ಮಂಡ್ಯ:ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​, ಇನ್ಸ್​​ಟಾಗ್ರಾಂ ಹಾಗೂ ಯುಟ್ಯೂಬ್​ ಶಾರ್ಟ್ಸ್​ನಲ್ಲಿ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ ಎಂಬ ಹಾಡಿನ ತುಣುಕು ವೈರಲ್​ ಆಗಿದೆ.
ಅನೇಕರು ಈ ಹಾಡಿನ ತುಣಕನ್ನು ಇಟ್ಟುಕೊಂಡು ವಿಡಿಯೋಗಳನ್ನು ರಚಿಸುತ್ತಿದ್ದಾರೆ. ಆದರೆ, ಆ ಹಾಡಿನ ಮೂಲ ಯಾವುದು, ಯಾರು ಹಾಡಿದ್ದು, ಪೂರ್ಣ ಹಾಡು ಎಲ್ಲಿದೆ ಎಂಬುದರ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಈ ಹಾಡನ್ನು ಖ್ಯಾತ ಜಾನಪದ ಗಾಯಕ ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ ಹಾಡಿದ್ದು, ಈ ಕುರಿತು ದಿಗ್ವಿಜಯ ನ್ಯೂಸ್ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ ಸಾಂಗ್ಸ್ ವೈರಲ್ ಆಗಿದ್ದು ನನ್ನ ಸೌಭಾಗ್ಯ. ವೇಶ್ಯೆಯರು ಅರ್ಜುನನ ಸೌಂದರ್ಯವನ್ನ ವರ್ಣಿಸುವ ಸಂದರ್ಭದ ಹಾಡು ಇದಾಗಿದೆ. ಆದರೆ, ಮದುವೆ ಆಗದ ಹುಡುಗರ ಕಾಲೆಳೆಯಲು, ವ್ಯಂಗ್ಯ ಮಾಡಲು ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನಾನು ಹಾಡಿದ ಹಾಡಿಗೆ ಯುವ ಸಮೂಹ ಕುಣಿಯುತ್ತಿದೆ. 1995ರಲ್ಲಿ ಅರ್ಜುನ ಜೋಗಿ ಎಂಬ ಜಾನಪದ ಹಾಡನ್ನು ರೆಕಾರ್ಡ್ ಮಾಡಿದ್ದೆ. 28 ವರ್ಷಗಳ ಬಳಿಕ ಆ ಹಾಡಿನಲ್ಲಿ ಬರುವ ಅನ್ಯಾಯಕಾರಿ ಬ್ರಹ್ಮ ಸಾಲು ಈಗ ಫೇಮಸ್ ಆಗ್ತಿದೆ. ದ್ರೌಪದಿ ಜೊತೆ ಪಗಡೆ ಆಟದಲ್ಲಿ ಸೋತು ಅರ್ಜುನ ಜೋಗಿ ಆಗುತ್ತಾನೆ.ಈ ವೇಳೆ ವೇಶ್ಯೆಯರು ಅರ್ಜುನನ ಸೌಂದರ್ಯವನ್ನ ವರ್ಣಿಸುತ್ತಾರೆ. ಆ ಸಂದರ್ಭದಲ್ಲಿ ಅನ್ಯಾಯಕಾರಿ ಬ್ರಹ್ಮ ಈ‌ ಸುಂದರನ ಸನ್ಯಾಸಿ ಮಾಡಬಹುದೇ ಎಂಬ ಸಾಲು ಬರುತ್ತದೆ.
ಇದನ್ನೂ ಓದಿ:VIDEO| ಮಗನ ವಿರುದ್ಧ ಎಫ್​ಐಆರ್​ ದಾಖಲಿಸಲು ಪೊಲೀಸರ ಮೇಲೆ 500 ರೂ. ನೋಟುಗಳನ್ನು ಎಸೆದ ತಾಯಿ
ವೈರಲ್ ಆಗಿರುವ ಸಾಂಗ್​ಅನ್ನು ಈಗ ಕೇಳಿದ್ರೆ ಖುಷಿಯಾಗುತ್ತಿದೆ. ನನ್ನ ತಾಯಿ ಹೇಳಿಕೊಟ್ಟ ಹಾಡನ್ನ ಲಕ್ಷಾಂತರ ಜನರು ಕೇಳ್ತಿದ್ದಾರೆ. ಇದು ನನ್ನ ಸೌಭಾಗ್ಯ ಏಕೆಂದರೆ ಇಂದಿನ ಕಾಲದಲ್ಲಿ ವಯಸ್ಸಿನ ಗಂಡುಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಸರ್ಕಾರಿ ನೌಕರಿ ಇದ್ದವರಿಗೆ ಮಾತ್ರ ಹೆಣ್ಣು ಕೊಡುತ್ತಿದ್ಧಾರೆ. ಮದುವೆಯಾಗಲು ಹುಡುಗಿ ಸಿಗದೆ ನಡಂತರದಲ್ಲಿ ಹುಡುಗರು ಸಾಯ್ತಿದ್ದಾರೆ ಎಮದು ಬೇಸರಿಸಿದ್ದಾರೆ.
ಈ ಸಾಂಗನ್ನು ಯಾರೋ ಬರೆದಿರುವುದಲ್ಲ. ಇದು ಜಾನಪದ ಹಾಡಾಗಿದ್ದು, ನನ್ನ ತಾಯಿ, ಗುರುಗಳ ಬಾಯಿಂದ ಕೇಳಿ ನಾನು ಹಾಡಿದ್ದೇನೆ. ದೇಶ, ವಿದೇಶಗಳ ಜನರು ಈ ಹಾಡಿಗೆ ನೃತ್ಯ ಮಾಡಿ ಸಂತಸ ಪಡ್ತಿದ್ದಾರೆ. ಮದುವೆ ಆಗದವರು, ಹೆಣ್ಣು ಸಿಗದ ಗಂಡು ಮಕ್ಕಳಿಗೆ ಹಾಡು ಬಳಸಿ ತಮಾಷೆ ಮಾಡ್ತಿದ್ದಾರೆ. ಹಾಡು ವೈರಲ್ ಆದ ಬಳಿಕ ಸಿನೆಮಾ ಮಾಡೋದಾಗಿ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ.
ಮಹದೇಶ್ವರನ ಕೃಪೆಯಿಂದ ನಾನು ಹಾಡಿದ ಹಾಡು ಫೇಮಸ್ ಆಗ್ತಿದೆ ಎಂದು ಜಾನಪದ ಗಾಯಕ ಡಾ.ಎಂ.ಮಹದೇವಸ್ವಾಮಿ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ ಗೀತೆ ವೈರಲ್​ ಆದ ಕುರಿತು ಸಂತಸ ವ್ಯಕ್ತಪಡಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 11 =
Remember me
