ಬೆಂಗಳೂರು:ಅಸಂಘಟಿತ ವಲಯದಲ್ಲಿರುವ ಆಟೋ, ಲಾರಿ, ಬಸ್ ಚಾಲಕರು ಮತ್ತು ತಾಂತ್ರಿಕ ಸಿಬ್ಬಂದಿ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು ಎಂದು ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ. ‘ನಾನು ಕೂಡ ಚಾಲಕನಾಗಿ ಕೆಲಸ ಮಾಡಿ ಈ ಹಂತಕ್ಕೆ ಬಂದವನು. ಅವರ ಕಷ್ಟ ಏನು ಎನ್ನುವುದು ತಿಳಿದಿದೆ. ಹೀಗಾಗಿ ಮಸೂದೆ ತರಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ ಇಂತಹ ಯೋಜನೆ ಜಾರಿಯಲ್ಲಿಲ್ಲ. ಇದೇ ಮೊದಲ ಬಾರಿಗೆ ಚಾಲಕರು ಹಾಗೂ ಸಾರಿಗೆ ವಲಯದ ತಾಂತ್ರಿಕ ಸಿಬ್ಬಂದಿ ನೆರವಿಗೆ ಸರ್ಕಾರ ನಿಲ್ಲುತ್ತಿದೆ. ಅದಕ್ಕಾಗಿಯೇ ಕಾನೂನು ರೂಪಿಸಲಾಗುತ್ತಿದೆ.
ಪ್ರತಿ ಜಿಲ್ಲೆಯಲ್ಲೂ ಇಎಸ್​ಐ ಆಸ್ಪತ್ರೆ ತೆರೆಯಲು ತೀರ್ವನಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. ಕಾರ್ವಿುಕ ಇಲಾಖೆಯಲ್ಲಿ 633 ಹುದ್ದೆಗಳು ಖಾಲಿ ಇದೆ. 437 ಹುದ್ದೆ ನೇರ ನೇಮಕಾತಿಗೆ ಕೇಳಿದ್ದೇವೆ. ಅನುಮತಿ ಸಿಗುವ ನಿರೀಕ್ಷೆ ಇದೆ ಎಂದರು.
ಕಾರ್ವಿುಕ ಅದಾಲತ್:ಅ.15 ರಿಂದ ಸೆ. 15 ರವರೆಗೆ ಕಾರ್ವಿುಕ ಅದಾಲತ್ ನಡೆಸಲಾಗುವುದು. ಹೊರಗುತ್ತಿಗೆಯಿಂದ ಸಾಕಷ್ಟು ಕಾರ್ವಿುಕರಿಗೆ ಸಮಸ್ಯೆಯಾಗಿದ್ದು, ಯಾವುದೇ ಕೇಸ್ ಕೂಡ ಬಾಕಿ ಇರಬಾರದು ಎನ್ನುವ ಕಾರಣಕ್ಕೆ ಅದಾಲತ್ ನಡೆಸಲು ನಿರ್ಧರಿಸಲಾಗಿದೆ. ಕಾರ್ವಿುಕ ಇಲಾಖೆಗೆ ಸಂಬಂಧಪಟ್ಟಂತೆ ವಿಜಿಲೆನ್ಸ್ ಸೆಲ್ ಮಾಡಲಾಗುತ್ತದೆ. ವಲಸೆ ಕಾರ್ವಿುಕರಿಗೆ ಪ್ರಮುಖ ಜಿಲ್ಲೆಯಲ್ಲಿ ವಸತಿ ಸಮುಚ್ಚಯ ಕಟ್ಟಲು ತೀರ್ವನಿಸಲಾಗಿದೆ. ಅಸಂಘಟಿತ ವಲಯಕ್ಕೆ ಮಾಧ್ಯಮ ಸೇರಿದಂತೆ ಹಲವು ವರ್ಗಗಳನ್ನು ಸೇರಿಸುವಂತೆ ಸಿಎಂಗೆ ಮನವಿ ಮಾಡಲಾಗುವುದು ಎಂದರು.
ಹೆಸರು ಬದಲಾವಣೆ ಸಿಎಂ ತೀರ್ಮಾನ:ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಎಲ್ಲೋ ಚರ್ಚೆ ಆಗುತ್ತೆ ಅಂತ ನಾನು ಮಾತಾಡಲ್ಲ. ಸಿಎಂ ತೆಗೆದುಕೊಳ್ಳುವ ತೀರ್ವನಕ್ಕೆ ನಾವು ಬದ್ಧವಾಗಿರುತ್ತೇವೆ ಎಂದರು ಸಚಿವ ಹೆಬ್ಬಾರ.
ಶೀಘ್ರ ಸಚಿವ ಸ್ಥಾನ:ಮಿತ್ರಮಂಡಳಿಯಲ್ಲಿ ಕೆಲವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಅತಿ ಶೀಘ್ರದಲ್ಲಿ ಸಿಎಂ ಒಳ್ಳೆಯ ತಿರ್ವನ ಕೈಗೊಳ್ಳಲಿದ್ದಾರೆ ಎಂದ ಹೆಬ್ಬಾರ, ರಮೇಶ್ ಜಾರಕಿಹೊಳಿಗೆ ತನಿಖೆ ಮುಗಿದ ಮೇಲೆ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
22 ಲಕ್ಷ ಫುಡ್ ಕಿಟ್:ಕೋವಿಡ್ ಸಂದರ್ಭದಲ್ಲಿ ಕಾರ್ವಿುಕರಿಗೆ 22 ಲಕ್ಷ ಫುಡ್ ಕಿಟ್ ನೀಡಲಾಗಿದೆ. ಕಾರ್ವಿುಕ ಇಲಾಖೆಯ ಫುಡ್ ಕಿಟ್​ಗಳನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಕಾರ್ವಿುಕರು ಬಿಜೆಪಿ ಕಾರ್ಯಕರ್ತ ಆಗಿರಬಾರದು ಎಂಬ ನಿಯಮವೇನಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.
ವಿದ್ಯಾಭ್ಯಾಸಕ್ಕೆ ಅಧಿಕ ಅನುದಾನ:ಕಾರ್ವಿುಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಅನುದಾನವನ್ನು ದುಪ್ಪಟ್ಟು ಮಾಡಲು ತೀರ್ಮಾನ ಮಾಡಲಾಗಿದೆ. ಕೆಎಎಸ್, ಐಎಎಸ್ ಓದುವ ಕಾರ್ವಿುಕ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಸಚಿವ ಹೆಬ್ಬಾರ್ ಹೇಳಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + six =
Remember me
