ಬೆಂಗಳೂರು:ವಸುಧೈವ ಕುಟುಂಬಕಂ (ವಿಶ್ವವೇ ಒಂದು ಕುಟುಂಬ) ಎಂಬಂತೆ ಇಂದು ನಾವು ವಿಶ್ವಕ್ಕೆ ಯೋಗವನ್ನು ಹಂಚುತ್ತಿದ್ದೇವೆ. ಯೋಗದಿಂದ ಯಾವುದೇ ರೋಗವೂ ದೂರ ಎಂದು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರು ಹೇಳಿದರು.
ಅಂತಾರಾಷ್ಟ್ರೀಯ ಯೋಗದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯಪಾಲರು ಮಾತನಾಡಿದರು.
ಇದನ್ನೂ ಓದಿ:ಸುವರ್ಣ ವಿಧಾನ ಸೌಧದಲ್ಲಿ ನಡೆದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಫೋಟೋ ಝಲಕ್
ಕನ್ನಡಲ್ಲೇ ಎಲ್ಲರಿಗೂ ಸ್ವಾಗತ ಮಾಡಿದ ರಾಜ್ಯಪಾಲರು, ನಮ್ಮ ಗ್ರಂಥಗಳಲ್ಲಿ ಯೋಗದ ಬಗ್ಗೆ ಉಲ್ಲೇಖ ಇದೆ. ಭಾರತವನ್ನು ಯೋಗ ಗುರು ಎಂದು ಕರೆಯುತ್ತಾರೆ. ಭಾರತಕ್ಕೆ ಸೀಮಿತವಾಗಿದ್ದ ಯೋಗವನ್ನು ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದರು. ಇಂದು ಇಡೀ ವಿಶ್ವವೇ ಯೋಗದಿನವನ್ನು ಆಚರಣೆ ಮಾಡುತ್ತಿದೆ. ಯೋಗ ದಿಂದ ಮನಸ್ಸು ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ. ವಸುದೈವ ಕುಟುಂಬಕಂ ಎಂಬಂತೆ ಇಂದು ನಾವು ವಿಶ್ವಕ್ಕೆ ಯೋಗವನ್ನು ಹಂಚುತ್ತಿದ್ದೇವೆ. ಇಂದು ನಾವು ಯೋಗಕ್ಕೆ ಶ್ರಮಿಸಿದವರನ್ನು ಸ್ಮರಿಸಬೇಕು. ಯೋಗದಿಂದ ರೋಗವನ್ನು ದೂರ ಮಾಡಬಹುದು. ಎಲ್ಲರೂ ನಿತ್ಯವೂ ಯೋಗ ಮಾಡಿ ಆರೋಗ್ಯವಾಗಿರಿ ಎಂದು ರಾಜ್ಯಪಾಲರು ಹೇಳಿದರು.
ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ. ಸಾವಿರ ವರ್ಷಗಳ ಹಿಂದೇಯೆ ನಮ್ಮ ಪೂರ್ವಜರು ಬಿಟ್ಟುಹೋಗಿದ್ದಾರೆ. ಇಡೀ ವಿಶ್ವಕ್ಕೆ ಭಾರತ ಕೊಟ್ಟಿರುವ ಕೊಡುಗೆ ಇದು. ಇಡೀ ವಿಶ್ವದಲ್ಲೇ ಎಲ್ಲ ಕಡೆ ಯೋಗ ದಿನ ಆಚರಣೆ ಮಾಡ್ತಾರೆ. ಚುರುಕು, ಉತ್ಸಾಹ, ದೈಹಿಕ ಹಾಗೂ ಮಾನಸಿಕ ಶುದ್ಧೀಕರಣ ಯೋಗದಿಂದ ಸಿಗಲಿದೆ. ಇವತ್ತಿನ ದಿನಗಳಲ್ಲಿ ಕಾಯಿಲೆಗಳು ಹೆಚ್ಚಾಗಿವೆ. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತ ಹೆಚ್ಚಾಗಿದೆ. ಇದಕ್ಕೆ ಕಾರಣ ನಮ್ಮ ಜೀವನಶೈಲಿಗಳಾಗಿದೆ. ಯಾರು ಯೋಗಾಭ್ಯಾಸ ಮಾಡುತ್ತಾರೋ ಅವರಿಗೆ ಆರೋಗ್ಯ ಅನೂಕೂಲ ಹೆಚ್ಚಾಗಲಿದೆ. ನಮ್ಮ ಸರ್ಕಾರದಿಂದ ಯೋಗಕ್ಕೆ ಸಹಕಾರ ಹಾಗೂ ಪ್ರೋತ್ಸಾಹ ಮಾಡುತ್ತೇವೆ. ಶಾಲೆಗಳಿಂದಲೇ ಎಲ್ಲಾ ಕಡೆ ಯೋಗಾಭ್ಯಾಸಕ್ಕೆ ಪ್ರೋತ್ಸಾಹವನ್ನು ಸರ್ಕಾರದ ವತಿಯಿಂದಲೂ ನೀಡುತ್ತೇವೆ ಎಂದರು.
