ಬೆಂಗಳೂರು: ರಾಮನ ಕುರಿತ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ…’ ಹಾಡು, ಇದೀಗ ಯೂಟ್ಯೂಬ್​ನಲ್ಲಿ ಎರಡು ಕೋಟಿ ವೀಕ್ಷಣೆಯ ಸಮೀಪ ಆಗಮಿಸುತ್ತಿದೆ.
ಈ ಹಾಡು ಈಗಾಗಲೇ ತೆಲುಗು, ತಮಿಳು ತುಳು ಭಾಷೆಗಳಿಗೆ ಭಾಷಾಂತರವಾಗಿ, ಹರಿಕತೆ, ಭರತನಾಟ್ಯ, ಚಿತ್ರರಚನೆ, ಮರಳುಚಿತ್ರ.. ಹೀಗೆ ಹತ್ತು ಹಲವು ಕಲಾಪ್ರಕಾರಗಳಿಗೆ ಸ್ಪೂರ್ತಿಯಾದ ಈ ಗೀತೆಯನ್ನು ಹಾಡಿದವರು ನೂರಾರು ಗಾಯಕರು. ನಾಟಕಕಾರ, ಸಾಹಿತಿ, ಗಜಾನನ ಶರ್ಮಾ ಅವರ ಲೇಖನಿಯಲ್ಲಿ ಮೂಡಿಬಂದ ಈ ಹಾಡಿಗೆ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು, ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳೂ ದನಿಯಾಗಿದ್ದಾರೆ. ಈ ಹಾಡು ಸೃಷ್ಟಿಯಾದ ಹಿನ್ನೆಲೆ ಹೇಳಿಕೊಳ್ಳುವ ಗಜಾನನ ಶರ್ವ, ‘ಎಂಟು ವರ್ಷದ ಹಿಂದೆ ಚಾತುರ್ವಸ್ಯದ ಸಂದರ್ಭದಲ್ಲಿ ರಾಮನ ಕುರಿತು ಭಕ್ತಿಗೀತೆ ಬರೆಯಲು ರಾಘವೇಶ್ವರ ಶ್ರೀಗಳು ಸೂಚಿಸಿದ್ದರು. ಆಗ ಕೆಪಿಟಿಸಿಎಲ್​ನಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದ ನಾನು ಕೆಲಸದೊತ್ತಡದಲ್ಲಿ ಹಾಡು ಬರೆಯುವುದನ್ನು ಮುಂದೂಡುತ್ತಲೇ ಬಂದಿದ್ದೆ. ಒಂದು ದಿನ ತರಬೇತಿ ನಿಮಿತ್ತ ಕೇರಳಕ್ಕೆ ತೆರಳಿದ ಸಂದರ್ಭದಲ್ಲಿ ಅಲ್ಲೇ ಇದ್ದ ‘ಏ ದಿಲ್ ಮಾಂಗೇ ಮೋರ್, ಏ ದಿಲ್ ಮಾಂಗೇ ರಾಮ್.’ ಎಂಬಂತೆ ಅನ್ನಿಸಿತು. ಆಗ ಹುಟ್ಟಿದ್ದೇ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ..’ ಎನ್ನುತ್ತಾರವರು.
ಇದನ್ನೂ ಓದಿರಿ:ಗಿಣಿರಾಮ ಧಾರಾವಾಹಿಯಿಂದ ಮಹತಿ ಔಟ್​?! ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಸದ್ಯ ಈ ಹಾಡು ಭಕ್ತಿಗೀತೆ ಹೇಳಿಕೊಡುವ ಅನೇಕ ಭಕ್ತಿ ಸಂಗೀತ ಶಿಕ್ಷಕರು ಈ ಗೀತೆಯನ್ನು ಸಾಮೂಹಿಕವಾಗಿ ಹೇಳಿಕೊಟ್ಟಿದ್ದಾರೆ.ಅನೇಕ ದೇವಾಲಯಗಳಲ್ಲಿ ಇದು ಪ್ರಾರ್ಥನಾ ಪದ್ಯವಾಗಿ ಪ್ರತಿನಿತ್ಯ ಹಾಡಲ್ಪಡುತ್ತದೆ. ಈ ಹಾಡಿಗೆ ಗಜಾನನ ಅವರ ಪುತ್ರ ಸಾಕೇತ್ ಶರ್ಮಾ ರಾಗ ಸಂಯೋಜಿಸಿದ್ದು, ಸುಪ್ರಭಾ ಅವರ ಕಂಠದಲ್ಲಿ ಮೂಡಿ ಬಂದ ಈ ಹಾಡು ಯೂಟ್ಯೂಬ್​ನಲ್ಲಿ 1ಕೋಟಿ 30 ಲಕ್ಷ ವೀಕ್ಷಣೆ ಕಂಡಿದೆ. ಇನ್ನುಳಿದಂತೆ ಬೇರೆ ಬೇರೆ ಚಾನೆಲ್​ಗಳಲ್ಲಿ 70 ಲಕ್ಷ ವೀಕ್ಷಣೆಯತ್ತ ಸಾಗಿದೆ.

ವಿಜಯವಾಣಿ ರಾಜ್ ಉತ್ಸವ: ಒಳಗೂ ಬಿಳಿ..ಹೊರಗೂ ಬಿಳಿ!

ಅಪ್ರತಿಮ ಸಾಹಸ ಮೆರೆದ ರೈಲ್ವೆ ಪಾಯಿಂಟ್​​ಮನ್ ಮಯೂರ್ ಶೆಳಕೆಗೆ ಜಾವಾ ಬೈಕ್ ಉಡುಗೊರೆ!

ಭಾರತದಲ್ಲೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಪಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 1 =
Remember me
