ಬಾಗಲಕೋಟೆ:ಇನ್​ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿ ಆತನನ್ನು ಪ್ರೀತಿಸಿ ಮದುವೆಯಾಗಿದ್ದ ಮಹಿಳೆಗೆ ಕೇವಲ ಒಂದೇ ತಿಂಗಳಲ್ಲಿ ತನ್ನ ವೈವಾಹಿಕ ಜೀವನದಲ್ಲಿ ಬರ ಸಿಡಿಲು ಬಡಿದಿದೆ. ಕೈ ಹಿಡಿದ ಗಂಡ ಇದೀಗ ಕೈಕೊಟ್ಟು ಪರಾರಿಯಾಗಿದ್ದು, ಸಂತ್ರಸ್ತೆ ಶೋಕ ಸಾಗರದಲ್ಲಿ ಮುಳುಗಿದ್ದಾಳೆ.
ಬಿಹಾರ‌ ಮೂಲದ ನರಿಜಾ ಬೇಗಮ್​ಗೆ ಬಾಗಲಕೋಟೆ ಮೂಲದ‌ ಮೊಹಮ್ಮದ್​ ಇಮ್ರಾನ್ ಕೆಲಾರಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಸೀಗಿಕೇರಿ ಗ್ರಾಮದ ಬಾಡಿಗೆ ಮನೆಯಲ್ಲಿ ಪತ್ನಿಯನ್ನು ಬಿಟ್ಟು ಇಮ್ರಾನ್​ ಎಸ್ಕೇಪ್​ ಆಗಿದ್ದಾರೆ. ಪತಿಯ ಪೋನ್​ ನಂಬರ್ ಕೂಡ ಸ್ವಿಚ್ ಆಫ್​ ಆಗಿದೆ. ಮುಂದೇನು ಮಾಡಬೇಕು ಎಂದು ದಿಕ್ಕು ತೋಚದೆ ರಾತ್ರಿಯಿಡಿ ಮನೆಯಲ್ಲಿ ನರಿಜಾ ಕಣ್ಣೀರು ಹಾಕಿದ್ದಾರೆ. ಒಂದು ತಿಂಗಳ‌ ಹಿಂದಷ್ಟೇ ಇಬ್ಬರು ಬಿಹಾರದಲ್ಲಿ ಮದುವೆಯಾಗಿದ್ದರು. ನರಿಜಾ ಬಿಹಾರದ ಪೂರ್ನಿಯಾ ಜಿಲ್ಲೆಯ ಕರುಣಾಬಾಡೀಜ್ ಮೂಲದವರು.
ಕಾರು ಚಾಲಕನಾಗಿರುವ ಇಮ್ರಾನ್ ಮತ್ತು ನರಿಜಾ ಈ ಮೊದಲೇ ಬೇರೆ ಬೇರೆ ಮದುವೆಯಾಗಿದ್ದರು. ಇಬ್ಬರು ತಲಾಕ್​​​ನಲ್ಲಿದ್ದರು. ನರಿಜಾ ಬೇಗಮ್‌ ಇನ್​​​ಸ್ಟಾಗ್ರಾಂ ಫೋಟೋ ನೋಡಿ ಸಲಾಂ ವಾಲೆಕುಮ್ ಎಂದು ಇಮ್ರಾನ್​ ಕಾಮೆಂಟ್ ಮಾಡಿದ್ದ. ಇದಕ್ಕೆ‌ ನರಿಜಾ ಕೂಡ ವಾಲೆಕುಮ್‌ ಅಸ್ಸಲಾಂ ಎಂದು ಪ್ರತಿಕ್ರಿಯೆ ನೀಡಿದ್ದಳು.
