ಬೆಂಗಳೂರು:ದೃಷ್ಟಿ ಸಮಸ್ಯೆ ಎದುರಿಸುವವರಿಗೆ ಬಾಹ್ಯ ಪ್ರಪಂಚದ ಅರಿವಾಗಬೇಕು ಎಂಬ ಕಲ್ಪನೆಯಲ್ಲಿ ಸಾಮಾಜಿಕ ಕಳಕಳಿಯ ತಂಡವೊಂದು ಪ್ರತಿ ವರ್ಷ ಅಂಧ ಮಕ್ಕಳಿಗೆ ಪ್ರವಾಸ ಕರೆದುಕೊಂಡು ಹೋಗುತ್ತಿದ್ದು, ಈ ಬಾರಿ ವಿಶೇಷವಾಗಿ 35 ಹೆಣ್ಣು ಅಂಧ ಮಕ್ಕಳಿಗೆ ವಿಮಾನ ಪ್ರಯಾಣದ ಅವಕಾಶ ಮಾಡಿಕೊಟ್ಟಿದೆ.
ವಾಟ್ಸಪ್ ಗ್ರೂಪ್‌ನಿಂದ ಒಟ್ಟಾದ ಎರಡು ಸಾವಿರ ಸ್ವಯಂ ಸೇವಕರನ್ನೊಳಗೊಂಡ ‘ಸ್ವೀಟ್ ನೆಸ್ ಆಫ್ ಬ್ಲೈಂಡ್ ನೆಸ್’ ಗುಂಪು ಅಂಧರಿಗಾಗಿ ವಿವಿಧ ಚಟುವಟಿಕೆ ನಡೆಸುವ ಮೂಲಕ ನೆರವಾಗುತ್ತಾ ಬಂದಿದೆ.
ಸತೀಶ್ ಎಂಬ ಇಂಜಿನಿಯರ್ ಆರಂಭದಲ್ಲಿ ಅಂಧರ ಶಾಲೆಗಳಿಗೆ ಹಾಲು ವಿತರಿಸಿ ತಮ್ಮ ಕೈಲಾದ ನೆರವು ನೀಡುತ್ತಿದ್ದರು. ನಂತರ ದೃಷ್ಟಿಹೀನ ಸಮಸ್ಯೆ ಎದುರಿಸುವವರಿಗೆ ಯಾವೆಲ್ಲ ಅಗತ್ಯವಿದೆ ಎಂದು ಹತ್ತಿರದಿಂದ ಅರಿತು, ನೆರವಾಗಲು ಆರಂಭಿಸಿದರು. ಅವರ ಆಶಯಕ್ಕೆ ಪೂರಕವಾಗಿ ದೊಡ್ಡ ತಂಡವೇ ಸೃಷ್ಟಿಯಾಯಿತು. ವಾಟ್ಸಪ್ ಮೂಲಕವೇ ಸೇರಿಕೊಂಡ ಆಸಕ್ತರು ನೂರಾರು ಚಟುವಟಿಕೆ ನಡೆಸಿಕೊಂಡು ಬಂದಿದ್ದಾರೆ.
ಈ ಗುಂಪಿನ ಸಾಮಾನ್ಯ ಚಟುವಟಿಕೆ ಎಂದರೆ, ದೈನಂದಿನ ಚಟುವಟಿಕೆಗೆ ನೆರವಾಗುವುದು ಮತ್ತು ಅಂಧರನ್ನು ಪ್ರವಾಸ ಕರೆದುಕೊಂಡು ಹೋಗಿ ಅವರಿಗೆ ಅನುಭವ ಮೂಡಿಸುವುದು. ಉಡುಪಿ, ತಿರುಪತಿ, ಧರ್ಮಸ್ಥಳ, ಹಂಪಿ, ತಾರಾಲಯ, ಜೋಗ ಜಲಪಾತ ಸೇರಿ ಹತ್ತಾರು ಪ್ರದೇಶಗಳಿಗೆ ಪ್ರವಾಸ ಕರೆದುಕೊಂಡು ಹೋಗಿ ವಿವರಣೆ ನೀಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 7 =
Remember me
