ರಾಷ್ಟ್ರಸಂತ ಶ್ರೀ ವಿಶ್ವೇಶ ತೀರ್ಥರ ಪಟ್ಟಶಿಷ್ಯರಾಗಿ, ಶ್ರೀಪಾದರು ವೃಂದಾವನಸ್ಥ ರಾದ ಕೊನೆಯ ಕ್ಷಣದವರೆಗೂ ಗುರುಗಳ ಸೇವೆಯಲ್ಲಿ ಸಾರ್ಥಕ್ಯ ಕಂಡಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಪೇಜಾವರ ಶ್ರೀಮಠ, ಶ್ರೀಪಾದರ ಭವ್ಯಪರಂಪರೆ, ಆದರ್ಶ ಮುನ್ನಡೆಸುವ ಸಂಕಲ್ಪ ತೊಟ್ಟಿದ್ದಾರೆ. ಕೃಷ್ಣೆ ೖಕ್ಯ ರಾದ ಶ್ರೀಗಳಿಗೆ ಬೆಂಗಳೂರಿನ ನವ ತೀರ್ಥಕ್ಷೇತ್ರ ವಾಗಿ ರೂಪುಗೊಂಡಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸೋಮವಾರ ಪ್ರಥಮ ಹಸ್ತೋದಕ ಸೇವೆ ಸಲ್ಲಿಸಿದ ಬಳಿಕ ವಿಜಯವಾಣಿಗೆ ಸಂದರ್ಶನ ನೀಡಿದ ಶ್ರೀಗಳು ತಮ್ಮ ಮುಂದಿನ ಯೋಜನೆ, ಯೋಚನೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಮಹಾರಾಧನೆ ಬಳಿಕ ವೃಂದಾವನ ನಿರ್ಮಾಣ ಸ್ವರೂಪ, ವಿನ್ಯಾಸಗಳ ಬಗ್ಗೆ ಸಂಬಂಧಪಟ್ಟವರ ಜತೆ ರ್ಚಚಿಸಿ ತೀರ್ಮಾನಿಸುತ್ತೇವೆ. 1 ವರ್ಷ ಕಾಲಾವಕಾಶವಿದೆ. ಅಷ್ಟರವರೆಗೆ ತುಳಸಿ ವೃಂದಾವನದಲ್ಲಿ ನಿತ್ಯ ತೀರ್ಥ, ಹಸ್ತೋದಕ ನೀಡಲಾಗುತ್ತದೆ. ಮಂತ್ರ ಪಠನೆ, ಪಾರಾಯಣ, ಭಜನೆ, ವಿದ್ವಾಂಸರ ಗೋಷ್ಠಿ ನಡೆಯಲಿವೆ.
ಗುರುಗಳ ವೃಂದಾವನದ ಮುಂಭಾಗದಲ್ಲೇ ವಿದ್ಯಾಮಾನ್ಯ ತೀರ್ಥರ ಮೃತ್ತಿಕಾ ವೃಂದಾವನ ನಿರ್ಮಾಣ ಮಾಡಲಾಗುವುದು. ವಾರ್ಷಿಕ ಆರಾಧನೆ ಸಂದರ್ಭದಲ್ಲಿ ಇಬ್ಬರ ಶಿಲಾವೃಂದಾವನವನ್ನೂ ಸ್ಥಾಪಿಸಲಾಗುವುದು.
ಈ ಬಗ್ಗೆ ಖಚಿತ ಮಾಹಿತಿಗಳಿಲ್ಲ. ಆದರೆ ಶ್ರೀಗಳು ರಾಮಜನ್ಮಭೂಮಿ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಗುರುಗಳು ಹಾಕಿಕೊಟ್ಟ ಹಾದಿಯಲ್ಲೇ ನಾವು ಮುನ್ನಡೆಯುತ್ತೇವೆ.
ಶ್ರೀಗಳ ಅಪೂರ್ಣ ಕಾರ್ಯಯೋಜನೆಗಳು ಅಂತೇನಿಲ್ಲ. ಪೂರ್ಣಪ್ರಜ್ಙ ವಿದ್ಯಾಪೀಠ, ಪಾಜಕ ಅನಂದ ತೀರ್ಥ ವಿದ್ಯಾಲಯ, ಮೈಸೂರಿನ ವಿದ್ಯಾರ್ಥಿ ನಿಲಯ, ಬೆಂಗಳೂರು ಸೇವಾಶ್ರಮ ಮೊದಲಾದ ಸಂಸ್ಥೆಗಳನ್ನು ಚೆನ್ನಾಗಿ ಮುನ್ನಡೆಸುವಂತೆ ಸೂಚಿಸಿದ್ದರು. ಈ ಬಗ್ಗೆ ವಿಶೇಷ ಗಮನ ಹರಿಸಲಾಗುವುದು.
ಗುರುಗಳು ಹರಿಪಾದ ಸೇರಿ ಒಂದು ದಿನ ಕಳೆದಿದೆ. ಅನಾರೋಗ್ಯ, ಪ್ರಕೃತಿ ವಿಕೋಪ, ಬರಗಾಲ ಸಮಯದಲ್ಲಿ ಅವರು ದುಡಿದಿದ್ದಾರೆ. ಹೀಗಾಗಿ ಎಲ್ಲರೂ ಸೇರಿ ಗುರುಗಳ ಪಾರ್ಥಿವ ಶರೀರಕ್ಕೆ ಅಂತ್ಯಸಂಸ್ಕಾರ ನಡೆಸಿದ್ದಾರೆ. ಸರ್ಕಾರ ಕುಶಾಲುತೋಪು ಒಳಗೊಂಡ ಗೌರವ ನೀಡಿದೆ. ಇದರ ಬಗ್ಗೆ ಹೆಮ್ಮೆಪಡುತ್ತೇವೆ. ಸರ್ಕಾರ, ಅಧಿಕಾರಿಗಳನ್ನು ನಾವು ಅಭಿನಂದಿಸುತ್ತೇವೆ. ಶ್ರೀಗಳನ್ನು ಅನುಸರಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಲಿದ್ದೇವೆ. ಎಲ್ಲರ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ.
ಶ್ರೀಗಳನ್ನು ಸದಾಕಾಲ ನೆನಪು ಮಾಡಿಕೊಳ್ಳುವ ಉದ್ದೇಶದಿಂದ ಈ ಶ್ಲೋಕ ರಚಿಸಲಾಗಿದೆ. ಇದನ್ನು ನಿತ್ಯ ಪಠಿಸುವುದರಿಂದ ಗುರುಗಳ ಹಾದಿಯಲ್ಲಿ ಸಾಗಲು ಸ್ಪೂರ್ತಿ ಲಭಿಸಲಿದೆ.
| ಗೋಪಾಲಕೃಷ್ಣ ಪಾದೂರು ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
