ಬೆಂಗಳೂರು:ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿ. (ಎಚ್​ಎಎಲ್​) ಅಭಿವೃದ್ಧಿಸಿರುವ ಸ್ವದೇಶಿ ತಂತ್ರಜ್ಞಾನ ಆಧಾರಿತ ಇಂಟರ್​ಮಿಡಿಯೆಟ್​ ಜೆಟ್​ ಟ್ರೇನರ್​ (ಐಜೆಟಿ)ಯನ್ನು ಸೋಮವಾರ ಯಶಸ್ವಿಯಾಗಿ ಗಿರಕಿ ಪರೀಕ್ಷೆ (ಸ್ಪಿನ್​ ಫ್ಲೈಟ್ ಟೆಸ್ಟ್​) ಮಾಡಲಾಯಿತು.
ಫೈಟರ್​ ಜೆಟ್​ ಸೇರಿ ಇನ್ನಿತರ ವಿಮಾನಗಳ ಪೈಲಟ್​ಗಳಿಗೆ ತರಬೇತಿ ನೀಡುವ ಸಲುವಾಗಿ ಐಜೆಟಿ ಅಭಿವೃದ್ಧಿ ಪಡಿಸಲಾಗಿದೆ. ಈ ವಿಮಾನವು ಈ ಹಿಂದಿನ ಕಿರಣ್​ ಏರ್​ಕ್ರ್ಟಾ್​ನ ಸ್ಥಾನ ಪಡೆಯಲಿದ್ದು, ಇನ್ನು ಮುಂದೆ ಫೈಟರ್​ ಜೆಟ್​ ಪೈಲಟ್​ಗಳಿಗೆ ಐಜೆಟಿ ಮೂಲಕ ತರಬೇತಿ ನೀಡಲಾಗುತ್ತದೆ. ಸೋಮವಾರ ಬೆಂಗಳೂರಿನಲ್ಲಿ ಎಚ್​ಎಎಲ್​ನ ಪರೀಕ್ಷಾ ಪೈಲಟ್​ಗಳಾದ ನಿವೃತ್ತ ಗ್ರೂಪ್​ ಕ್ಯಾಪ್ಟನ್​ ಎಚ್​.ವಿ. ಥಾಕುರ್​ ಮತ್ತು ನಿವೃತ್ತ ವಿಂಗ್​ ಕಮಾಂಡರ್​ ಪಿ. ಅವಸ್ತಿ ಐಜೆಟಿ ಪರೀಕ್ಷೆ ನಡೆಸಿದರು. ಐಜೆಟಿಯನ್ನು ಈ ಹಿಂದೆಯೇ ಪರೀಕ್ಷೆಗೊಳಪಡಿಸಲಾಗಿತ್ತು.
ಮತ್ತೊಮ್ಮೆ ಗಿರಕಿ ಪರೀಕ್ಷೆ ನಡೆಸಲಾಗಿದೆ. ಗಿರಕಿ ಪರೀೆಯು ವಿಮಾನ ಅತಿಮುಖ್ಯ ಪರೀಕ್ಷೆಯಾಗಿದ್ದು, ಸೋಮವಾರದ ಪರೀಕ್ಷೆಯಲ್ಲಿ ಐಜೆಟಿಯನ್ನು 6 ಸುತ್ತು ಗಿರಕಿ ಹೊಡೆಸಲಾಗಿದೆ.ಅದರ ಜತೆಗೆ ಐಜೆಟಿಗೆ ಯುದ್ಧದಂತಹ ಸಂದರ್ಭದಲ್ಲಿ ಬಾಂಬ್​ಗಳನ್ನು ಹಾಕುವುದು, ವಟಿರ್ಕಲ್​ ಆಗಿ ಹಾರಾಟ ನಡೆಸುವುದು, ಹೆಚ್ಚುವರಿ ಸುರಕ್ಷತಾ ಕ್ರಮಗಳು ಹೀಗೆ ಹಲವು ಹೊಸ ತಂತ್ರಜ್ಞಾನ ಅಳವಡಿಸಿ ಪರೀಕ್ಷೆಗೊಳಪಡಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twenty =
Remember me
