ದೇಶದಲ್ಲಿ ಇದೀಗಬೃಹತ್ ಎತ್ತರದ ಪ್ರತಿಮೆಗಳನ್ನು ನಿರ್ಮಿಸುವ ಚಾಳಿ ಆರಂಭವಾಗಿದೆ. ಭಾರತದ ಮಾಜಿ ಗೃಹ ಸಚಿವ ಹಾಗೂ ಉಕ್ಕಿನ ಮನುಷ್ಯ ಎಂದು ಹೆಸರಾದ ಸರ್ದಾರ್ ವಲ್ಲಭಬಾಯಿ ಪಟೇಲರ “ಸ್ಟ್ಯಾಚು ಆಫ್ ಯುನಿಟಿ” ವಿಗ್ರಹ ನಿರ್ಮಾಣದ ನಂತರ ದೇಶದಲ್ಲಿ ಇಂತಹ ಟ್ರೆಂಡ್ ಆರಂಭವಾಯಿತು.
ಪಟೇಲರ ವಿಗ್ರಹದ ನಂತರ ಮಹಾರಾಷ್ಟ್ರದಲ್ಲಿ ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹರಾಜರ ಜಗತ್ತಿನಲ್ಲೇ ಅತ್ಯಂತ ಎತ್ತರದ ವಿಗ್ರಹ ನಿರ್ಮಿಸುವ ಪ್ರಸ್ತಾಪವಾಯಿತು. ಆ ನಂತರ ಉತ್ತರ ಪ್ರದೇಶದ ಸರದಿ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಯ ಸರಾಯು ನದಿಯ ತೀರದಲ್ಲಿ ಶ್ರೀ ರಾಮಚಂದ್ರರ ಬರೋಬ್ಬರಿ 251 ಮೀಟರ್ ಎತ್ತರದ ಪ್ರತಿಮೆ ನಿರ್ಮಿಸುವ ಘೋಷಣೆ ಮಾಡಿದರು. ಪ್ರತಿಮೆ ನಿರ್ಮಿಸುವ ಟ್ರೆಂಡ್ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ.
ಬೆಂಗಳೂರು ನಗರ ನಿರ್ಮಾಣದ ಮೂಲಪುರುಷ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಿಸಲು ಕರ್ನಾಟಕ ಸರ್ಕಾರ ಶಿಲಾನ್ಯಾಸ ನೆರವೇರಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಬಾಗದಲ್ಲಿ 108 ಅಡಿ ಎತ್ತದರ ಕಂಚಿನ ಪ್ರತಿಮೆ ನಿರ್ಮಿಸಲು ನಿರ್ಣಯಿಸಿದೆ. ಕೋವಿಡ್ -19 ನಿಯಂತ್ರಣ ತಪ್ಪಿರುವ ಸಮಯದಲ್ಲಿ ಕೊರೊನಾ ಕಟ್ಟಿಹಾಕುವ ಕುರಿತು ಗಮನ ಹರಿಸುವ ಬದಲು ಪ್ರತಿಮೆ ನಿರ್ಮಿಸುವ ಅವಶ‍್ಯವಾದರೂ ಏನಿದೆ ಎಂಬುದೇ ಎಲ್ಲರೂ ಕಾಡುತ್ತಿರುವ ಯಕ್ಷ ಪ್ರಶ‍್ನೆ.
ಕೆಂಪೇಗೌಡರು ಅಡಿಗಲ್ಲು ಹಾಕಿದ ಬೆಂಗಳೂರು ನಗರ ಇಂದು ವಿಶ‍್ವದ ಡೈನಮಿಕ್ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ನಗರದ ಜನಸಂಖ್ಯೆ 13 ದಶಲಕ್ಷಕ್ಕೂ ಅಧಿಕವಾಗಿದೆ. ಬೇರೆ ಬೇರೆ ರಾಜ್ಯಗಳಿಂದ, ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ವಲಸಿಗರು ಬರುತ್ತಿರುವುದು ಅಧಿಕವಾಗುತ್ತಿದೆ. ನಗರದ ಮೂಲ ಸೌಕರ್ಯದ ಬಗ್ಗೆ ಗಮನ ಅರಿಸಬೇಕಾದ ಸರ್ಕಾರ ಪ್ರತಿಮೆಗಳಿಗೆ ದುಂದು ವೆಚ್ಚ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.