ಬೆಂಗಳೂರು:ಕರೊನಾ ವೈರಸ್​ ರಾಜ್ಯದ ಜನರಲ್ಲಿ ಭಯ ಹುಟ್ಟಿಸಿದೆ. ಬೆಂಗಳೂರಿನ ಗೂಗಲ್​ ಸೇರಿದಂತೆ ಪ್ರಸಿದ್ಧ ಟೆಕ್​ ಕಂಪನಿಗಳಲ್ಲಿ ಕರೊನಾ ಪತ್ತೆಯಾಗಿದ್ದು, ಅನೇಕ ಟೆಕ್​ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಿವೆ. ಇಂದಿನಿಂದ ಒಂದು ವಾರದ ಕಾಲ ಕರ್ನಾಟಕವನ್ನು ಭಾಗಶಃ ಬಂದ್​ ಮಾಡಿರುವ ರಾಜ್ಯ ಸರ್ಕಾರ, ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಐಟಿ-ಬಿಟಿ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ. ಹೀಗಿರುವಾಗ ಪ್ರಸಿದ್ಧ ಇನ್ಫೋಸಿಸ್​ನ ಬೆಂಗಳೂರಿನ ಕಚೇರಿಯೊಂದನ್ನು ಖಾಲಿ ಮಾಡಿರುವ ಮಾಹಿತಿ ಲಭಿಸಿದೆ.
ಗೂಗಲ್​ನ ಬೆಂಗಳೂರು ಕಚೇರಿಯಲ್ಲಿ ಕರೊನಾ ಪತ್ತೆಯಾಗಿದೆ ಎನ್ನುವ ಮಾಹಿತಿ ಹೊರಬೀಳುತ್ತಿದ್ದಂತೆಯೇ ಬೆಂಗಳೂರಿನ ಇನ್ಫೋಸಿಸ್​ ಕಚೇರಿಯೊಂದರಲ್ಲಿ ಕರೊನಾ ಇರುವುದಾಗಿ ಶಂಕಿಸಲಾಗಿದೆ. ತಮ್ಮ ಒಬ್ಬ ಸಿಬ್ಬಂದಿಯಲ್ಲಿ ಕರೊನಾ ಇರಬಹುದು ಎನ್ನುವ ಶಂಕೆ ಮೂಡಿರುವ ಕಾರಣ ಕಚೇರಿಯನ್ನು ಖಾಲಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕರೊನಾ ಹರಡದಂತೆ ಮುಂಜಾಗೃತೆ ತೆಗೆದುಕೊಳ್ಳುವ ಸಲುವಾಗಿ ಕಚೇರಿಯನ್ನು ಸ್ವಚ್ಛಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಭಯ ಪಡುವುದು ಬೇಡ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ. ನಿಮ್ಮ ನಿಮ್ಮ ಆರೋಗ್ಯದ ಬಗ್ಗೆ ಗಮನ ವಹಿಸಿ. ನಾವು ಜವಾಬ್ದಾರಿಯುತವಾಗಿ ಈ ಸಮಸ್ಯೆಯನ್ನು ಎದುರಿಸುತ್ತೇವೆ. ಸಿಬ್ಬಂದಿಗಳಿಗೆ ಯಾವಾಗ ಕಚೇರಿಗೆ ಹಾಜರಾಗಬೇಕೆನ್ನುವುದನ್ನು ಸಂದೇಶದ ಮೂಲಕ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
ಡೆಡ್ಲಿ ಕರೊನಾಕ್ಕೆ ಇಟಲಿಯಲ್ಲಿ ಒಂದೇ ದಿನದಲ್ಲಿ 250 ಬಲಿ: ಸಾವಿನ ಸಂಖ್ಯೆ 1266ಕ್ಕೆ ಏರಿಕೆ

ನನ್ನ ಬರ್ತ್​ಡೇಗೆ ಇದೇ ಗಿಫ್ಟ್​ ಕೊಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡ ಅಪ್ಪು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 3 =
Remember me
