ಹುಬ್ಬಳ್ಳಿ:ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ರಾಜ್ಯದ ಪ್ರಮುಖ ಸುದ್ದಿವಾಹಿನಿ ದಿಗ್ವಿಜಯ 24*7 ನ್ಯೂಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿರುವ ವರ್ಲ್ಡ್ ಸ್ಕ್ವೇರ್​ ವಾಕಥಾನ್​ಗೆ ಚಾಲನೆ ನೀಡಲಾಗಿದೆ.
ಧಾರವಾಡ ಎಸಿಪಿ ಅನುಷಾ ಜಿ, ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ಅವರು ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರಿಬ್ಬನ್​ ಕತ್ತರಿಸುವ ಮೂಲಕ ವಾಕ್​ಥಾನ್​​ಗೆ ಚಾಲನೆ ನೀಡಿದರು.

ಇದನ್ನೂ ಓದಿರಿ:‘ಸ್ಯಾರಿ ವಾಕಥಾನ್’ನಲ್ಲಿ ಮಿಂಚಿದ ವನಿತೆಯರು
ವಿಆರ್​ಎಲ್​ ಮೀಡಿಯಾ ನಿರ್ದೇಶಕರಾದ ಶ್ರೀಮತಿ ವಾಣಿ ಸಂಕೇಶ್ವರ ಹಾಗೂ ವಿಆರ್​ಎಲ್​ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಭಾಗಿಯಾಗುವ ಮೂಲಕ ವಾಕಥಾನ್​ಗೆ ಸಾಥ್​ ನೀಡಿದ್ದಾರೆ. ​

ಮಹಿಳೆಯರ ಸಮಾನತೆಗಾಗಿ ನಡಿಗೆ ಎಂಬ ಘೋಷಣೆಯಡಿ ಇಂದು ಬೆಳಗ್ಗೆ 6.30ಕ್ಕೆ ಚನ್ನಮ್ಮ ವೃತ್ತದಿಂದ ಆರಂಭವಾಗಿರುವ ವಾಕ್​ಥಾನ್​ ದೇಸಾಯಿ ಸರ್ಕಲ್ ಮೂಲಕ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದವರೆಗೂ ಸಾಗಲಿದೆ. ವಾಕಥಾನ್​ ಉದ್ದಕ್ಕೂ ಹುಬ್ಬಳ್ಳಿಯ ಸುಳ್ಳ ಗ್ರಾಮದ ಕರಿಯಮ್ಮನದೇವಿ ಡೊಳ್ಳಿನ ಮೇಳ ಮೆರಗು ನೀಡಿದೆ.

ಶಾಹೀದ್​ ಅಫ್ರಿದಿ ಮಗಳಿಗೆ ಶಾದಿ ಭಾಗ್ಯ: ಪಾಕ್​ ಕ್ರಿಕೆಟ್​ ತಂಡದ ಆಟಗಾರನೇ ವರ!

ಕುಸಿದ ಆದಾಯ ಸಂಪನ್ಮೂಲ ಸಂಗ್ರಹದ ಸವಾಲು; ಬಜೆಟ್​ ಸರಣಿ ಲೇಖನ

ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಪಿವಿ ಸಿಂಧುಗೆ ನಿರಾಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 3 =
Remember me
