ಬೆಂಗಳೂರು:ಕರ್ನಾಟಕದಲ್ಲಿ ವಹಿವಾಟು ನಡೆಸಿರುವ ಅಮೆರಿಕ ಉದ್ಯಮಿಗಳು ಕಚೇರಿಗಳನ್ನು ಹೊಂದಿದ್ದು, ಚಾಲ್ತಿ ಉದ್ಯಮ-ವಹಿವಾಟು, ನೆಲೆ ವಿಸ್ತರಿಸಲು ಒಲವು ವ್ಯಕ್ತಪಡಿಸಿದ್ದಾರೆ. ಸರ್ಕಾರವು ಅಗತ್ಯವಿರುವ ಕೌಶಲ್ಯಪೂರ್ಣ ಮಾನವಸಂಪನ್ಮೂಲ ಸೇರಿ ನೆರವು ನೀಡುವ ಭರವಸೆಯಿತ್ತಿದೆ.
ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಘಟನೆ ಮತ್ತು ಯುಎಸ್- ಇಂಡಿಯಾ ವಾಣಿಜ್ಯೋದ್ಯಮ ಸಂಘ ಜಂಟಿಯಾಗಿ ಅಮೆರಿಕದ ಆಸ್ಟಿನ್‌ನಲ್ಲಿ ಶುಕ್ರವಾರ ದುಂಡು ಮೇಜಿನ ಸಭೆ ಏರ್ಪಡಿಸಿದ್ದವು.
ಈ ಸಭೆಯಲ್ಲಿ ಪಾಲ್ಗೊಂಡ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಜತೆಗೆ ಅಮೆರಿಕ ಉದ್ಯಮಿಗಳು ಮಾತುಕತೆ ವೇಳೆ, ಕರ್ನಾಟಕದಲ್ಲಿ ವಹಿವಾಟು ಹೆಚ್ಚಿಸಿಕೊಳ್ಳಲು ಉತ್ಸುಕತೆಯಿಂದಿದ್ದೇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಕರ್ನಾಟಕ ಬೆಳವಣಿಗೆಯಲ್ಲಿ ಅಮೆರಿಕ ಕಂಪನಿಗಳು ಮಹತ್ವಪಾತ್ರವಹಿಸಿಕೊಂಡು ಬಂದಿವೆ. ಪರಸ್ಪರ ಮಾರುಕಟ್ಟೆ ಆವಿಷ್ಕಾರವಾಗುತ್ತಿದ್ದು, ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸರ್ಕಾರ ಬಯಸಿದೆ ಎಂದು ತಿಳಿಸಿದ ಎಂ.ಬಿ.ಪಾಟೀಲ, ಸರ್ಕಾರ ರೂಪಿಸುತ್ತಿರುವ ವಿನೂತನ ಕೈಗಾರಿಕಾ ಉಪಕ್ರಮಗಳನ್ನು ಮನವರಿಕೆ ಮಾಡಿಕೊಟ್ಟರು.
ಬೆಂಗಳೂರಿನ ಕಚೇರಿ ಹೊಂದಿರುವ ಗ್ಲೋಬಲ್ ೌಂಡ್ರೀಸ್ ಕಂಪನಿಯು 2025ರ ವೇಳೆಗೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇ.25ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ. ಇದಕ್ಕೆ ಪೂರಕವಾಗಿ ಸುಸಜ್ಜಿತ ಮಾನವ ಸಂಪನ್ಮೂಲ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಜಾಗತಿಕವಾಗಿ ಗ್ಲೋಬಲ್ ಫೌಂಡ್ರೀಸ್ ಸಾಧನೆ ಮಾಡಿದ್ದು, 30 ಬಿಲಿಯನ್ ಡಾಲ್ ಮೌಲ್ಯ ಹೊಂದಿದೆ. ರಾಜ್ಯದಲ್ಲಿ ವಹಿವಾಟು ನೆಲೆ ವಿಸ್ತರಿಸಿಕೊಳ್ಳಲು ಬಯಸಿದ್ದು, ಅಗತ್ಯ ನೆರವು ನೀಡಲಾಗುವುದು ಎಂ.ಬಿ.ಪಾಟೀಲ ಭರವಸೆ ನೀಡಿದ್ದಾರೆ.
ರಕ್ಷಣೆ ಮತ್ತು ವೈಮಾಂತರಿಕ್ಷ ವಲಯಗಳಲ್ಲಿ ಛಾಪು ಮೂಡಿಸಲು ಕಂಪನಿ ಮುಂದಾಗಿದ್ದು, ಇದಕ್ಕೆ ಅಗತ್ಯವಾದ ವ್ಯಾಪಾರ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲಿದೆ. ಇದರಿಂದಾಗಿ ರಾಜ್ಯದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಎಂ.ಬಿ.ಪಾಟೀಲ ಜತೆಗೆ ಮಾತುಕತೆಯಲ್ಲಿ ಕಂಪನಿಯ ಪರವಾಗಿ ಸಿಐಒ ಮೈಕ್ ಕ್ಯಾಡಿಗಾನ್, ಭಾರತದ ವ್ಯವಹಾರಗಳ ಮುಖ್ಯಸ್ಥ ಜಿತೇಂದ್ರ ಛಡ್ಡಾ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 4 =
Remember me
