ಮತ್ತು 3ನೆ ಹಂತದ ಪರೀೆಗಳು ನಡೆಯುತ್ತಿವೆ. ಒಂದು ವರ್ಷದೊಳಗೆ ಮಕ್ಕಳಿಗೂ ಲಸಿಕೆ ದೊರೆಯಬಹುದು.* ಮಧುಮೇಹ, ರಕ್ತದೊತ್ತಡ, ಕಿಡ್ನಿ, ಲಿವರ್​ ತೊಂದರೆ, ಕ್ಯಾನ್ಸರ್​, ಎಚ್​ಐವಿ ಮುಂತಾದ ದೀರ್ಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಲಸಿಕೆ ಪಡೆಯಬಹುದೆ?-ಹೌದು. ಇಂಥವರೇ ಹೆಚ್ಚಿನ ಅಪಾಯಕ್ಕೆ ಒಳಗಾಗುವವರಾಗಿರುತ್ತಾರೆ. ಆದ್ದರಿಂದ ಅತಿ ಶ್ರೀವಾಗಿ ಇಂಥವರು ಲಸಿಕೆ ಪಡೆಯಬೇಕು. ಒಟ್ಟಿನಲ್ಲಿ ಲಸಿಕೆ ಅಸ್ವಸ್ಥತೆ ಜೊತೆಗೆ ವಿವಿಧ ರೋಗಗಳಿಂದ ಬಳಲುತ್ತಿರುವ ವಯಸ್ಕರಿಗೆ ಸುರತ ಮತ್ತು ಪರಿಣಾಮಕಾರಿಯಾಗಿದೆ.* ಮೂತ್ರಪಿಂಡ ಅಥವಾ ಮತ್ಯಾವುದೇ ಅಂಗಗಳ ಬದಲಿ ಜೋಡಣೆಯಾಗಿರುವ ರೋಗಿಗಳು ಯಾವಾಗ ಲಸಿಕೆ ತೆಗೆದುಕೊಳ್ಳಬೇಕು?– ಇಂಥ ವ್ಯಕ್ತಿಗಳು ಬದಲಿ ಜೋಡಣೆಯಾದ 1&6 ತಿಂಗಳುಗಳ ಬಳಿಕ ಲಸಿಕೆ ಪಡೆಯಬಹುದು.* ಈಗಾಗಲೇ ಕೋವಿಡ್​ ಬಂದು ಹೋಗಿದ್ದರೆ, ಲಸಿಕೆ ಪಡೆಯಬೇಕೆ?-ಹೌದು. ಕೋವಿಡ್​ ಬಂದ ನಂತರವೂ ಲಸಿಕೆ ಪಡೆಯಬೇಕೆಂದು ಶಿಾರಸು ಮಾಡಲಾಗಿದೆ. ಕೋವಿಡ್​ನಿಂದ ಗುಣಮುಖರಾಗಿ 90 ದಿನಗಳು ಕಳೆದ ನಂತರ ಲಸಿಕೆ ಪಡೆಯಿರಿ.* ಲಸಿಕೆ ಪಡೆದ ನಂತರವೂ ಕೋವಿಡ್​ ಬರಬಹುದೆ?-ಕೋವಿಡ್​ ಲಸಿಕೆಯನ್ನು ಪೂರ್ತಿ ಪಡೆದ ನಂತರವೂ ಸಣ್ಣ ಶೇಕಡ ಪ್ರಮಾಣದ ವ್ಯಕ್ತಿಗಳಿಗೆ, ಅವರು ಕೋವಿಡ್​ ರೋಗಾಣುಗಳ ಸಂಪರ್ಕಕ್ಕೆ ಬಂದಿದ್ದರಿಂದ ಕೋವಿಡ್​ ಬರಬಹುದು. ಇಂಥವನ್ನು “ವ್ಯಾಕ್ಸೀನ್​ ಬ್ರೇಕ್​ಥ್ರೂ ಕೇಸಸ್​’ ಎಂದು ಕರೆಯುತ್ತಾರೆ. ಲಸಿಕೆ ಪಡೆದ ವ್ಯಕ್ತಿಗಳಿಗೆ ಕೋವಿಡ್​ ಬಂದರೆ ಅದು ಸಾಮಾನ್ಯವಾಗಿ ಲಣರಹಿತವಾಗಿರುತ್ತದೆ ಅಥವ ಸೌಮ್ಯವಾದ ಲಣಗಳಿರುತ್ತವೆ. ಆಸ್ಪತ್ರೆಗೆ ಸೇರುವ/ತೀವ್ರ ನಿಗಾ ಟಕದ ಆವಶ್ಯಕತೆ ಇರುವುದಿಲ್ಲ. ಸಾವಿನ ಸಂಭವ ಅತ್ಯಂತ ಕಡಿಮೆ.