ದೊಡ್ಡಬಳ್ಳಾಪುರ:ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವತಿಯ ಜತೆ ಕಳೆದ ಒಂದು ವರ್ಷದಿಂದ ಪ್ರೇಮ ಸಂಬಂಧವನ್ನು ಹೊಂದಿದ್ದ ಯುವಕ, ನಾವಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ ಎಂದೇ ಭಾವಿಸಿ, ಮದುವೆಯಾಗುವ ಆಸೆಯನ್ನು ಸಹ ಕಂಡಿದ್ದ! ಆದರೆ, ಆತನ ಕನಸು ಈಕೆಯ ಮೋಸದಾಟ ಬಯಲಾಗ್ತಿದ್ದಂತೆ ನುಚ್ಚುನೂರಾಗಿದ್ದು, ಇದೀಗ ಸಾವಿನ ಮನೆ ಸೇರುವಂತೆ ಮಾಡಿದೆ.
ಇದನ್ನೂ ಓದಿ:ಸೇನೆ ಬಗ್ಗೆ ಕೈ ನಾಯಕರ ವಿವಾದಾತ್ಮಕ ಹೇಳಿಕೆ; ಜನ್ರು ಏನ್​ ಹೇಳ್ತಾರೆ?
ಮೃತ ಯುವಕನನ್ನು ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ನಿವಾಸಿ ಬಾಲಾಜಿ (23) ಎಂದು ಗುರುತಿಸಲಾಗಿದ್ದು, ಒಂದು ವರ್ಷದ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಯುವತಿಯೊಂದಿಗೆ ಪರಿಚಯ ಹೊಂದಿದ್ದ. ಬಳಿಕ ಅದು ಪ್ರೀತಿಗೆ ತಿರುಗಿದ್ದು, ಜತೆಯಲ್ಲಿ ಸುತ್ತಾಡಿ ಕೊನೆಯಲ್ಲಿ ಬೇರೊಬ್ಬನ ಜತೆಗೆ ಪ್ರೀತಿ ಸಂಬಂಧದಲ್ಲಿ ಇರುವುದು ಗೊತ್ತಾಗಿದೆ. ತನ್ನೊಂದಿಗೆ ಲವ್​ ಮಾಡಿ, ಕೈಕೊಟ್ಟ ಬೇಸರದಲ್ಲಿ ಮನನೊಂದ ಬಾಲಾಜಿ, ಕಾಳುಮಾತ್ರೆ ಸೇವಿಸಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಂಬಿಸಿ, ಮೋಸ ಮಾಡಿದ ಯುವತಿಯನ್ನು ಕನಕಪುರ ಮೂಲದವಳು ಎಂದು ಹೇಳಲಾಗಿದ್ದು, ಸೋಮವಾರ (ಮೇ.13) ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿ ಒಂದು ವರ್ಷವಾಗಿತ್ತು. ಇದೇ ಕಾರಣವನ್ನು ಮುಂದಿಟ್ಟ ಬಾಲಾಜಿ, ಮದುವೆ ಮಾಡಿಕೊಳ್ಳೋಣ ಅಂದಿದಕ್ಕೆ ಮನೆಯಲ್ಲಿ ಒಪ್ಪಲ್ಲ ಎಂದು ಹೇಳಿದ್ದಲ್ಲದೇ, ಬೇರೆ ಯುವಕನ ಜತೆ ಪ್ರೀತಿಯಲ್ಲಿರುವುದಾಗಿ ಹೇಳಿದ್ದಾಳೆ. ಈ ವಿಷಯಕ್ಕೆ ತೀವ್ರ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ನಾನು ಮಾಡಿದ ಈ ಒಂದು ತಪ್ಪನ್ನು ನನ್ನ ಮಗಳು ಮಾಡಲು ಬಿಡುವುದಿಲ್ಲ! ಹೀಗ್ಯಾಕಂದ್ರು ಆಲಿಯಾ ಭಟ್​?
ವೃತ್ತಿಯಲ್ಲಿ ಅಮೆಜಾನ್ ಡೆಲಿವರಿ ಬಾಯ್ ಆಗಿದ್ದ ಬಾಲಾಜಿ, ಬಡ ಕುಟುಂಬಕ್ಕೆ ಆಧಾರವಾಗಿದ್ದ. ಇದೀಗ ಮಗನ ದುರಂತ ಅಂತ್ಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬೆನ್ನಲ್ಲೇ ಯುವತಿ ವಿರುದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಯುವಕನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ತನ್ನ ಪತಿ​ ರಾಹುಲ್​ಗೆ ಬೈದ LSG ಮಾಲೀಕನಿಗೆ ಅತಿಯಾ ಶೆಟ್ಟಿ ಕೊಟ್ರಾ ತಿರುಗೇಟು? ಫೋಟೋ ವೈರಲ್
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × one =
Remember me
