ವಿಜಯಪುರ:ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರು ಸೂಪರ್​ ಮಾರ್ಕೆಟ್​ನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ದೃಶ್ಯ ವೈರಲ್​ ಆಗಿದ್ದು, ಇದೇನಾ ಸಭ್ಯತೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ನಗರದ ಸೋಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್​ಗೆ ಶನಿವಾರ(ನ.26) ಸ್ನೇಹಿತೆಯೊಂದಿಗೆ ಕಾಸ್ಮೆಟಿಕ್ ಖರೀದಿಸಲೆಂದು ರಾಜೇಶ್ವರಿ ಗಾಯಕ್ವಾಡ್ ತೆರಳಿದ್ದರು. ಕಾಸ್ಮೆಟಿಕ್ ವಸ್ತುಗಳ ಪರಿಶೀಲನೆ ವೇಳೆ ಸೂಪರ್ ಮಾರ್ಕೆಟ್ ಸಿಬ್ಬಂದಿಗೂ ರಾಜೇಶ್ವರಿಗೂ ವಾಗ್ವಾದ ನಡೆದಿದೆ.
ಬಳಿಕ ಸೂಪರ್ ಮಾರ್ಕೆಟ್​ಗೆ ಬಂದ 8-10 ಮಂದಿ ಮಾಲೀಕ ಮಲ್ಲಿಕಾರ್ಜುನ್ ಉಮದಿ ಹಾಗೂ ಅವರ ಪುತ್ರ ಪ್ರಶಾಂತ್ ಮೇಲೆ ನಡೆಸಿದ್ದಾರೆ. ಸಿಟ್ಟಿಗೆದ್ದ ರಾಜೇಶ್ವರಿಯೇ ಬೆಂಬಲಿಗರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂದು ಅಂಗಡಿ ಮಾಲೀಕ ದೂರಿದ್ದಾರೆ. ಶನಿವಾರ ಸಂಜೆಯೇ ಈ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾದ ಗಲಾಟೆಯ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ.
ಇನ್ನು ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ರಾಜೇಶ್ವರಿ, ಉಮದಿ ಸೂಪರ್ ಮಾರ್ಕೆಟ್​ಗೆ ನಾನು ಹೋಗಿದ್ದು ನಿಜ. ಆದರೆ ಯಾವುದೇ ರೀತಿಯ ಗಲಾಟೆ ನಡೆದಿಲ್ಲ‌ ಎಂದಿದ್ದಾರೆ.
ಕೆಲಸ ಕೊಟ್ಟ ಮಾಲೀಕನ ಜತೆ ಲವ್ವಿಡವ್ವಿ! ಮಂಚ ಹಂಚಿಕೊಂಡ ಬಳಿಕ ಈಕೆ ಕೊಟ್ಟ ಕಾಟ ಅಷ್ಟಿಷ್ಟಲ್ಲ… ಬೆಂಗ್ಳೂರಿನ ಬಟ್ಟೆ ವ್ಯಾಪಾರಿಯ ಕಣ್ಣೀರ ಕಥೆ ಇದು

ಶಾಮಿಯಾನದ ಕಂಬ ಮುಟ್ಟಿದ ವಿದ್ಯಾರ್ಥಿ ಸಾವು: ಈಜು ಸ್ಪರ್ಧೆಗೆ ರಾಮನಗರಕ್ಕೆ ಆಗಮಿಸಿದ್ದವ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
