ಬೆಂಗಳೂರು:ಆಹಾರ ಪೋಲು ಮಾಡುತ್ತಿರುವುದು ಪರಿಸರ, ಆರ್ಥಿಕತೆಗೂ ಕಂಟಕವಾಗಿದೆ. ಪ್ರತಿಷ್ಠೆ, ಆಡಂಬರ, ತಿಳಿವಳಿಕೆ ಕೊರತೆಯಿಂದ ಆಹಾರ ಚೆಲ್ಲುವುದು ಸಾಮಾನ್ಯವಾಗಿದ್ದು, ಆಹಾರ ವ್ಯರ್ಥ ಮಾಡುವುದನ್ನು ಪರಿಣಾಮಕಾರಿಯಾಗಿ ತಡೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮದ 2021ರ ವರದಿ ಪ್ರಕಾರ ದೇಶದಲ್ಲಿ ವಾರ್ಷಿಕ ತಲಾ 50 ಕೆಜಿ ಅಂದರೆ 68.76 ದಶಲಕ್ಷ ಟನ್ ಆಹಾರ ಚೆಲ್ಲಲಾಗುತ್ತಿದೆ. ಮತ್ತೊಂದು ವರದಿ ಪ್ರಕಾರ ರಾಜ್ಯದಲ್ಲಿ ಪ್ರತಿದಿನ 8,825 ಟನ್ ಆಹಾರ ಪೋಲಾಗುತ್ತಿದೆ. ಇದರಲ್ಲಿ ಬೆಂಗಳೂರಿನ ಪಾಲು 4,500 ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ.
ವ್ಯರ್ಥ ಆಹಾರವು ತ್ಯಾಜ್ಯ ವಿಲೇವಾರಿ ತಾಣ, ಭೂಭರ್ತಿ ಇನ್ನಿತರ ಸ್ಥಳಗಳಲ್ಲಿ ಸುರುವಲಾಗುತ್ತದೆ. ಪರಿಸರ, ಆರೋಗ್ಯ ಸಂಬಂಧಿಗಳ ಸಮಸ್ಯೆಗಳಿಗೆ ತನ್ನದೇ ಆದ ಪಾಲು ನೀಡುತ್ತಿದೆ. ಇದು, ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದರೆ, ಜಾಗತಿಕವಾಗಿಯೂ ಸವಾಲು ಎದುರಿಸುತ್ತಿದೆ ಎಂದು ಯುಎನ್‌ಇಪಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಮಸ್ಯೆಯ ಕುರಿತು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಕಳವಳ ವ್ಯಕ್ತಪಡಿಸಿ, ತಮ್ಮ ವಿಚಾರ ಲಹರಿಯನ್ನು ಸುದ್ದಿಗಾರರಿಗೆ ಶುಕ್ರವಾರ ಹಂಚಿಕೊಂಡರು.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ಸಮ್ಮೇಳನದಲ್ಲಿ ಆಹಾರ ಪೋಲಾಗುತ್ತಿರುವ ಗಂಭೀರ ವಿಷಯವನ್ನು ಪ್ರಸ್ತಾಪಿಸಿ, ಗಮನಸೆಳೆದಿರುವೆ. ರಾಜ್ಯದಲ್ಲಿ ಆಹಾರ ಚೆಲ್ಲುವುದನ್ನು ತಡೆಯಲು ವಿನೂತನ ಕ್ರಮಕ್ಕೆ ಚಿಂತನೆ ನಡೆಸಿರುವೆ ಎಂದು ತಿಳಿಸಿದರು.ಸರಿಸುಮಾರು ಶೇ.20 ರಿಂದ 25ರಷ್ಟು ತಿಳಿದೋ ತಿಳಿಯದೆಯೋ ವ್ಯರ್ಥ ಮಾಡಲಾಗುತ್ತಿದೆ.
ಈ ಪರಿಪಾಠ ಕೊನೆಗಾಣಿಸಲೆಂದು ಒಂದು ಸುತ್ತಿನ ಸಭೆ ನಡೆಸಲಾಗಿದೆ. ಹೋಟೆಲ್ ಮಾಲೀಕರ ಸಂಘದವರು ಮೊದಲ ಸಭೆಯಲ್ಲಿದ್ದರು. ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡವರ ಜತೆಗೆ ಇನ್ನೆರಡು ಸುತ್ತಿನ ಸಭೆ ನಡೆಸಿ, ತಿಂಗಳೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವೆ ಎಂದರು.
ಮುಖ್ಯವಾಗಿ ಹೋಟೆಲ್‌ಗಳು, ಕಲ್ಯಾಣ ಮಂಟಪ, ಸಭೆ- ಸಮಾರಂಭ ನಡೆಯುವ ಸ್ಥಳಗಳು, ಹಾಸ್ಟೆಲ್‌ಗಳಲ್ಲಿ ಜಾಗೃತಿ ಮೂಡಿಸಿ ಮನವೊಲಿಸಲಾಗುತ್ತದೆ. ಆಹಾರ ಚೆಲ್ಲುವುದರಿಂದಾಗುವ ದುಷ್ಪರಿಣಾಮಗಳ ಅರಿವು, ಮಹತ್ವ ಹಾಗೂ ಮೌಲ್ಯವನ್ನು ತಿಳಿಸಿ ಜಾಗೃತಗೊಳಿಸಲಿದ್ದು, ಮುಂದಿನ ಹಂತದಲ್ಲಿ ಕಾಯ್ದೆ ಜಾರಿ ಬಗ್ಗೆ ಯೋಚಿಸಲಾಗುತ್ತದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 2 =
Remember me