ಇದನ್ನೂ ಓದಿ:ಆರ್​ಟಿಐ ಅಸ್ತ್ರ ದುರ್ಬಳಕೆ: ಬರೀ 15 ಜನರಿಂದ ಮಾಹಿತಿ ಆಯೋಗಕ್ಕೆ 18,134 ಮೇಲ್ಮನವಿ ಸಲ್ಲಿಕೆ
ಇದಾದ ಬಳಿಕ ಇಬ್ಬರ ನಡುವೆ ಚಾಟಿಂಗ್​ ಆರಂಭವಾಗಿತ್ತು. ಆರಂಭದ ಪರಿಚಯ, ಸ್ನೇಹವಾಗಿ, ನಂತರ ಪ್ರೀತಿಗೆ ತಿರುಗಿತ್ತು. ಬಳಿಕ ಪರಸ್ಪರ ವಿಡಿಯೋ ಕಾಲ್ ಮಾಡುವ ಮೂಲಕ ಮತ್ತಷ್ಟು ಹತ್ತಿರವಾದರು. ಇನ್​ಸ್ಟಾಗ್ರಾಂನಲ್ಲಿ ಪ್ರೀತಿ ಚಿಗುರಿದ ಆರೇ ದಿನದಲ್ಲಿ ಇಬ್ಬರ ಮದುವೆಯಾಗಿತ್ತು. ಬಳಿಕ ಇಬ್ಬರು ಸಂಬಂಧಿಕರನ್ನು ಒಪ್ಪಿಸಿ‌ ಮದುವೆಯಾಗಿದ್ದರು.
ಇಮ್ರಾನ್ ತನ್ನ ಮಾವ ಹಾಗೂ ಕೆಲವರ ಜತೆ ಬಿಹಾರಕ್ಕೆ ಹೋಗಿ ನರಿಜಾ ಸಂಬಂಧಿಕರ ಸಮ್ಮುಖದಲ್ಲಿ‌ ಸರಳವಾಗಿ ನಿಖಾ ಮಾಡಿಕೊಂಡಿದ್ದರು. ನಂತರ ಬಾಗಲಕೋಟೆಗೆ ಕರೆತಂದು ನವನಗರದಲ್ಲಿ ವಾಸವಿದ್ದರು. ಕಳೆದ ಐದು ದಿನದ ಹಿಂದೆ ಸೀಗಿಕೇರಿ ಗ್ರಾಮದಲ್ಲಿ ಬಾಡಿಗೆ ಮನೆಗೆ ಇಬ್ಬರು ಸ್ಥಳಾಂತವಾಗಿದ್ದರು. ಇದೀಗ ಐದನೇ ದಿನಕ್ಕೆ ಪತಿ ಎಸ್ಕೇಪ್​ ಆಗಿದ್ದಾನೆ.
ನನಗೆ ಪತಿ ಬೇಕು, ನಾ ಸತ್ತರೂ ಇಲ್ಲೇ ಸಾಯ್ತಿನಿ ಆದರೆ, ಬಿಹಾರಗೆ ಮಾತ್ರ ವಾಪಸ್​ ಹೋಗುವುದಿಲ್ಲ. ನನ್ನ ಪತಿಯನ್ನು ನನಗೆ ಹುಡುಕಿ ಕೊಡಿ ಎಂದು ನರಿಜಾ ಬಾಗಲಕೋಟೆಯ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾರೆ. ಆತನಿಗೆ ಹೊಡಿಬೇಡಿ, ತೊಂದರೆ ಕೊಡಬೇಡಿ, ನನ್ನ ಜೊತೆ ಬದುಕುವಂತೆ ಮಾಡಿ ಎಂದು ಕಣ್ಣೀರು ಹಾಕಿದ್ದಾರೆ.
World Cup 2023: ರೋಹಿತ್​ ಶರ್ಮರನ್ನು ಭೇಟಿಯಾಗಿ ಪಾಕಿಸ್ತಾನಕ್ಕೆ ಖಡಕ್​ ಸಂದೇಶ ರವಾನಿಸಿದ ದಿ ಗ್ರೇಟ್​ ಖಲಿ!

ಧರ್ಮಶಾಲಾದಲ್ಲಿ ಇಂದು ಬಾಂಗ್ಲಾದೇಶ-ಅಫ್ಘಾನಿಸ್ತಾನ ಮುಖಾಮುಖಿ

ನನ್ನ ಗಂಡ ಹೇಗಿರಬೇಕೆಂದರೆ… ; ಕನಸಿನ ರಾಜಕುಮಾರನ ಬಗ್ಗೆ ನಟಿ ಕೃತಿ ಸನನ್ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eight =
Remember me