ಮಾದರಿ ನಗರ ನಿರ್ಮಾಣದ ಕನಸು ಕಂಡು, ಬೆಂಗಳೂರು ನಗರದ ನಿರ್ಮಾಣದ ನಂತರ ತಮ್ಮ ಕುಟುಂಬಕ್ಕೆ ಅಥವಾ ತಮ್ಮ ಪಂಗಡಕ್ಕೆ ಅಥವಾ ತಮ್ಮ ಭಾಷೆಗೆ ಅಥವಾ ತಮ್ಮ ಧರ್ಮಕ್ಕೆ ಅಥವಾ ತಮ್ಮ ಜಾತಿಗೆ ಸೀಮಿತರಾಗದೇ ಮುಂದಾಲೋಚನೆಯೊಂದಿಗೆ ನೆರೆ ಊರುಗಳಿಂದ, ನೆರೆ ರಾಜ್ಯಗಳಿಂದ ವೃತ್ತಿಬಾಂಧವರನ್ನು ಕರೆಸಿ ಅವರವರ ವೃತ್ತಿಗನುಸಾರವಾಗಿ ಪೇಟೆಗಳನ್ನು ನಾಢಪ್ರಭುಗಳು ಬೆಂಗಳೂರಿನಲ್ಲಿ ನಿರ್ಮಿಸಿದರು. ಈಗೇ ಆರಂಭವಾದ ಬೆಂಗಳೂರು ನಗರವು ಕ್ಷಿಪ್ರದಲ್ಲಿಯೇ ಒಂದು ದೊಡ್ಡ ವ್ಯಾಪಾರಕೇಂದ್ರವಾಯಿತು ಎಂಬುದರಲ್ಲಿ ಎರಡು ಮಾತಿಲ್ಲ. ಅಂದು ಕೆಂಪೇಗೌಡರು ಹಾಕಿದ ತಳಹದಿ ಇಂದು ವಿಶ್ವದ ಅತ್ಯುತ್ತಮ ವಾಣಿಜ್ಯ ನಗರಿಯಾಗಿ ಬೆಂಗಳೂರು ತಲೆ ಎತ್ತಿ ನಿಂತಿದೆ.ದೂರಾಲೋಚನೆ ಹೊಂದಿದ್ದ ಗೌಡರು, ಜನತೆಯ ದಾಹ ತೀರಿಸಲು ಹಲವಾರು ಕೆರೆಗಳನ್ನೂ ನಿರ್ಮಿಸಿದ್ದರು. ಅವುಗಳಲ್ಲಿಂದು ಬಹುತೇಕವು ನಮ್ಮ ರಾಜಕಾರಣಿಗಳ, ಉದ್ಯಮಿಗಳ ಸ್ವಾರ್ಥದ ಆಕ್ರಮಣಕ್ಕೆ ಗುರಿಯಾಗಿ ಕಣ್ಮರೆಯಾಗಿವೆ.
ದೂರದೃಷ್ಠಿಯಿಂದ ನಿರ್ಮಿಸಿದ ನಗರವನ್ನು ನಾವಿಂದು ಯಾವ ಸ್ಥಿತಿಗೆ ತಂದಿದ್ದೇವೆ ಎಂಬುದನ್ನು ನಾವು ಹಾಗೂ ನಮ್ಮನ್ನಾಳುವ ನಾಯಕರು ಒಮ್ಮೆ ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ. ಹಿರಿಯ ಕೆಂಪೇಗೌಡರು ಅತ್ಯಂತ ಮುತುವರ್ಜಿಯಿಂದ ಕಟ್ಟಿದ ನಗರವನ್ನು ಹಾಳುಗೆಡವಿದ್ದೇವೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ. ಧರ್ಮಾಂಬುದಿ ಕೆರೆ ಇದ್ದ ಜಾಗದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣವಿದೆ. ಸಂಪಂಗಿ ಕೆರೆಯಿದ್ದ ಜಾಗದಲ್ಲಿ ಕಂಠೀರವ ಕ್ರೀಡಾಂಗಣ ತಲೆಯೆತ್ತಿದೆ. ಸಾವಿರಾರು ಕೆರೆಗಳು ರಿಯಲ್ ಎಸ್ಟೆಟ್ ಮಾಫಿಯಾಗೆ ಕಣ್ಮರೆಯಾಗಿ ಬೆರಳೆಣಿಕೆಯ ಕೆರೆಗಳಿವೆ, ಆ ಕೆರೆಗಳು ಸಹ ಕಲುಷಿತ ನೀರಿನಿಂದ ಕೂಡಿದೆ. ಬೆಂಗಳೂರಿನ ನಗರದ ಜೀವನದಿಯಾಗಿದ್ದ ವೃಷಾಭಾವತಿ ನದಿ ಕೆಂಗೇರಿ ಮೋರಿಯಾಗಿದೆ. ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ನಗರದಲ್ಲಿ ಬೃಹತ್ ಕಾಂಕ್ರಿಟ್ ಕಟ್ಟಡಗಳು ಕಾಣುತ್ತಿವೆ.
