ಬಳ್ಳಾರಿ: ತಂದೆಯ ಪ್ರೀತಿ ಕಾಣದ 3 ವರ್ಷದ ಬಾಲಕಿಗೆ ತಾಯಿ ಮತ್ತು ಆಕೆಯ ಪ್ರಿಯಕರ ವಿಲನ್​ಗಳಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಪ್ರಿಯತಮನೊಂದಿಗೆ ಸೇರಿ ಬಾಲಕಿಯನ್ನು ಕೊಲ್ಲಲ್ಲು ಯತ್ನಿಸಿದ್ದಲ್ಲದೇ ಸಿಗರೇಟ್‌ನಿಂದ ಬಾಲಕಿಯ ಮೈ ಸೇರಿದಂತೆ ಗುಪ್ತಾಂಗಕ್ಕೆ ಗಾಯ ಮಾಡಿರುವ ಪ್ರಕರಣ ಗಣಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಸಿರಗುಪ್ಪ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಂದೆ ಪ್ರೀತಿ ಕಾಣದ ಬಾಲಕಿಗೆ ಆಸರೆಯಾಗಬೇಕಾದ ತಾಯಿಯೊಬ್ಬಳು ಆರೈಕೆ ಮಾಡದೇ ತನ್ನ ಮಗಳನ್ನೇ ದೂರ ತಳ್ಳಲು ಪ್ರಯತ್ನಿಸಿದ್ದಾಳೆ. ಪ್ರಿಯತಮನೊಂದಿಗೆ ಸೇರಿ 3 ವರ್ಷದ ಬಾಲಕಿಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದಾಳೆ. ಪ್ರಮುಖವಾಗಿ ಆಕೆಯ ಪ್ರಿಯತಮ ಬಾಲಕಿಯ ಗುಪ್ತಾಂಗ ಸೇರಿ ವಿವಿಧ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದಾನೆ. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕರೊನಾ ಕರಾಮತ್ತು- ಹೃದ್ಯ ಕ್ಷಣಕ್ಕೆ ಸಾಕ್ಷಿಯಾಗುವ ಭಾಗ್ಯ ಗಣಿನಾಡಿನದ್ದು!
ಬಾಲಕಿಯರಿಗೆ ರಕ್ಷಣೆ ಯಾವಾಗ..?:ದುರಂತವೆಂದರೇ ಸಿರಗುಪ್ಪ ಪಟ್ಟಣದಲ್ಲು ತಂದೆಯೇ ಮಕ್ಕಳಿಗೆ ವಿಲನ್ ಆದ ಘಟನೆ ನಡೆದ ೧೫ ದಿನದಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ. ಲಾಕ್‌ಡೌನ್ ವೇಳೆ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಅಧಿಕವಾಗಿತ್ತು.ಅದರ ಜತೆಗೆ ಪೋಕ್ಸೋ, ದೌರ್ಜನ್ಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿರುವ ಮಾಹಿತಿ ಹೊರಬಿದ್ದಿದೆ.ಈ ಮೂರು ಪ್ರಕರಣಗಳು ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿಯೇ ನಡೆದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಮಗುವನ್ನೂ ಬಳ್ಳಾರಿ ನಗರದ ಶಾಂತಿಧಾಮದಲ್ಲಿ ಉಳಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪುಟ್ಟು ಮಗಳ ಗುದದ್ವಾರಕ್ಕೆ ಸುಡುಗಂಜಿ ಸುರಿದ ಪಾಪಿ ಅಪ್ಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − thirteen =
Remember me
