ಬೆಂಗಳೂರು:ರಾಜ್ಯದ ಪ್ರತಿಷ್ಠಿತ ಯೋಗ ಸಂಸ್ಥೆ ರಾಷ್ಟ್ರೆೊತ್ಥಾನ ಪರಿಷತ್ ಭಾನುವಾರ (ಜೂ.21) ರಾಜ್ಯಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದೆ. ವಿಜಯವಾಣಿ ಹಾಗೂ ದಿಗ್ವಿಜಯ 24X7 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
ಪ್ರತಿ ವರ್ಷ ವಿವಿಧ ಜಿಲ್ಲೆಗಳಲ್ಲಿ ಜನರ ಜತೆಗೆ ಆಚರಿಸಲಾಗುತ್ತಿತ್ತು. ಈ ವರ್ಷ ಕರೊನಾ ಕಾರಣಕ್ಕೆ ಒಟ್ಟಾಗಿ ಸೇರಲು ಅವಕಾಶ ಇಲ್ಲದಿರುವುದರಿಂದ ಆನ್​ಲೈನ್​ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕರೊನಾ ಸೋಂಕಿನ ವಿರುದ್ಧ ಹೋರಾಡಿ ಸಮಾಜ ರಕ್ಷಿಸುತ್ತಿರುವ ಕರೊನಾ ವಾರಿಯರ್​ಗಳಿಗೆ ಕಾರ್ಯಕ್ರಮವನ್ನು ಅರ್ಪಣೆ ಮಾಡಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲದೆ ಸಚಿವರಾದ ಡಾ.ಕೆ.ಸುಧಾಕರ್, ಸಿ.ಟಿ. ರವಿ ಹಾಗೂ ಸಂಸದ ತೇಜಸ್ವಿ ಸೂರ್ಯ ಶುಭ ಕೋರಿದ್ದಾರೆ.
‘ಮನೆಮನೆಯಲ್ಲಿ ಯೋಗ – ಕುಟುಂಬ ಸದಸ್ಯರೊಂದಿಗೆ ಯೋಗ’ ಈ ವರ್ಷದ ಯೋಗ ದಿನದ ಘೋಷವಾಕ್ಯವಾಗಿದೆ. ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಲಾಗಿದ್ದು, 21ರ ಬೆಳಗ್ಗೆ 6.30ರಿಂದ 7.30ರವರೆಗೆ ಯೋಗ ದಿನಾಚರಣೆ ನಡೆಯಲಿದೆ. ಆನ್​ಲೈನ್​ನಲ್ಲಿ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗುತ್ತದೆ. ನೋಂದಣಿ ಮಾಡಿಕೊಳ್ಳುವ ಮೂಲಕ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಕುಳಿತು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ವಾಟ್ಸ್​ಆಪ್​ನಲ್ಲಿ ನೋಂದಣಿ ಮಾಡಿ
ಸಾರ್ವಜನಿಕರು, ಯೋಗಾಸಕ್ತರು, ಕುಟುಂಬಗಳು, ಶಾಲಾಕಾಲೇಜುಗಳು, ಯೋಗಸಂಸ್ಥೆಗಳು ಗೂಗಲ್ ಫಾಮ್ರ್ ಹಾಗೂ ವಾಟ್ಸ್​ಆಪ್ ಸಂಖ್ಯೆಗೆ (9481170206) ಹೆಸರು, ದೂರವಾಣಿ ಸಂಖ್ಯೆ, ಸ್ಥಳ, ಪಿನ್​ಕೋಡ್,
ಭಾಗವಹಿಸುವವರ ಸಂಖ್ಯೆ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ರಾಷ್ಟ್ರೋತ್ಥಾನ ಪರಿಷತ್​ನ ಅಧಿಕೃತ ಫೇಸ್​ಬುಕ್ ಪುಟದಲ್ಲಿ ( https://www.facebook.com/rashtrotthanaparishath) ಮಾಹಿತಿ ಪಡೆಯಬಹುದು.
ಯೋಗ ದಿನಕ್ಕೆ ಆರಾಧ್ಯ ನೇತೃತ್ವ
ಬೆಂಗಳೂರು: ಯೋಗ ದಿನಾಚರಣೆ ಪ್ರಯುಕ್ತ ಭಾನುವಾರ ಆನ್​ಲೈನ್ ಮೂಲಕ ಯೋಗ ಕಾರ್ಯಕ್ರಮ ಆಯೋಜಿಸಿ ಸರಳವಾಗಿ ಆಚರಿಸಿ ಮನೆ ಮನೆಗೆ ಯೋಗ ತಲುಪಿಸಲು ಯೋಗ ಗಂಗೋತ್ರಿ ಟ್ರಸ್ಟ್ ನಿರ್ಧರಿಸಿದೆ. ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಮಾಧ್ಯಮ ಸಹಯೋಗ ವಿರಲಿದೆ. ‘ಮನೆಯಲ್ಲಿಯೇ ಯೋಗ -ಕುಟುಂಬದವರೊಂದಿಗೆ ಯೋಗ’ ಎಂಬ ಪ್ರಧಾನ ಮಂತ್ರಿಯವರ ಸಂದೇಶದನ್ವಯ ಜನರು ಮನೆಯಲ್ಲೇ ಕುಳಿತು ಯೋಗ ಕ್ರಮ ಅಭ್ಯಸಿಸಬಹುದಾಗಿದೆ. ಸುಲಭವಾಗಿ ಮಾಡಬಹುದಾದ ಅಭ್ಯಾಸ ಕ್ರಮ ವೀಕ್ಷಿಸಿ ಅಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಆಯೋಜಕರಾದ ಯೋಗ ಗಂಗೋತ್ರಿ ಸಂಸ್ಥೆಯ ಯೋಗಗುರು ಡಾ. ಎನ್. ಆರಾಧ್ಯ ತಿಳಿಸಿದ್ದಾರೆ. 21ರ ಬೆಳಗ್ಗೆ 6 ರಿಂದ 8 ಗಂಟೆವರೆಗೆ ಫೇಸ್​ಬುಕ್​ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಆಸಕ್ತರು ‘ಫೇಸ್​ಬುಕ್ ಯೋಗಗಂಗೋತ್ರಿ’ಯಲ್ಲಿ ನೇರಪ್ರಸಾರ ವೀಕ್ಷಣೆ ಮಾಡಬಹುದು.
ವಿವರಕ್ಕೆ ದೂ: 88846 46108 ಸಂರ್ಪಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
