ಬೆಂಗಳೂರು ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತ ವಿಮಾ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿರುವ ಸರ್ಕಾರ, ಆದೇಶ ಪ್ರಕಟಿಸಿದೆ.ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ 2 ಲಕ್ಷ ರೂ. ಜೀವ ವಿಮಾ ಸೌಲಭ್ಯ ಹಾಗೂ 2 ಲಕ್ಷರೂ ಅಪಘಾತ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದೆ.ಬೆಂಗಳೂರು ಮಹಾ ನಗರ ಒಳಗೊಂಡಂತೆ ರಾಜ್ಯದೆಲ್ಲೆಡೆ ಪ್ಲಾಟ್ ಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಂಖ್ಯೆಗೆ ಸಂಬಂಧಿಸಿದಂತೆ ಈ ವರೆಗೆ ಯಾವುದೇ ಸಮೀಕ್ಷೆ ನಡೆದಿಲ್ಲ. ಆದರೆ, ನೀತಿ ಆಯೋಗದ 2022ರ ವರದಿ ಅನ್ವಯ ಸ್ವಿಗ್ಗಿ, ಜೊಮಾಟೋ ಮುಂತಾದ ುಡ್ ಡೆಲಿವರಿ ಮಾಡುವ ಹಾಗೂ ಅಮೆಜಾನ್, ಪ್ಲಿಪ್‌ಕಾರ್ಟ್, ಬಿಗ್ ಬ್ಯಾಸ್ಕೆಟ್ ಇವೇ ಮೊದಲಾದ ಸಂಸ್ಥೆಗಳಲ್ಲಿ ಪೂರ್ಣಕಾಲಿಕ, ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರ ಸಂಖ್ಯೆ 2.30 ಲಕ್ಷದಷ್ಟಿದೆ. ಈ ಕಾರ್ಮಿಕರು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ್ದು, ಸಾಮಾಜಿಕ ಭದ್ರತಾ ಸೌಲಭ್ಯದಿಂದ ವಂಚಿತರಾಗಿದ್ದನ್ನು ಮನಗಂಡು ಈ ಯೋಜನೆ ಜಾರಿ ಮಾಡಲಾಗುತ್ತಿದೆ, ಮಾರ್ಗಸೂಚಿ ಪ್ರಕಟಿಸಲಾಗಿದೆ.ಇದು ಜೀವ ವಿಮೆ, ಅಪಘಾತ ವಿಮೆ ಎರಡೂ ಸೌಲಭ್ಯ ಒಳಗೊಂಡಿರುತ್ತದೆ. ಕರ್ನಾಟಕದ ಆದ್ಯಂತ ಎಲ್ಲ ಪ್ರದೇಶಗಳಿಗೂ ಅನ್ವಯವಾಗಲಿದೆ.ಈ ಯೋಜನೆ ವ್ಯಾಪ್ತಿಗೆ ಒಳಪಡುವ ಲಾನುಭವಿ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ಅಂಗವೈಕಲ್ಯ (ಭಾಗಶಃ ಅಥವಾ ಸಂಪೂರ್ಣ) ಹೊಂದಿದರೆ ಲಾನುಭವಿಗೆ ಅಥವಾ ಮರಣ ಸಂಭವಿಸಿದ ವೇಳೆ ಆತನ ಕಾನೂನು ಬದ್ಧ ವಾರಸುದಾರರಿಗೆ ವಿಮಾ ಮೊತ್ತ ಪಾವತಿಸಲಾಗುತ್ತದೆ. ಅಪಘಾತದಿಂದ ಆಸ್ಪತ್ರೆ ಸೇರಿದರೆ 1 ಲಕ್ಷ ರೂ. ವರೆಗೆ ಚಿಕಿತ್ಸಾ ವೆಚ್ಚ ಮರುಪಾವತಿ ಮಾಡಲಾಗುತ್ತದೆ.ಇನ್ನು ವಿಮಾದಾರ ವ್ಯಕ್ತಿ ಮರಣದ (ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯ, ಇತರ ಘಟನೆ) ನಂತರ ವಾರಸುದಾರರಿಗೆ ವಿಮಾ ಮೊತ್ತವನ್ನು ಪಾವತಿಸಲು ಜೀವ ವಿಮೆ ಯೋಜನೆ ಸೌಲಭ್ಯ ನೀಡಲಾಗುತ್ತಿದೆ.ಸೇವಾಸಿಂಧು ಪೋರ್ಟಲ್ ಮೂಲಕ ಗಿಗ್ ಕಾರ್ಮಿಕ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆೆ. ಬಳಿಕ ಗುರುತಿನ ಚೀಟಿ ನೀಡಲಾಗುತ್ತದೆ. 18ರಿಂದ 60 ವರ್ಷದ ಗಿಗ್ ವರ್ಕ್ ಈ ಯೋಜನೆ ವ್ಯಾಪ್ತಿಗೆ ಬರಲಿದ್ದಾರೆ. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಎಸ್‌ಐ, ಇಪಿಎ್ ಸೌಲಭ್ಯ ಹೊಂದಿರಬಾರದು. ಅರ್ಜಿ ಸಲ್ಲಿಸುವಾಗ ಉದ್ಯೋಗದಾತರಿಂದ ಪಡೆದ ಉದ್ಯೋಗ ಪ್ರಮಾಣ ಪತ್ರ ಅಥವಾ ಗುರುತಿನ ಚೀಟಿ, ಆಧಾರ್ ಸಂಖ್,ಎ ಇ- ಶ್ರಮ್ ಗುರುತಿನ ಚೀಟಿ ಸಂಖ್ಯೆ, ಪಾಸ್‌ಪೋರ್ಟ್ ಅಳತೆ ಭಾವಚಿತ್ರ, ವಿಳಾಸ ಪುರಾವೆಗಾಗಿ ಒಂದು ದಾಖಲೆ ನೀಡಬೇಕಾಗುತ್ತದೆ.ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿ ಇರದೇ ಇದ್ದಾಗಲೂ ಸಂಭವಿಸುವ ಅಪಘಾತ ಹೊಂದಿದಲ್ಲಿ ಅನ್ವಯವಾಗಲಿದೆ. ಆದರೆ, ಯೋಜನೆ ಸೌಲಭ್ಯ ಪಡೆಯಲು ಮರಣ ಅಥವಾ ಅಪಘಾತ ಸಂದರ್ಭದಲ್ಲಿ ಕಾರ್ಮಿಕರು ಕರ್ನಾಟಕದಲ್ಲಿ ಗಿಗ್ ವೃತ್ತಿಯಲ್ಲಿ ಸಕ್ರಿಯನಾಗಿರಬೇಕಾಗುತ್ತದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × two =
Remember me
