| ಗಿರೀಶ್ ಗರಗ ಬೆಂಗಳೂರು
ವಾಹನ ಸಾಲ ಸೇರಿ ಇನ್ನಿತರ ತಾಪತ್ರಯದಲ್ಲಿರುವ ವಾಹನ ಮಾಲೀಕರು ಇದೀಗ ವಿಮೆ ಪಾವತಿ ಹೊರೆಯನ್ನೂ ಹೊರುವಂತಾಗಿದೆ.
ಕರೊನಾ ಲಾಕ್​ಡೌನ್​ನಿಂದಾಗಿ ಸಾರಿಗೆ ಉದ್ಯಮಕ್ಕೆ ಎರಡೂವರೆ ತಿಂಗಳಿನಿಂದ ಚಟುವಟಿಕೆಯಿಲ್ಲ. ಅದರಲ್ಲೂ ಖಾಸಗಿ ಬಸ್, ಟ್ಯಾಕ್ಸಿಗಳಿಗೆ ಆದಾಯವೇ ಇಲ್ಲದಂತಾಗಿದೆ. ರಿಸರ್ವ್ ಬ್ಯಾಂಕ್​ನ ಸೂಚನೆ ಹಿನ್ನೆಲೆಯಲ್ಲಿ ಬ್ಯಾಂಕ್​ಗಳು ಸಾಲ ವಸೂಲಿಯನ್ನು ಆಗಸ್ಟ್ ವರೆಗೆ ಮುಂದೂಡಿವೆ. ಆದರೆ, ಈ ಸಾಲ ಮುಂದೂಡಿಕೆಗೆ ಬಡ್ಡಿ ಹಾಕುತ್ತಿರುವುದು ನಿಂತಿಲ್ಲ. ಅದರ ನಡುವೆ ಕೆಲಸವೇ ಇಲ್ಲದೆ ಖಾಲಿ ಇರುವ ವಾಹನಗಳಿಗೂ ವಿಮೆ ಮಾಡಿಸಬೇಕಾದ ಅನಿವಾರ್ಯತೆ ಎದು ರಾಗಿದೆ. ಹೀಗಾಗಿ ವಿಮೆ ಮಾಡಿಸಲು ಮತ್ತೆ ಸಾಲದ ಮೊರೆ ಹೋಗಬೇಕಾಗಿದೆ.
ಮೇ 21ರವರೆಗೆ ರಿಲ್ಯಾಕ್ಸ್:ಲಾಕ್​ಡೌನ್ ಅವಧಿಯಲ್ಲಿ ವಾಹನಗಳು ಸಂಚರಿಸದ ಕಾರಣ ಥರ್ಡ್ ಪಾರ್ಟಿ ವಿಮೆ ಅವಧಿ ಮುಗಿದರೂ ಅದು ಮೇ 21ರ ವರೆಗೆ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಕೇಂದ್ರ ನೀಡಿದ್ದ ಗಡುವು ಮುಗಿದಿದೆ. ಹೀಗಾಗಿ ಮಾ.24ರಿಂದ ಈವರೆಗಿನ ಅವಧಿಯಲ್ಲಿ ವಿಮಾ ಅವಧಿ ಮುಗಿದ ವಾಹನಗಳು ಹೊಸದಾಗಿ ವಿಮೆ ಮಾಡಿಸಬೇಕಿದೆ.ಇದನ್ನೂ ಓದಿ:ವರ್ಕೌಟ್ ಚಾಲೆಂಜ್‌ನಲ್ಲಿ ರೂಪದರ್ಶಿಗೆ ಸೋತ ಒಲಿಂಪಿಯನ್!
