
ದಾಂಡೇಲಿ:ಗಾಯಗೊಂಡು ಆಸ್ಪತ್ರೆಗೆ ಬಂದ ಮಂಗವೊಂದಕ್ಕೆ ಆಸ್ಪತ್ರೆಯ ಸಿಬ್ಬಂದಿ ಔಷಧೋಪಚಾರ ನೀಡಿ, ಪ್ರೀತಿಯ ಆರೈಕೆ ಮಾಡಿ ಕಳಿಸಿದ ಹೃದಯಸ್ಪರ್ಶಿ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ಇದನ್ನೂ ಓದಿ:20 ವರ್ಷದ ಪುತ್ರಿಯ ಅಮಾನುಷ ಕೊಲೆ: ಪಾಲಕರಿಂದಲೇ ಮಗಳ ಮರ್ಯಾದಾಗೇಡು ಹತ್ಯೆ?
ಇಲ್ಲಿಯ ಜೆ.ಎನ್.ರಸ್ತೆ ಪಕ್ಕದ ಪಾಟೀಲ್ ಆಸ್ಪತ್ರೆಯ ಬಾಗಿಲಿಗೆ ಬಂದು ಕುಳಿತಿದ್ದ ಮಂಗಳ ಎಷ್ಟು ಹೊತ್ತಾದರೂ ಅಲ್ಲಿಂದ ಕದಲಿರಲಿಲ್ಲ. ತುಸು ಮಂಕಾದಂತೆ ಕಂಡುಬಂದಿದ್ದ ಮಂಗನ ಕಾಲಿಗೆ ಗಾಯವಾಗಿತ್ತು. ತನಗೆ ಗಾಯವಾಗಿದೆ, ಚಿಕಿತ್ಸೆ ನೀಡಬೇಕೆಂದು ತನ್ನದೇ ಆದ ರೀತಿಯಲ್ಲಿ ಸನ್ನೆ ಮಾಡಿದರೂ ಅರ್ಥವಾಗದ ಆಸ್ಪತ್ರೆ ಸಿಬ್ಬಂದಿ ಗಲಿಬಿಲಿಗೊಂಡರು.
ಇದನ್ನೂ ಓದಿ:ಅತ್ತ ಪತಿರಾಯ ಜವರಾಯನ ಮಡಿಲಿಗೆ, ಇತ್ತ ಮಗು ತಾಯಿಯ ಮಡಿಲಿಗೆ…
ಆಸ್ಪತ್ರೆ ಬಿಟ್ಟು ಕದಲದ ಮಂಗ ಅಲ್ಲೇ ಕುಳಿತುಕೊಂಡಿತು. ಕೆಲಹೊತ್ತಿನ ನಂತರ ಆಸ್ಪತ್ರೆ ಸಿಬ್ಬಂದಿಯೊಬ್ಬರು ಮಂಗನ ಕಾಲಿಗೆ ಆದ ಗಾಯ ಗಮನಿಸಿ ಔಷಧಿ ಹಚ್ಚಿ ಉಪಚರಿಸಿದರು. ಬಳಿಕ ಮಂಗ ಯಾವುದೇ ತಂಟೆ ಮಾಡದೆ ಸುಮ್ಮನೆ ತೆರಳಿತು. ಮಂಗನ ಈ ವರ್ತನೆ ಆಸ್ಪತ್ರೆ ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ. ಅದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#CareForWildlifeAmazing…an injured monkey turns up at Patil Hospital, Dandeli for medical care!!!Praise worthy Compassion by staff🐒🐵pic.twitter.com/kMI7e9U3cG— Sandeep Tripathi, IFS (@sandeepifs)June 9, 2020
#CareForWildlifeAmazing…an injured monkey turns up at Patil Hospital, Dandeli for medical care!!!Praise worthy Compassion by staff🐒🐵pic.twitter.com/kMI7e9U3cG
ಇದನ್ನೂ ಓದಿ:ಆನ್​ಲೈನ್​ನಲ್ಲಿ ಕೆಮಿಸ್ಟ್ರಿ ಕಲಿಸೋಕೆ ಶಿಕ್ಷಕಿಯ ಸರ್ಕಸ್​…!
‘ಲೆಟ್ಸ್ ಗೋ ದಾಂಡೇಲಿ’ ಎಂಬ ಫೇಸ್‌ಬುಕ್ ಪುಟದಲ್ಲಿ ಶುಕ್ರವಾರ ಈ ಹೃದಯಸ್ಪರ್ಶಿ ದೃಶ್ಯಾವಳಿ ಹಂಚಿಕೆಯಾಗಿ ವೈರಲ್ ಆಗಿದೆ. ಗಾಯಗೊಂಡ ಮಂಗ ಆಸ್ಪತ್ರೆಯ ಮೆಟ್ಟಿಲುಗಳ ಮೇಲೆ ತಾಳ್ಮೆಯಿಂದ ಕಾಯುತ್ತಿರುವ ದೃಶ್ಯ ಇದರಲ್ಲಿದೆ. ಇತರ ರೋಗಿಗಳು ಮಂಗನನ್ನು ಕುತೂಹಲದಿಂದ ನೋಡುತ್ತಿದ್ದಾರೆ.