* ಮೊದಲನೇ ಲಸಿಕೆ ತೆಗೆದುಕೊಂಡ ನಂತರ ಕೋವಿಡ್​ ಬಂದರೆ, 2ನೇ ಡೋಸ್​ ಯಾವಾಗ ತೆಗೆದುಕೊಳ್ಳಬೇಕು?-90 ದಿನಗಳ ನಂತರ ಪಡೆಯಬಹುದು.* ಪ್ರತಿ ವರ್ಷವೂ ಕೋವಿಡ್​ಗಾಗಿ ಬೂಸ್ಟರ್​ ಡೋಸ್​ ತೆಗೆದುಕೊಳ್ಳಬೇಕೆ? ಕೋವಿಡ್​ ಲಸಿಕೆಯ ನಂತರ ಇತರ ಲಸಿಕೆಗಳನ್ನು ತೆಗೆದುಕೊಳ್ಳಬಹುದೆ?-ಬೂಸ್ಟರ್​ ಡೋಸ್​ ತೆಗೆದುಕೊಳ್ಳಬೇಕೆ ಎಂಬುದರ ಬಗ್ಗೆ ವಿವಿಧ ಸಂಸ್ಥೆಗಳಿಂದ ಕ್ಲಿನಿಕಲ್​ ಪರೀೆಗಳು ನಡೆಯುತ್ತಿವೆ. ಇದುವರೆಗೂ ಯಾವುದೇ ನಿಯಮಾವಳಿಗಳು ಬಿಡುಗಡೆಯಾಗಿಲ್ಲ. ಕೋವಿಡ್​ ಲಸಿಕೆ ತೆಗೆದುಕೊಂಡ ಮೇಲೆ ಬೇರೆ ಲಸಿಕೆಗಳನ್ನು “್ಲೂ ಅಥವಾ ಷಿಂಗಲ್ಸ್​’ 2 ವಾರ ಕಳೆದ ನಂತರ ತೆಗೆದುಕೊಳ್ಳಬೇಕೆಂದು ಶಿಾರಸು ಮಾಡಲಾಗಿದೆ. ಆದರೆ ಒಂದು ವಿನಾಯಿತಿ ಇದೆ! ಟೆಟಾನಸ್​ ಮತ್ತು ಆಂಟಿರೇಬಿಸ್​ ಚುಚ್ಚುಮದ್ದನ್ನು ತತ್​ಣವೇ ತೆಗೆದುಕೊಳ್ಳಬಹುದು.* ಅನುಮೋದಿಸಲ್ಪಟ್ಟ ಒಂದೇ ಡೋಸ್​ನ ಲಸಿಕೆಗಳು ಯಾವವು?– ಜಾನ್ಸನ್​ ಅಂಡ್​ ಜಾನ್ಸನ್​ ಲಸಿಕೆ ಮಾತ್ರ. ರಷ್ಯಾದ ಸ್ಪುಟ್ನಿಕ್​ ಲೆಟ್​ ಲಸಿಕೆ ಇನ್ನೂ ಸಿದ್ಧತೆಯ ಹಂತದಲ್ಲಿದೆ.* 1 ಮತ್ತು 2ನೇ ಲಸಿಕೆಯಾಗಿ ಬೇರೆ ಬೇರೆ ಲಸಿಕೆಗಳನ್ನು ಪಡೆಯಬಹುದೆ?-ಈಗ ಭಾರತದಲ್ಲಿ ದೊರೆಯುತ್ತಿರುವ ಲಸಿಕೆಗಳು ಹಾಗೆ ಬದಲಾಯಿಸತಕ್ಕದ್ದಲ್ಲ. ಆದರೂ 2 ಬೇರೆಬೇರೆ ಲಸಿಕೆಗಳನ್ನು ಬೆರೆಸಿ ಅವುಗಳ ಮತೆಯನ್ನು ಪರೀಸುವ ಬಗ್ಗೆ ವಿವಿಧ ದೇಶಗಳಲ್ಲಿ ಮಾತುಕತೆಗಳು ನಡೆಯುತ್ತಿವೆ.
