ಬೆಂಗಳೂರು:ಬಾಲಿವುಡ್​ನಿಂದ ಸ್ಯಾಂಡಲ್​ವುಡ್​ವರೆಗೆ ದೇಶಾದ್ಯಂತ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆಯ ಕರಾಳತೆ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಈ ನಡುವೆ ಡಿಆರ್​ಐ (ಡೈರೆಕ್ಟೋರೇಟ್​ ಆಫ್​ ರೆವಿನ್ಯೂ ಇಂಟೆಲಿಜೆನ್ಸ್​) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 13 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾದ ಡ್ರಗ್ಸ್​ ಪತ್ತೆಯಾಗಿದ್ದು ಫೋಟೋ ಫ್ರೇಮ್, ಫೋಟೋ ಅಲ್ಬಮ್‌, ಬಳೆಗಳಲ್ಲಿ. ಯಾರಿಗೂ ಅನುಮಾನ ಬಾರದಂತೆ ಬೆಂಗಳೂರು ಮಾರ್ಗವಾಗಿ ವಿದೇಶಕ್ಕೆ ಡ್ರಗ್ಸ್​ ಸಾಗಿಸಲು ದಂಧೆಕೋರರು ಫೋಟೋ ಫ್ರೇಮ್​ ಮತ್ತು ಬಳೆಗಳನ್ನೇ ಅಸ್ತ್ರವನ್ನಾಗಿಸಿಕೊಂಡ ರಹಸ್ಯ ಬಯಲಾಗಿದೆ.
ಡ್ರಗ್ಸ್​ ದಂಧೆಕೋರರು ಡ್ರಗ್ಸ್ ಸಾಗಟಕ್ಕೆ ಎಂದೇ ಫೋಟೋ ಫ್ರೇಮ್, ಫೋಟೋ ಅಲ್ಬಮ್‌ ಮತ್ತು ಬಳೆಗಳಲ್ಲಿ ಪ್ರತ್ಯೇಕ ಕಂಪಾರ್ಟ್​ಮೆಂಟ್ಸ್​ ನಿರ್ಮಿಸಿದ್ದರು. ಅದರೊಳಗೆ ಹೈ ಎಂಡ್ ಡ್ರಗ್ಸ್ ತಯಾರು ಮಾಡಲು ಬಳಸುವ ಮಾದಕ ವಸ್ತು ಇಟ್ಟು ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಆಸ್ಟ್ರೇಲಿಯಾಗೆ ರವಾನಿಸಿದ್ದರು.
ಆಸ್ಟ್ರೇಲಿಯಾಗೆ ಹೋದ ಪಾರ್ಸಲ್​ ಬಾಕ್ಸ್ ಡ್ರಗ್ಸ್​ ಎಂದು ಮಾಹಿತಿ ತಿಳಿದ ಡಿಆರ್​ಐ ಅಧಿಕಾರಿಗಳು ಬೆಂಗಳೂರು ಏರ್​ಪೋರ್ಟ್​ಗೆ ಅದನ್ನು ವಾಪಸ್​ ತರಿಸಿಕೊಂಡು ಪರಿಶೀಲಿಸಿದಾಗ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್​ ಜಾಲದ ಜಾಡು ಸಿಕ್ಕಿದೆ. ಈ ಬಾಕ್ಸ್​ನಲ್ಲಿದ್ದ ಮಾದಕ ವಸ್ತುವಿನ ಬೆಲೆ ಅಂತಾರಾಷ್ಟ್ರೀಯ ‌ಮಾರ್ಕೆಟ್​ನಲ್ಲಿ 1 ಕೆಜಿಗೆ 1 ಕೋಟಿ ರೂಪಾಯಿ!
2 ಕಿ.ಮೀ. ಓಡಾಡಿ ಸಿಕ್ಕಸಿಕ್ಕವರಿಗೆ ಇರಿದ, ರಾತ್ರಿಯಿಡೀ ಪೊಲೀಸರಿಗೂ ಟಾರ್ಚರ್​ ಕೊಟ್ಟ! ಈತನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ

ಪಿಪಿಇ ಕಿಟ್​ ಧರಿಸಿ ಬಂದ ಗೆಳೆಯನೊಂದಿಗೆ ಟೆಕ್ಕಿ ಪತ್ನಿ ಎಸ್ಕೇಪ್​! ಬೆಚ್ಚಿ ಬೀಳ್ತೀರಿ ಆಕೆಯ ಮಾಸ್ಟರ್​ ಪ್ಲ್ಯಾನ್​ ಕೇಳಿದ್ರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − one =
Remember me
