ಬೆಂಗಳೂರು:ಅವಳು ಗಂಡನನ್ನು ಬಿಟ್ಟಿದ್ದಳು, ಇವನು ಅವಳಿಗಾಗಿ ಹೆಂಡತಿಯನ್ನೇ ಬಿಟ್ಟ. ಮಾತ್ರವಲ್ಲ, ಆಕೆಯೊಂದಿಗೆ ಸುಖಜೀವನ ನಡೆಸುವ ಉದ್ದೇಶದೊಂದಿಗೆ ಎಟಿಎಂಗೆ ಹಾಕಬೇಕಿದ್ದ 64 ಲಕ್ಷ ರೂಪಾಯಿಯನ್ನೂ ಕದ್ದುಕೊಂಡು ಪರಾರಿಯಾಗಿದ್ದಾನೆ. ಹೀಗೆ ಪರಾರಿಯಾಗಿರುವ ಖತರ್ನಾಕ್​ ಪ್ರೇಮಿಗಳ ಪತ್ತೆಗಾಗಿ ಈಗ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಇದೀಗ ಮತ್ತೊಂದು ವಿಷಯ ಹೊರಬಿದ್ದಿದೆ.
ಹೌದು.. ಕೆಲವು ದಿನಗಳ ಹಿಂದೆ ಎಟಿಎಂಗೆ ಹಾಕಬೇಕಿದ್ದ 64 ಲಕ್ಷ ರೂಪಾಯಿ ಕಳವು ಪ್ರಕರಣದ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗಗೊಂಡಿದೆ. ಆರೋಪಿ ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದು, ಆಕೆ ಬೇರಾರೂ ಅಲ್ಲ.. ಆರೋಪಿಯ ಅತ್ತೆಯ ಮಗಳು ಎಂಬ ವಿಷಯ ಬೆಳಕಿಗೆ ಬಂದಿದೆ. ಅತ್ತೆಯ ಮಗಳಿಗೆ ಮದುವೆಯಾಗಿದ್ದರೂ ಅವಳು ಗಂಡನನ್ನು ಬಿಟ್ಟಿದ್ದಳು. ಇವನು ಅವಳೊಂದಿಗೆ ಜೀವನ ನಡೆಸುವ ಸಲುವಾಗಿ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಇಲ್ಲ ಅಂದ್ರೆ ಕೈ ಕೊಯ್ತೀನಿ..; ಬೆತ್ತಲೆ ಫೋಟೋಗಾಗಿ 17 ವರ್ಷದ ಹುಡುಗಿಗೆ ಬ್ಲ್ಯಾಕ್​ಮೇಲ್​ ಮಾಡಿದ…
ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆ ಪಡೆದಿರುವ ಸೆಕ್ಯುರ್ ಆ್ಯಂಡ್ ವ್ಯಾಲ್ಯೂ ಏಜೆನ್ಸಿಯ ವಾಹನ ಚಾಲಕ ಯೋಗೇಶ್, ಫೆ. 2ರಂದು ನವರಂಗ ಹತ್ತಿರದ ಆಕ್ಸಿಸ್ ಬ್ಯಾಂಕ್‌ ಎಟಿಎಂಗೆ ತುಂಬುವ ಸಂದರ್ಭದಲ್ಲಿ ವಾಹನದಲ್ಲಿದ್ದ 64 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾನೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಯೋಗೇಶ್, ದೊಡ್ಡಬಿದರಕಲ್ಲುನಲ್ಲಿ ಪತ್ನಿ ಮತ್ತು ಮಕ್ಕಳ ಜತೆ ನೆಲೆಸಿದ್ದ. ಮನೆ ಸಮೀಪದಲ್ಲೇ ನೆಲೆಸಿದ್ದ ತನ್ನ ಅತ್ತೆ ಮಗಳಾಗಿರುವ ವಿಚ್ಛೇದಿತ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಆಕೆಯೊಂದಿಗೆ ಬದುಕು ಕಟ್ಟಿಕೊಳ್ಳುವ ದುರಾಸೆಗೆ ಬಿದ್ದ ಈತ ಫೆ.2ರ ಸಂಜೆ ಅವಳನ್ನು ರಾಜಾಜಿನಗರಕ್ಕೆ ಕರೆಸಿಕೊಂಡಿದ್ದ.
ಹಣ ಕದ್ದ ಬಳಿಕ ಆಟೋ ಹತ್ತಿ ಮಾರ್ಗ ಮಧ್ಯೆ ಪ್ರೇಯಸಿಯನ್ನು ಕರೆದುಕೊಂಡು ಬೆಂಗಳೂರು ತೊರೆದಿದ್ದಾನೆ. ಇದಕ್ಕಾಗಿ ಆರೋಪಿ ಯೋಗೇಶ್ 7 ಸಿಮ್‌ಗಳನ್ನು ಬಳಸಿದ್ದಾನೆ. ಮೊಬೈಲ್​ಫೋನ್​ನಲ್ಲಿ ಒಂದರ ಮೇಲೆ ಒಂದು ಸಿಮ್‌ ಬದಲಿಸಿ ತಪ್ಪಿಸಿಕೊಂಡಿದ್ದಾನೆ. ಆ ಎಲ್ಲ ಸಿಮ್‌ಗಳ ಕರೆಗಳ ವಿವರ ಸಂಗ್ರಹಿಸಿ ಬಂಧನಕ್ಕೆ ಬೆನ್ನತ್ತಿರುವುದಾಗಿ ಸುಬ್ರಹ್ಮಣ್ಯನಗರ ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಉತ್ತರ ಭಾರತದ ಕಡೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಪತ್ತೆಗೆ ಬಲೆ ಬೀಸಿದ್ದಾರೆ.
ಗರ್ಭಿಣಿ ಹೆಂಡತಿ ಮತ್ತು ಮಗಳನ್ನು ಕೊಂದ ಪಾಪಿ ಗಂಡ! ಮೂರನೇ ಮದುವೆಯಾದರೂ ಮುಗಿಯಲಿಲ್ಲ ಜಗಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − six =
Remember me