* ಕೋವಿಡ್​ ಲಸಿಕೆಯನ್ನು ಗರ್ಭಿಣಿಯರಿಗೆ, ಬಾಣಂತಿಯರಿಗೆ ಕೊಡಬಹುದೆ?-ಇತ್ತೀಚೆಗೆ ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಂದು ತಿಳಿವಳಿಕೆ ಪತ್ರ ಹೊರಡಿಸಿದ್ದು, ಕೋವಿಡ್​ ಲಸಿಕೆಯನ್ನು ಬಾಣಂತಿಯರಿಗೆ ಕೊಡಬಹುದೆಂದು ತಿಳಿಸಿದೆ. ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್​ಗಳನ್ನು ಗರ್ಭಿಣಿಯರಿಗೆ ಕೊಟ್ಟಿರುವ ಬಗ್ಗೆ ಸಾಕಷ್ಟು ಮಾಹಿತಿ ಭಾರತದಲ್ಲಿ ಇಲ್ಲ. ಸಧ್ಯಕ್ಕೆ ಗರ್ಭಿಣಿಯರಿಗೆ ಲಸಿಕೆ ಕೊಡುವುದನ್ನು ಶಿಾರಸು ಮಾಡಿಲ್ಲ. ಒಂದು ವೇಳೆ ಒಬ್ಬ ಮಹಿಳೆ ಲಸಿಕೆ ಪಡೆದ ನಂತರ ತಾನು ಗರ್ಭಿಣಿಯಾಗಿರುವುದು ತಿಳಿದುಬಂದಲ್ಲಿ ಆಕೆ ಚಿಂತೆಮಾಡುವ ಅಗತ್ಯವಿಲ್ಲ. ಏಕೆಂದರೆ ಲಸಿಕೆಯಿಂದ ಭ್ರೂಣದ ಮೇಲೆ ಯಾವುದೇ ದುಷ್ಪರಿಣಾಮಗಳಾದ ಬಗ್ಗೆ ಮಾಹಿತಿಯಿಲ್ಲ.ಇತರ ಪ್ರಮುಖ ಸಂದೇಶಗಳು: ಲಸಿಕೆ ಪಡೆಯುವುದಕ್ಕಾಗಿ ಮಗುವಿಗೆ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಕಿಲ್ಲ. ಲಸಿಕೆ ತೆಗೆದುಕೊಳ್ಳುವುದರಿಂದ ಮಹಿಳೆಯ ಲವತ್ತತೆಯ ಮೇಲೆ ದುಷ್ಪರಿಣಾಮವಾಗುವುದೆಂಬ ವಾದಕ್ಕೆ ಪುಷ್ಟಿ ದೊರೆತಿಲ್ಲ. ಮುಟ್ಟಿನ ದಿನಗಳಲ್ಲೂ ಲಸಿಕೆ ತೆಗೆದುಕೊಳ್ಳಬಹುದು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 14 =
Remember me