ಇದನ್ನೂ ಓದಿ:ಮಿತ್ರೋ ಆ್ಯಪ್​ ತನ್ನದೇ ಎಂದು ಹಸಿಸುಳ್ಳು ಹೇಳಿರುವ ಪಾಕ್​ನಿಂದೀಗ ನಕಲಿ ಆರೋಗ್ಯ ಸೇತು ಆ್ಯಪ್​!
ಒಬ್ಬಾತ ಕೋತಿಯ ಬೆನ್ನಿಗೆ ಹೊಡೆದು ಗಾಯಗಳನ್ನು ಪರೀಕ್ಷಿಸುತ್ತಿದ್ದರೆ, ಮತ್ತೊಬ್ಬ “ಯೇ ಡಾ. ಪಾಟೀಲ್ ಕೆ ಹಾಸ್ಪಿಟಲ್ ಮೇ ಆಯಾ ಹೈ ಟ್ರೀಟ್ಮೆಂಟ್ ಕರಾನೆ (ಅದು ಚಿಕಿತ್ಸೆಗಾಗಿ ಡಾ ಪಾಟೀಲ್ ಆಸ್ಪತ್ರೆಗೆ ಬಂದಿದೆ).” ಎನ್ನುತ್ತಿರುವಂತಿದೆ. ಕೋತಿ ವಾಶ್ ಬೇಸಿನ್ ಮೇಲೆ ಕುಳಿತಿದ್ದು, ಇಬ್ಬರು ಕೋತಿಯನ್ನು ಪರೀಕ್ಷಿಸಿ ಔಷಧಿ ಹಚ್ಚುತ್ತಿರುವ ದೃಶ್ಯವಿದೆ. ಗಾಯ ಎಲ್ಲಿದೆ ಎಂಬುದನ್ನು ತೋರಿಸಲು ಅದು ಒಮ್ಮೆ ಮಾತ್ರ ಹಿಂದಕ್ಕೆ ತಿರುಗುತ್ತದೆ.
ಇದನ್ನೂ ಓದಿ:ಮಾಜಿ ಕ್ರಿಕೆಟಿಗಿನ ಶವ ಮನೆಯಲ್ಲಿಯೇ ಸಿಕ್ಕಿತು ಕೊಳೆತ ಸ್ಥಿತಿಯಲ್ಲಿ!
ಆಸ್ಪತ್ರೆಯ ಸಿಬ್ಬಂದಿಯ ಸಹಾನುಭೂತಿಯನ್ನು ಶ್ಲಾಘಿಸಿದ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸಂದೀಪ್ ತ್ರಿಪಾಠಿ ಅವರು ಇಂದು ಬೆಳಿಗ್ಗೆ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಮರು ಪೋಸ್ಟ್ ಮಾಡಿದ್ದಾರೆ. “ಅದ್ಭುತ.. !ಗಾಯಗೊಂಡ ಕೋತಿ ವೈದ್ಯಕೀಯ ಚಿಕಿತ್ಸೆಗಾಗಿ ದಾಂಡೇಲಿಯ ಪಾಟೀಲ್ ಆಸ್ಪತ್ರೆಯಲ್ಲಿ ತಿರುಗುತ್ತಿದೆ!” ಎಂದು ಬರೆದಿದ್ದಾರೆ..
ಇದನ್ನೂ ಓದಿ:ಬೈಕ್​ ಕದಿಯಲು ಬರುವೆ, ತಾಕತ್​ ಇದ್ರೆ ಹಿಡೀರಿ: ಪೊಲೀಸರಿಗೆ ಕಳ್ಳನ ಸವಾಲ್​!
ಈ ಹೃದಯಸ್ಪರ್ಶಿ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ 13,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಮತ್ತು ವೀಕ್ಷಕರು ಕೋತಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. “ಈ ಬಡ ಪ್ರಾಣಿಗೆ ಸಹಾಯ ಮಾಡಿದವರನ್ನು ದೇವರು ಆಶೀರ್ವದಿಸಲಿ, ಈ ಆದಿಮಾನವನಿಗೆ ಚಿಕಿತ್ಸೆ ನೀಡಿದವರಿಗೆ ನಮಸ್ಕಾರ” ಎಂದು ಬರೆದಿದ್ದಾರೆ. ಕರ್ನಾಟಕ ದಟ್ಟ ಕಾಡುಗಳು ಮತ್ತು ವನ್ಯಜೀವಿ ಅಭಯಾರಣ್ಯಕ್ಕೆ ಹೆಸರುವಾಸಿಯಾದ ದಾಂಡೇಲಿ ಆನೆಗಳು, ಮಂಗಗಳು ಮತ್ತು ಪ್ಯಾಂಥರ್‌ಗಳಿಗೆ ನೆಲೆಯಾಗಿದೆ.
ರಿಯಲ್​ ಲೈಫ್​ ಹೀರೋ: ವಲಸೆ ಕಾರ್ಮಿಕರಿಗಾಗಿ ಸಿದ್ಧವಾಯ್ತು ಆರು ವಿಮಾನ, 10 ಬಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