ಲ್ಯಾಪ್ಸ್ ಆದ್ರೆ ಹೆಚ್ಚು ಮೊತ್ತ:ಒಂದು ವೇಳೆ ವಾಹನಕ್ಕೆ ವಿಮೆ ಮಾಡಿಸದಿದ್ದರೆ, ಅಪಘಾತ ಅಥವಾ ವಾಹನಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ತಗಲುವ ವೆಚ್ಚವನ್ನು ವಾಹನ ಮಾಲೀಕರೇ ಭರಿಸಬೇಕಾಗುತ್ತದೆ. ಜತೆಗೆ ವಿಮಾ ಅವಧಿ ಮುಗಿದ ನಂತರ ವಿಮೆ ಮಾಡಿಸಬೇಕೆಂದರೆ ಎಲ್ಲ ಪ್ರಕ್ರಿಯೆ ಹೊಸದಾಗಿ ಮಾಡಿಸಬೇಕು ಹಾಗೂ ಹೆಚ್ಚುವರಿ ಮೊತ್ತ ಭರಿಸಬೇಕಾಗುತ್ತದೆ.
4.60 ಲಕ್ಷ ವಾಹನ:ರಾಜ್ಯದಲ್ಲಿ 4.60 ಲಕ್ಷಕ್ಕೂ ಹೆಚ್ಚಿನ ಕ್ಯಾಬ್, ಬಸ್​ಗಳಿವೆ. ಅವುಗಳಲ್ಲಿ ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ವಿಮೆ ಮಾಡಿಸಿರುವ ವಾಹನಗಳೇ ಹೆಚ್ಚಿವೆ. ಹೀಗಾಗಿ ಸದ್ಯ ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚಿನ ವಾಹನಗಳ ವಿಮಾ ಅವಧಿ ಮುಗಿದಿವೆ.ಇದನ್ನೂ ಓದಿ:ಗುಜರಾತ್​ನಲ್ಲಿ ರೆಸಾರ್ಟ್​ ಪಾಲಿಟಿಕ್ಸ್ ಶುರು: ಗರಿಗೆದರಿದೆ ರಾಜ್ಯಸಭಾ ಚುನಾವಣಾ ರಾಜಕೀಯ
ಹೆಚ್ಚುವರಿ ಅವಧಿಗೆ ಆಗ್ರಹ:ಲಾಕ್​ಡೌನ್ ಸಡಿಲಿಕೆ ನಂತರವೂ ಶೇ.80 ವಾಹನಗಳಿಗೆ ಆದಾಯವಿಲ್ಲದಂತಾಗಿದೆ. ಜತೆಗೆ ಲಾಕ್​ಡೌನ್ ಅವಧಿಯಲ್ಲಿ ವಾಹನಗಳು ನಿಂತಲ್ಲೇ ನಿಂತಿದ್ದವು. ಹೀಗಾಗಿ ವಿಮಾ ಅವಧಿ ಕನಿಷ್ಠ 2 ತಿಂಗಳ ಕಾಲ ಮುಂದುವರಿಸುವಂತೆ ಆಗ್ರಹಿಸಲಾಗುತ್ತಿದೆ.
ರಾಜ್ಯದಲ್ಲಿ ಬಸ್, ಕ್ಯಾಬ್ ಸೇರಿ ಇನ್ನಿತರ ವಾಹನಗಳಿಂದ ವಿಮಾ ಸಂಸ್ಥೆಗಳಿಗೆ ವಾರ್ಷಿಕ 1 ಸಾವಿರಕ್ಕೂ ಹೆಚ್ಚಿನ ಆದಾಯ ಬರುತ್ತದೆ. ಕ್ಯಾಬ್​ಗೆ ಥರ್ಡ್ ಪಾರ್ಟಿ ವಿಮಾ ಮೊತ್ತ 20 ಸಾವಿರ ರೂ.ಗೂ ಹೆಚ್ಚಿರುತ್ತದೆ. ಅದೇ ಐಷಾರಾಮಿ ವಾಹನಕ್ಕೆ 1 ಲಕ್ಷ ರೂ.ಗೂ ಹೆಚ್ಚಿದೆ. ಹಾಗೆಯೇ, ಬಸ್​ಗಳ ವಿಮಾ ಮೊತ್ತವೂ ದುಬಾರಿಯಾಗಿದೆ.
VIDEO: ಕರೊನಾದಿಂದ ಗುಣಮುಖರಾಗಿ ರೋಡ್​ ಷೋ: ಇಮ್ರಾನ್​ ಪಾಷಾ ಅರೆಸ್ಟ್​- ಜಮೀರ್​ ಗರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