ವಿಧಾನಸಭಾ ಸ್ಪೀಕರ್​ ಯು.ಟಿ. ಖಾದರ್ ಮಾತನಾಡಿ, ಯೋಗ ಈ ದೇಶದ ಋಷಿಮುನಿಗಳು ವಿಶ್ವಕ್ಕೆ ಕೊಟ್ಟ ಕೊಡುಗೆ. ಇದನ್ನ ನಾವು ಉಳಿಸಿ ಮುಂದುವರೆಸಿಕೊಂಡು ಹೋಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಒತ್ತಡ ಬಹಳ ದೊಡ್ಡ ಸಮಸ್ಯೆಯಾಗಿದೆ. ಮಾನಸಿಕ ಕಾಯಿಲೆ ದೂರವಾಗಿಸಲು ಯೋಗ ಬಹಳ ಸಹಕಾರಿಯಾಗಿದೆ. ಪ್ರತಿ ಶಾಲೆಯಲ್ಲಿ ಪಠ್ಯ, ಚಟುವಟಿಗಳಲ್ಲಿ ಇದನ್ನ ಸೇರಿಸಬೇಕು. ಯೋಗಕ್ಕೆ ಪಠ್ಯ ಮಾಡಿ ಮಕ್ಕಳಿಗೆ ಬೋಧಿಸಬೇಕು. ಇದು ಸಚಿವರಿಗೆ ನನ್ನ ಮನವಿ ಎಂದು ಹೇಳಿದರು.
ಇದನ್ನೂ ಓದಿ:ನಾನು ಮೋದಿಯವರ ಅಭಿಮಾನಿ: ಪ್ರಧಾನಿಯನ್ನು ಕೊಂಡಾಡಿದ ಜಗತ್ತಿನ ನಂ. 1 ಶ್ರೀಮಂತ ಎಲಾನ್​ ಮಸ್ಕ್​
ವಿಧಾನಸೌಧದಲ್ಲಿ ನಡೆದ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಖ್ಯಾತ ಕ್ರೀಡಾಪಟು ಅಂಜು ಬಾಬಿ ಜಾರ್ಜ್​, ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​, ವಿಧಾನ ಪರಿಷತ್ ಸದಸ್ಯ ಶರವಣ, ಶ್ವಾಸಗುರು ವಚನಾನಂದಸ್ವಾಮೀಜಿ, ಶಾಸಕ ರಿಜ್ವಾನ್ ಹರ್ಷದ್ ಅವರು ಪಾಲ್ಗೊಂಡು ಯೋಗ ಪ್ರದರ್ಶನ ಮಾಡಿದರು.
https://www.youtube.com/watch?v=R9RH2xpst1A
ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗವು ಜಾಗತಿಕ ಚಳುವಳಿಯಾಗಿದೆ: ಪ್ರಧಾನಿ ಮೋದಿ ವಿಡಿಯೋ ಸಂದೇಶ

ಅಂತಾರಾಷ್ಟ್ರೀಯ ಯೋಗ ದಿನ: ದೇಶಾದ್ಯಂತ ಗಣ್ಯರ, ಯೋಧರ ಯೋಗ ಪ್ರದರ್ಶನದ ಝಲಕ್​ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − one =
Remember me
