ಬೆಂಗಳೂರು: ಅಬಕಾರಿ ಇಲಾಖೆಯೊಳಗೆ ‘ಲಿಪಿಕ’ ಮತ್ತು ‘ನೇರ ನೇಮಕ’ ಸಂಘರ್ಷ ತಾರಕಕ್ಕೇರಿದ್ದು, ಬಡ್ತಿ ವಿಚಾರದಲ್ಲಿ ದೂರು- ಪ್ರತಿ ದೂರಿನ ಬೆಳವಣಿಗೆ ತೀವ್ರಗೊಂಡಿದೆ. ಜತೆಗೆ ಪ್ರಕರಣ ನ್ಯಾಯಾಲಯ ಅಂಗಣದಲ್ಲೂ ಮುಂದುವರಿದಿದೆ. ಯಾವುದೇ ಹುದ್ದೆಯಲ್ಲಿ ಬಡ್ತಿ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ದೂರುಗಳನ್ನು ನೀಡುವ ಪರಿಪಾಠ ಬೆಳೆದು ಬಂದಿದ್ದು, ಈಗ ಇಲಾಖೆಯ ಆಂತರಿಕ ನೆಮ್ಮದಿಗೆ ಭಂಗ ಬಂದಿದೆ. ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ವಣವಾಗಿದೆ.
1975ರಿಂದ 2004ರವರೆಗೆ ಯಾವುದೇ ನೇರ ನೇಮಕ ನಡೆದಿಲ್ಲ. ಲಿಪಿಕ ವೃಂದದವರೇ ಬಡ್ತಿ ಪಡೆದು ಉನ್ನತ ಸ್ಥಾನಗಳನ್ನು ಅಲಂಕರಿಸುತ್ತ ಬಂದರು. ಜ್ಯೇಷ್ಠತಾ ಪಟ್ಟಿಯಲ್ಲೂ ವ್ಯತ್ಯಾಸಗಳು ಕಾಣಿಸಿತು. ಗುಮಾಸ್ತರಾಗಿ ಕೆಲಸಕ್ಕೆ ಸೇರಿದವರು ಇನ್​ಸ್ಪೆಕ್ಟರ್, ಉಪ ಅಧೀಕ್ಷಕ, ಅಧೀಕ್ಷಕ, ಉಪ ಆಯುಕ್ತ, ಜಂಟಿ ಆಯುಕ್ತವರೆಗೆ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಈ ನಡುವೆ 2004ರಲ್ಲಿ ಕೆಪಿಎಸ್​ಸಿ ಮೂಲಕ 254 ಸಬ್​ಇನ್​ಸ್ಪೆಕ್ಟರ್ ಹುದ್ದೆಯನ್ನು ಪೊಲೀಸ್ ತರಬೇತಿ ಸಹಿತವಾಗಿ ನೇಮಕ ಮಾಡಿಕೊಳ್ಳಲಾಯಿತು. ಇದರಲ್ಲಿ ಪದವೀಧರರು, ಡಾಕ್ಟರೇಟ್ ಪಡೆದವರೂ ಇದ್ದಾರೆ.
ಬಳಿಕ ಇಲಾಖೆಯಲ್ಲಿ ಗೊಂದಲ ಶುರುವಾಯಿತು. ಇನ್​ಸ್ಪೆಕ್ಟರ್​ಗಳಿಗೆ ಬಡ್ತಿ ನೀಡುವ ಸಮಯ ಬಂದಾಗ ಲಿಪಿಕ ಸಿಬ್ಬಂದಿಯಿಂದ ಆಕ್ಷೇಪಣೆ ಶುರುವಾಯಿತು. ನ್ಯಾಯಾಲಯದಲ್ಲೂ ವ್ಯಾಜ್ಯ ಆರಂಭವಾಯಿತು. ಕರ್ನಾಟಕ ಆಡಳಿತ ನ್ಯಾಯಾಧೀಕರಣದಲ್ಲಿ ನಡೆದ ಪ್ರಕರಣದಲ್ಲಿ ಬಡ್ತಿಯನ್ನು ಯಾವ ಪ್ರಮಾಣದಲ್ಲಿ ಲಿಪಿಕ ಮತ್ತು ನೇರ ನೇಮಕದವರಿಗೆ ಹಂಚಬೇಕೆಂಬ ತೀರ್ವನವನ್ನು ಆಯುಕ್ತರು ಮಾಡಲಿ ಎಂದು ತೀರ್ವನಿಸಲಾಯಿತು. 2019ರವರೆಗೂ ನಡೆದ ಪ್ರಕರಣದ ಕೊನೆಯಲ್ಲಿ ಆಯುಕ್ತರು ಸಮಿತಿ ರಚಿಸಿದರು, ಸಮಿತಿ ವರದಿಯನ್ನೂ ನೀಡಿತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆದು ಲಿಪಿಕ ಹುದ್ದೆಗಳವರಿಗೆ ಬಡ್ತಿ ಸೀಮಿತ ಎಂಬುದು ನಿರ್ಧಾರವಾಯಿತು.
