ಉತ್ತರಕನ್ನಡ:ಯಕ್ಷಗಾನ ಕ್ಷೇತ್ರದ ಸಾಧಕರೊಬ್ಬರ ಕುರಿತು ಕೃತಿಯೊಂದು ಹೊರಬರಲಿದ್ದು, ಅದಕ್ಕಾಗಿ ಒಂದಷ್ಟು ಮಾಹಿತಿಗಳ ಸಂಗ್ರಹ ನಡೆಯುತ್ತಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸಹ್ಯಾದ್ರಿ ಕಾಲನಿಯಲ್ಲಿರುವ ಹೊಸ್ತೋಟ ಮಂಜುನಾಥ ಭಾಗವತರ ಕೃತಿ ವಿಶ್ಲೇಷಣೆ ಮತ್ತು ಸಾಧನೆಗಳ ದಾಖಲೀಕರಣ ಸಮಿತಿ ಸಹ್ಯಾದ್ರಿ ಈ ಪ್ರಯತ್ನಕ್ಕೆ ಮುಂದಾಗಿದೆ.
ಈ ಸಮಿತಿಯು ಯಕ್ಷಗಾನಗುರು, ಪ್ರಸಂಗಕರ್ತ, ಚಿಂತಕ ಹೊಸ್ತೋಟ ಮಂಜುನಾಥ ಭಾಗವತರ ಕುರಿತ ಕೃತಿಯನ್ನು ಹೊರತರಲು ಸಜ್ಜಾಗಿದೆ. ಮಂಜುನಾಥ ಭಾಗವತರು ತಮ್ಮ ಜೀವಮಾನವನ್ನೆಲ್ಲ ಯಕ್ಷಗಾನ ಶಿಕ್ಷಣ, ತರಬೇತಿ, ಶೋಧನೆ, ಸಂಶೋಧನೆಗಳಲ್ಲಿಯೇ ಪರಿವ್ರಾಜಕರಂತೆ ಸವೆಸಿದವರು. ಅವರು ಬಿಟ್ಟು ಹೋಗಿರುವ ಜ್ಞಾನರಾಶಿಯು ನಾಡಿನಾದ್ಯಂತ ಅವರ ಶಿಷ್ಯರ, ಅಭಿಮಾನಿಗಳ, ಯಕ್ಷಪ್ರೇಮಿಗಳ ಮನೆಗಳಲ್ಲಿ ಚದುರಿಹೋಗಿವೆ. ಯಕ್ಷಲೋಕದ ಮುಂದಿನ ಪೀಳಿಗೆಗೆ, ಸಂಶೋಧಕರಿಗೆ, ಆಸಕ್ತರಿಗೆ ಅವುಗಳ ಪ್ರಯೋಜನ ಸಿಗಬೇಕೆಂಬ ಉದ್ದೇಶದಿಂದ ನಾವು ಅವರ ಅಭಿಮಾನಿಗಳು, ಶಿಷ್ಯರು ಯಕ್ಷಪ್ರೇಮಿಗಳು ಕೆಲವರು ಸೇರಿ ಅವರ ಕುರಿತು ಕೃತಿಯೊಂದನ್ನು ತರುತ್ತಿದ್ದೇನೆ ಎಂಬುದಾಗಿ ಈ ಸಮಿತಿ ತಿಳಿಸಿದೆ.
ಭಾಗವತರ ಕುರಿತ ವಿಶೇಷ ಕೃತಿಯು ಅವರ ಕೃತಿಗಳ ಅವಲೋಕನ, ಮಹತ್ವ ನಿರ್ಣಯ ಹಾಗೂ ಮಾಹಿತಿ ಸಂಗ್ರಹಗಳನ್ನು ಹೊಂದಿರುತ್ತದೆ. ಆದರೆ ಅವರ ಎಲ್ಲ ಕೃತಿಗಳೂ ಸಿಗುತ್ತಿಲ್ಲ. ನಮ್ಮ ಕೈಗೆ ಸಿಗದಿದ್ದರೂ ಅವು ಯಾರಲ್ಲಾದರೂ ಇದ್ದರೆ ಆ ಪ್ರತಿಗಳ ವಿವರ, ಮಾಹಿತಿ ಉಳ್ಳವರ ಫೋನ್ ನಂಬರ್ ಮುಂತಾದವನ್ನು ನೀಡಿದರೂ ಸಹಾಯವಾಗುತ್ತದೆ. ಹಾಗಾಗಿ ದಯವಿಟ್ಟು ಆ ಕುರಿತ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂಬುದಾಗಿ ಈ ಸಮಿತಿ ಮನವಿ ಮಾಡಿಕೊಂಡಿದೆ.

ಮಾಹಿತಿ ನೀಡುವವರು ಡಾ. ವಿಜಯನಳಿನಿ ರಮೇಶ (6360345757), ಸುಬ್ರಾಯ ಹೆಗಡೆ ಕೆರೆಕೊಪ್ಪ (9482133366), ಅಶೋಕ ಹಾಸ್ಯಗಾರ (9148739504) ಅವರನ್ನು ಸಂಪರ್ಕಿಸಬಹುದು.
ಮಲಬದ್ಧತೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ?; ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು..

ಈತ ನಿಮ್ಮಲ್ಲಿಗೂ ಬಂದಿರಬಹುದು!; ಗಸ್ತು ಪೊಲೀಸರ ಕೈಗೆ ಸಿಕ್ಕಿಬಿದ್ದ ನಕಲಿ ಆದಾಯ ತೆರಿಗೆ ಅಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + two =
Remember me