ನಮ್ಮನ್ನಾಳುವ ನಾಯಕರಿಗೆ ಕೆಂಪೇಗೌಡರ ಬಗ್ಗೆ ಪ್ರೀತಿ, ಗೌರವಿದ್ದಿದ್ದರೆ ಅವರ ಪ್ರತಿಮೆ ನಿರ್ಮಿಸುತ್ತಿರಲಿಲ್ಲ. ಅವರು ಕನಸು ಕಂಡು ನಿರ್ಮಿಸಿದ ನಗರವನ್ನು ಉತ್ತಮ ರಿತಿಯಲ್ಲಿಡುತ್ತಿದ್ದರು. ಇದೇನಾ ನಾವು ನಾಡಪ್ರಭುಗಳಿಗೆ ನೀಡುವ ಗೌರವ. ಸುಂದರ ನಗರ ನಿರ್ಮಿಸಿದ ಗೌಡರಿಗೆ ಅವರ ಪ್ರತಿಮೆ ನಿರ್ಮಿಸಿಕೊಳ‍್ಳಲು ಆಗುತ್ತಿರಲಿಲ್ಲವೇ ? ಅದು ಅವರಿಗೆ ಅವಶ‍್ಯ ಎನಿಸಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಲಕ್ಷಾಂತರ ಜನರು ವಾಸಿಸುವ ಮಾದರಿ ನಗರ ನಿರ್ಮಿಸುವುದೇ ಅವರ ಉದ್ದೇಶವಾಗಿತ್ತು. ಅದನ್ನು ಸಾಧಿಸಿ ತೋರಿಸಿದರು.
ಉದ್ಯಾನ ನಗರಿ ಎಂದು ಗುರಿತಿಸಿಕೊಂಡಿರುವ ಬೆಂಗಳೂರನ್ನು ನೂರಾರು ಸಮಸ್ಯೆಗಳು ಕಿತ್ತು ತಿನ್ನುತ್ತಿವೆ. ಗುಂಡಿಬಿದ್ದ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ, ಮಳೆಗಾಲದಲ್ಲಂತೂ ರಸ್ತೆಗಳು ನೀರು ಕಾಲುವೆಗಳನ್ನು ಕಣ್ಣಿಗೆ ಕಟ್ಟಿಕೊಡುತ್ತವೆ. ಇನ್ನೇನು ಮಳೆಗಾಲಕ್ಕೆ ಬೆಂಗಳೂರು ಸಜ್ಜಾಗ ಬೇಕು. ರಾಜಕಾಲೂವೆಗಳಲ್ಲಿ ಊಳು ಎತ್ತುವ ಕಾರ್ಯವಾಗಬೇಕು. ಈ ರೀತಿ ತುರ್ತು ಆಗಬೇಕಾದ ನೂರಾರು ಸಮಸ್ಯೆಗಳನ್ನು ಬಿಟ್ಟು ಪ್ರತಿಮೆ ನಿಲ್ಲಿಸಲು ಹೊರಟಿರುವ ಸರ್ಕಾರವನ್ನು ನಾಡಪ್ರಭು ಕೆಂಪೇಗೌಡರು ಕ್ಷಮಿಸಲಾರರು. ಕೆಂಪೇಗೌಡರ ಮೂರ್ತಿ ನಿರ್ಮಾಣಕ್ಕೆ ಮೀಸಲಿಟ್ಟ 78 ಕೋಟಿ ರೂಪಾಯಿಗಳಲ್ಲಿ ರಸ್ತೆ ನಿರ್ಮಾಣ, ಕೆರೆಗಳ ನಿರ್ಮಾಣ, ವಿದ್ಯಾಸಂಸ್ಥೆಗಳನ್ನೋ, ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನೋ ನಿರ್ಮಿಸಿದ್ದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತಿತ್ತು. ಇದರಿಂದ ಕೆಂಪೇಗೌಡರ ಮಾದರಿ ನಗರದ ಕನಸು ಸ್ವಲ್ಪಮಟ್ಟಿಗಾದರೂ ನೆರವೇರುತ್ತಿತ್ತು. ಇಂತಹ ಮಹತ್ಕಾರ್ಯಗಳಿಂದ ಕೆಂಪೇಗೌಡರ ಆತ್ಮಕ್ಕೂ ಶಾಂತಿ ದೊರೆಯುತ್ತದೆ ಹೊರತು ಬೃಹತ್ ಪ್ರತಿಮೆಗಳು ನಿರ್ಮಿಸುವುದರಿಂದಲ್ಲ ಎಂಬುದೇ ಬಹುತೇಕ ಕನ್ನಡಿಗರ ಉದ್ದೇಶ.
-ರಾಘವೇಂದ್ರ ಪೂಜಾರಿ ಹೆಚ್. ಎಸ್
ಕೊನೆಯ ಮಾತು: ನಮ್ಮನ್ನು ಆಳುವ ರಾಜಕೀಯ ನಾಯಕರಿಗೆ ದದೂರದೃಷ್ಟಿಯಿರಬೇಕೆ ಹೊರತು, ಒಂದು ಸಮುದಾಯವನ್ನು ಒಲೈಸುವ ಮನಸ್ಸಿರಬಾರದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