2010ರ ಕೆಎಎಸ್ ಬ್ಯಾಚ್​ನ ಆರು ಉಪ ಅಧೀಕ್ಷಕರಿಗೆ 2015ರಲ್ಲಿ ಬಡ್ತಿ ನೀಡಲು ಪ್ರಕ್ರಿಯೆ ನಡೆಸಲಾಯಿತು. 2017ರ ನವೆಂಬರ್​ನಲ್ಲಿ ಇಲಾಖಾ ಪದೋನ್ನತಿ ಸಭೆಯೂ ನಡೆಯಿತು. ಲಿಪಿಕ ವೃಂದದಿಂದ ಹತ್ತಾರು ದೂರುಗಳು ಬಂದ ಕಾರಣ ಮೇಲಧಿಕಾರಿಗಳು ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವಷ್ಟರಲ್ಲಿ ಪವಿತ್ರ ಪ್ರಕರಣದಿಂದ ಒಟ್ಟಾರೆ ಸರ್ಕಾರದ ಎಲ್ಲ ಬಡ್ತಿ ಪ್ರಕ್ರಿಯೆಗೂ ತಡೆಬಿದ್ದಿತ್ತು. ಮತ್ತೆ 2019ರ ಅ.27ರಂದು ಇಲಾಖಾ ಪದೋನ್ನತಿ ಸಭೆ ನಡೆದಿರುವಾಗಲೇ ಮತ್ತೆ ಆಕ್ಷೇಪಣೆ ಎತ್ತಲಾಗಿದೆ. ಬಡ್ತಿಗೆ ಅರ್ಹರಾದವರ ರಹಸ್ಯ ವರದಿ, ವಿಶೇಷ ವರದಿ ಬಗ್ಗೆ ಆಕ್ಷೇಪಣೆಗಳು ಕೇಳಿಬಂದಿವೆ. ಹೆಚ್ಚಿನ ಪ್ರಮಾಣದಲ್ಲಿ ರಹಸ್ಯ ವರದಿ ಇದೆ ಎಂಬ ತಗಾದೆ ನಡುವೆ ವಿಶೇಷ ವರದಿ ತಪ್ಪಲ್ಲ ಎಂದು ಪ್ರತಿವಾದವಿದೆ.
ಬಡ್ತಿಯೇ ಬೇಡ!
ಬಡ್ತಿಯಾದರೆ ಹಾಲಿ ಕಾರ್ಯನಿರ್ವಹಿಸುವ ಸ್ಥಳ ಬಿಟ್ಟು ಬೇರೆಡೆ ಸ್ಥಳ ನಿಯುಕ್ತಿಯಾಗುವ ಕಾರಣ ಬಡ್ತಿ ಇಷ್ಟ ಇಲ್ಲದವರೂ ಬಡ್ತಿ ಪ್ರಕ್ರಿಯೆಗೆ ತಡೆಯೊಡ್ಡುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ವಿಶೇಷ ಸಂಗತಿ ಎಂದರೆ, ಉಪ ಅಧೀಕ್ಷ ವೃಂದದಿಂದ ಅಧೀಕ್ಷರಾಗಲು ಕೆಲವರಿಗೆ ಉತ್ಸಾಹ ಇಲ್ಲ. ಕಾರಣ, ಬಡ್ತಿ ಬಂದರೆ ಸರ್ಕಾರ ನೀಡುವ ವಾಹನ ಸೌಲಭ್ಯ ಬಿಟ್ಟು ಹೋಗಲಿದೆ. ಸ್ವಂತ ವ್ಯವಸ್ಥೆಯಲ್ಲಿ ನಿರ್ದಿಷ್ಟ ಕಾರ್ಯ ಸ್ಥಳಕ್ಕೆ ಓಡಾಡಬೇಕು! ಒಟ್ಟಾರೆ ಅಬಕಾರಿ ಇಲಾಖೆಯೊಳಗಿನ ಅಸಮಾಧಾನ ತೀವ್ರಗೊಂಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
