ಬೆಂಗಳೂರು: ಕರೊನಾ ನಿಯಂತ್ರಣಕ್ಕಾಗಿ ನಡೆಸಲಾದ ವೈದ್ಯಕೀಯ ಪರಿಕರಗಳ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿರುವ ಕುರಿತಂತೆ ಸ್ಥಳ ಪರಿಶೀಲನೆಗೆ ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆ ಹಾಕಿರುವುದು ಅನುಮಾನಗಳಿಗೆ ಎಡೆ ಮಾಡಿದೆ.
ಆರೋಗ್ಯ ಪರಿಕರ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರವಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುವಾರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸುರಕ್ಷತಾ ಕ್ರಮಗಳ ಪರಿಶೀಲನೆ, ತನಿಖೆ ಹಾಗೂ ಸ್ಥಳ ತಪಾಸಣೆಗೆ ನಿರ್ಧರಿಸಿ ಈ ವಿಚಾರವನ್ನು 26ರಂದು ಸ್ಪೀಕರ್ ಗಮನಕ್ಕೆ ತಂದಿತ್ತು. ಎಚ್.ಕೆ. ಪಾಟೀಲ್ ಅಧ್ಯಕ್ಷತೆಯ ಸಮಿತಿ ಈ ಪತ್ರ ಕೊಟ್ಟ ದಿನವೇ ವಿಧಾನಸಭಾಧ್ಯಕ್ಷರ ಆದೇಶದಂತೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿಕಾಡಾನೆ ನಿಯಂತ್ರಣಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮನವಿ
ಆರೋಗ್ಯ ಮತ್ತು ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ರಾಜ್ಯದೊಳಗೆ ಅಥವಾ ಹೊರ ರಾಜ್ಯಗಳಲ್ಲಿ ಯಾವುದೇ ಅಧ್ಯಯನ ಪ್ರವಾಸ ಹಾಗೂ ಸ್ಥಳೀಯವಾಗಿಯೂ ಯಾವುದೇ ಭೇಟಿ ಅಥವಾ ಸ್ಥಳ ಪರಿಶೀಲನೆಗಳನ್ನು ಕೈಗೊಳ್ಳಬಾರದು ಎಂದು ತಿಳಿಸಿದ್ದರು. ಇದರ ವಿರುದ್ಧ ಸಮಿತಿ ತೀವ್ರ ಅಸಮಾಧಾನಗೊಂಡಿದೆ.
ಸ್ಪೀಕರ್ ಭೇಟಿಯಾದ ಎಚ್.ಕೆ.ಪಾಟೀಲ್
ವಿಧಾನಸಭಾಧ್ಯಕ್ಷರನ್ನು ಗುರುವಾರ ಭೇಟಿಯಾದ ಎಚ್.ಕೆ.ಪಾಟೀಲ್ ತನಿಖೆಗೆ ಅನುಮತಿ ಕೋರಿ ಮತ್ತೊಂದು ಪತ್ರ ನೀಡಿದರಲ್ಲದೆ ಸಮಿತಿಯ ತನಿಖೆ ಉದ್ದೇಶವನ್ನು ವಿವರಿಸಿದ್ದಾರೆ. ತಪಾಸಣೆಗೆ ತಡೆಯೊಡ್ಡುವುದು ಭ್ರಷ್ಟಾಚಾರಕ್ಕೆ ಪೋಷಣೆ ನೀಡಿದಂತಾಗಲಿದೆ ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿಪರಸ್ಪರ ಅಂತರದೊಂದಿಗೆ ಬೀಜ ವಿತರಿಸಿ
ಅವ್ಯವಹಾರ ಆರೋಪ
ಕರೊನಾ ನಿರ್ವಹಣೆಗೆ ಅಗತ್ಯವಾದ ಆರೋಗ್ಯ ಸುರಕ್ಷತಾ ಸಾಧನಗಳು, ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ, ಪಾರದರ್ಶಕ ಕಾಯ್ದೆ ಉಲ್ಲಂಘನೆ ಹಾಗೂ ಕಳಪೆ ರ್ಯಾಪಿಡ್ ಕಿಟ್​ಗಳ ಪೂರೈಕೆ ಆರೋಪಗಳ ಕುರಿತಾದ ದೂರುಗಳು ಸಮಿತಿಗೆ ಸಲ್ಲಿಕೆಯಾಗಿದ್ದವು. ಸಂಕಷ್ಟ ಕಾಲದಲ್ಲಿ ಪದೇ ಪದೆ ಅವ್ಯವಹಾರದ ದೂರುಗಳು ಬಂದಿರುವುದು ಗಂಭೀರವಾಗಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿ, ಈ ಕುರಿತು ಮೇ 19 ಮತ್ತು 26ರ ಸಮಿತಿ ಸಭೆಯಲ್ಲಿ ಸದಸ್ಯರೊಂದಿಗೆ ರ್ಚಚಿಸಿ ವಿಮಾನ ನಿಲ್ದಾಣ, ಆಸ್ಪತ್ರೆಗಳಿಗೆ ಭೇಟಿ, ಪರಿಕರಗಳ ಖರೀದಿ ದರ ಪರಿಶೀಲನೆ, ಇಲಾಖೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ರ್ಚಚಿಸಲು ಒಮ್ಮತ ನಿರ್ಧಾರ ಕೈಗೊಂಡಿತ್ತು.
ಲಾಕ್‌ಡೌನ್ 5.0: ಮುಖ್ಯಮಂತ್ರಿಗಳ ಜತೆ ಅಮಿತ್ ಶಾ ಮಾತುಕತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × two =
Remember me
