ನವದೆಹಲಿ:ಮುಖ್ಯ ಉದ್ಯೋಗದ ಜೊತೆ ಇನ್ನೊಂದು ಅರೆಕಾಲಿಕ ಕೆಲಸ ಮಾಡುವ ‘ಮೂನ್​ಲೈಟಿಂಗ್’ ಬಗ್ಗೆ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇಂತಹ ನೌಕರರನ್ನು ಉದ್ಯೋಗದಿಂದ ತೆಗೆಯುವುದಾಗಿ ಇನ್ಪೋಸಿಸ್ ಎಚ್ಚರಿಕೆ ನೀಡಿದೆ. ವಿಪ್ರೊ ಕೂಡ ಈ ರೀತಿಯ ಪ್ರವೃತ್ತಿ ವಂಚನೆ ಎಂದು ಹೇಳಿದ್ದು, ಅಜೀಂ ಪ್ರೇಮ್ ತಿಂಗಳ ಹಿಂದೆಯೇ ಅತೃಪ್ತಿ ಹೊರಹಾಕಿದ್ದರು.
ಇನ್ಪೋಸಿಸ್​ನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ ಸೋಮವಾರ ಉದ್ಯೋಗಿಗಳಿಗೆ ‘ನೋ ಟೂ ಟೈಮಿಂಗ್, ನೋ ಮೂನ್​ಲೈಟಿಂಗ್’ ಒಕ್ಕಣೆಯ ಇಮೇಲ್ ಕಳುಹಿಸಿದ್ದು, ನೌಕರರ ನೀತಿ ಸಂಹಿತೆ ಪ್ರಕಾರ ಮೂನ್​ಲೈಟಿಂಗ್​ಗೆ ಅವಕಾಶವಿಲ್ಲ ಎಂದಿದೆ. ಅದನ್ನು ಉಲ್ಲಂಘಿಸಿದವರು ಮನೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಏನಿದು ಮೂನ್​ಲೈಟಿಂಗ್?:ಮುಖ್ಯ ಉದ್ಯೋಗದ ಕೆಲಸದ ಸಮಯದ ನಂತರ ಅಥವಾ ಅದಕ್ಕೂ ಮೊದಲಿನ ಬಿಡುವಿನ ವೇಳೆಯಲ್ಲಿ ಬೇರೆ ಕೆಲವು ನಿರ್ದಿಷ್ಟ ಕೆಲಸ ಮಾಡುವುದನ್ನು ಮೂನ್​ಲೈಟಿಂಗ್ ಎನ್ನುತ್ತಾರೆ.
ಕೋವಿಡ್ ಕಾಲದ ಪ್ರಕ್ರಿಯೆ:ಕೋವಿಡ್ ಸಾಂಕ್ರಾಮಿಕತೆ ಅವಧಿಯಲ್ಲಿ ನೌಕರರಿಗೆ ದೂರ ಪ್ರದೇಶದಿಂದ (ಮನೆಗಳಿಂದಲೇ) ಕೆಲಸ ಮಾಡುವ ಅವಕಾಶವನ್ನು ಕೊಟ್ಟ ವೇಳೆ ಮೂನ್​ಲೈಟಿಂಗ್ ಸುತ್ತ ಕಳವಳ ಸೃಷ್ಟಿಯಾಗಿತ್ತು. ಈ ಸೌಲಭ್ಯವನ್ನು ಬಳಸಿಕೊಂಡ ನೌಕರರು ಏಕಕಾಲದಲ್ಲಿ ಬೇರೆ ಪ್ರಾಜೆಕ್ಟ್​ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಚಾರ ಅನೇಕ ಕಂಪನಿಗಳು, ಅದರಲ್ಲೂ ವಿಶೇಷವಾಗಿ ಐಟಿ ವಲಯದ ಸಂಸ್ಥೆಗಳಿಗೆ ತಿಳಿದು ಬಂದಿತ್ತು. ಇದು ಉತ್ಪಾದಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ, ಸಂಘರ್ಷ ಸೃಷ್ಟಿಸುತ್ತದೆ. ಅಲ್ಲದೆ ಡೇಟಾ ಉಲ್ಲಂಘನೆಯೂ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದವು. ಬ್ಲ್ಯಾಕ್​ಸ್ಟೋನ್ ನಿಯಂತ್ರಿತ ಸಂಸ್ಥೆ ಎಂಫಸಿಸ್ ಕಳೆದ ತಿಂಗಳು ಮೂನ್​ಲೈಟಿಂಗ್ ವಿಚಾರದಲ್ಲಿ ತನ್ನ ಉದ್ಯೋಗಿಗಳ ಪರಿಶೀಲನೆಯನ್ನು ತೀವ್ರಗೊಳಿಸಿತ್ತು.
ಅಪ್ರಾಪ್ತನಿಗೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಲಿಂಗಪರಿವರ್ತನೆ: ವೈದ್ಯೆ ವಿರುದ್ಧದ ಕೇಸ್​ ರದ್ದು ಮಾಡಲು ಹೈಕೋರ್ಟ್​ ನಕಾರ

ಸಾವಿನ ಮನೆಯಲ್ಲಿ ಭಯ ಹುಟ್ಟಿಸಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಬುಡಬುಡುಕೆ! ಹಾಡಹಗಲೇ ಬೆಂಗಳೂರಲ್ಲಿ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 19 =
Remember me
