ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಕಳ್ಳತನ ಮಾಡಿದ್ದಾನೆ ಅಂತ ಒಂದು ವಾರಗಳು ಕಾಲ ವ್ಯಕ್ತಿಯೊಬ್ಬನನ್ನು ರೂಮಲ್ಲಿ ಕೂಡಿಟ್ಟು ಗುಂಪೊಂದು ಹಲ್ಲೆ ಮಾಡಿದೆ. ಕೊನೆಗೆ ಕಿರುಕುಳ ಸಹಿಸದೇ ಆ ವ್ಯಕ್ತಿ ರೂಮಿನಲ್ಲೇ ಪ್ರಾಣ ಬಿಟ್ಟಿದ್ದಾನೆ.
ಈ ಅಮಾನವೀಯ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸೈಪುಲ್ಲಾ (35) ಎಂದು ಗುರುತಿಸಲಾಗಿದೆ. ಹಲ್ಲೆಯ ದೃಶ್ಯವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಇದನ್ನೂ ಓದಿ:ಟ್ರಾಫಿಕ್​ ಬಗ್ಗೆ ಪಾಠ ಮಾಡುವ ಪೊಲೀಸ್​ ಇಲಾಖೆಗೆ ಮರುಪಾಠ ಮಾಡಿದ ನೆಟ್ಟಿಗರು!
ಕಿರುಕುಳ ಸಹಿಸದೆ ಸಾವುರಾಮಮೂರ್ತಿ ನಗರದ ಗೋಡಾನ್​​ನಲ್ಲಿ ಕಳ್ಳತನ ಮಾಡಿದ ಆರೋಪ ಸೈಪುಲ್ಲಾ ಮೇಲಿತ್ತು. ಈ ಹಿನ್ನೆಲೆಯಲ್ಲಿ ಕೆಜಿ ಹಳ್ಳಿಯ ವೆಂಕಟೇಶಪುರಂ ರೂಂನಲ್ಲಿ ಆತನನ್ನು ಒಂದು ವಾರಗಳ ಕಾಲ ಕೂಡಿಟ್ಟು ಹಲ್ಲೆ ಮಾಡಿದ್ದಾರೆ. ಒಂದು ವಾರಗಳ ಕಾಲ ನೋವಿನಿಂದ ನರಳಾಡಿದ ಸೈಫುಲ್ಲಾ ಕೊನೆಗೆ ಕಿರುಕುಳ ಸಹಿಸದೇ ಕೊನೆಯುಸಿರೆಳೆದನು.
ಒಂದೇ ಸಮಯದಲ್ಲಿ 2 ದೂರುಸೈಪುಲ್ಲಾ ಮೃತಪಟ್ಟ ಬಳಿಕ ಆತನ ಶವವನ್ನು ಸಾದಹಳ್ಳಿ ಬ್ರಿಡ್ಜ್ ಮೋರಿಯಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಶವ ಎಸೆದು ತಾವೇ ದೂರು ನೀಡಲು ಆರೋಪಿಗಳು ಮುಂದಾಗಿದ್ದರು. ಆರೋಪಿ ಜಬೀ ಎಂಬಾತ ಸೈಪುಲ್ಲಾ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದ. ಇನ್ನೊಂದೆಡೆ ಅದೇ ಸಮಯದಲ್ಲಿ ಸೈಫುಲ್ಲಾ ತಾಯಿ ಸಹ ನಾಪತ್ತೆ ದೂರು ದಾಖಲಿಸಿದರು.
ಅಸಲಿ ಸತ್ಯ ಬಯಲುಈ ವೇಳೆ ಎರಡು ದೂರುಗಳು ಒಂದೇ ಕೇಸ್​ಗೆ ಸಂಬಂಧಿಸಿದ್ದು ಎಂಬುದು ಪೊಲೀಸರಿಗೆ ಪತ್ತೆಯಾಯಿತು. ಬಳಿಕ ರಾಮಮೂರ್ತಿನಗರ ಪೊಲೀಸರು ಜಬೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ಹಲ್ಲೆ ವಿಡಿಯೋಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ:ಕೊನೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿ KKRಗೆ ಜಯ ತಂದುಕೊಟ್ಟ ರಿಂಕು ಸಿಂಗ್​ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ….​
ಇದೀಗ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಶಾಂತ್, ಶೇಖ್​ ಜಬೀವುಲ್ಲಾ ಹಾಗೂ ಶಾಬಾಜ್​ ಅಲಿಯಾಸ್​ ಬಬನ್ ಬಂಧಿತರು. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.(ದಿಗ್ವಿಜಯ ನ್ಯೂಸ್​)
ಪ್ರಚಾರದಲ್ಲಿ ಸುಂಟರಗಾಳಿ ಎಬ್ಬಿಸಲು ಬಿಜೆಪಿ ಪ್ಲ್ಯಾನ್; ಆಂಧ್ರ, ತೆಲಂಗಾಣ ಗಡಿ ಜಿಲ್ಲೆಗಳಲ್ಲಿ ಪವನ್ ಕಲ್ಯಾಣ್ ಗರ್ಜನೆ ನಿರೀಕ್ಷೆ | ಅಖಾಡದಲ್ಲಿ ತಾರೆಯರ ಮಿಂಚು

ಪಾನ್ ಮಸಾಲಾ, ತಂಬಾಕಿಗೆ ಜಿಎಸ್​ಟಿ ಸೆಸ್ ನಿಗದಿ; ಏ.1ರಿಂದಲೇ ಜಾರಿ | ತೆರಿಗೆ ಕಳ್ಳತನಕ್ಕೆ ಕಡಿವಾಣ

ನೀವು ಕೂಡ ಒಂದು ಹೆಣ್ಣಿಗೆ ಹುಟ್ಟಿದವರಲ್ಲವೇ? ಅಭಿಮಾನಿ ಕಾಮೆಂಟ್​ಗೆ ಪವನ್ ಕಲ್ಯಾಣ್​ ಮಾಜಿ ಪತ್ನಿ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
